ರಾಯಬಾಗ: ಅಂತರಾಷ್ಟ್ರೀಯ ಯೋಗ ದಿನಾಚರಣೆ (ಜೂನ್ 21) ಮತ್ತು ವಿಶ್ವ ಸೈಕ್ಲಿಂಗ್ ದಿನಾಚರಣೆಯ (ಜೂನ್ 3) ಸಂಯುಕ್ತ ಅಂಗವಾಗಿ, ರಾಯಬಾಗ್ ಸೈಕ್ಲಿಂಗ್ ಕ್ಲಬ್ (RCC) ತಂಡವು “ಸುಸ್ಥಿರ ಭವಿಷ್ಯತ್ತಿಗಾಗಿ ಸೈಕ್ಲಿಂಗ್” ಎಂಬ ಘೋಷ ವಾಕ್ಯದಡಿ ಒಂದು ವಿಶಿಷ್ಟ ಮತ್ತು ಹೆಮ್ಮೆಯ ಸೈಕಲ್ ಸವಾರಿಯನ್ನು ಹಮ್ಮಿಕೊಂಡಿದೆ.
ಈ ಸವಾರಿ ದಿನಾಂಕ 21-06-2025 ರಂದು ಬೆಳಿಗ್ಗೆ ರಾಯಬಾಗ್ ನಿಂದ ಪ್ರಾರಂಭವಾಗಿ, ಪವಿತ್ರ ಕ್ಷೇತ್ರ ಪಂಢರಪುರದವರೆಗೆ ಒಟ್ಟು 190 ಕಿ.ಮೀ ದೂರವನ್ನು ಸಮರ್ಪಿತವಾಗಿ ಸಂಚರಿಸಲಿದೆ.
ಈ ಸವಾರಿಯ ಮುಖ್ಯ ಉದ್ದೇಶ:
- ಮಾಲಿನ್ಯ ಮುಕ್ತ ಜೀವನಶೈಲಿಗೆ ಪ್ರೋತ್ಸಾಹ,
- ಭಕ್ತಿ ಮತ್ತು ಶಕ್ತಿಯ ಸಂದೇಶವನ್ನು ಹರಡುವುದು,
- ಸಹಿಷ್ಣುತೆ ಮತ್ತು ಸೌಹಾರ್ದತೆಯ ಬೆಳವಣಿಗೆಗೆ ಉತ್ತೇಜನೆ ನೀಡುವುದು.
ಈ ಸೈಕ್ಲಿಂಗ್ ಯಾತ್ರೆಯಲ್ಲಿ ಭಾಗಿಯಾಗುವ ತಂಡದ ಸದಸ್ಯರುಗಳು:
- ಎಂ. ಎಂ. ಪಾಟೀಲ್ – ಹಿರಿಯ ವಕೀಲರು
- ಶಂಕರ್ ಕೊಡತೆ – ಕಚೇರಿ ಅಧೀಕ್ಷಕರು
- ಹನುಮಂತ ಟಕ್ಕನ್ನವರ – ಉಪನ್ಯಾಸಕರು
- ಸಾಗರ್ ಸಿಂತ್ರೆ – ಉಪನ್ಯಾಸಕರು
- ಮಹಾದೇವ ಧರ್ಮಟ್ಟಿ – ಔಷದ ವ್ಯಾಪಾರಿಗಳು
- ಡಾ. ಅಪ್ಪಾಸಾಬ ಹೆಗಡೆ – ಖ್ಯಾತ ದಂತ ವೈದ್ಯರು
ರಾಯಬಾಗ್ ಸೈಕ್ಲಿಂಗ್ ಕ್ಲಬ್ ಈ ವಿಶಿಷ್ಟ ಪ್ರಯತ್ನವನ್ನು ಸಮರ್ಥವಾಗಿ ರೂಪಿಸಿಕೊಂಡಿದ್ದು, ಪರಿಸರ ಸಂರಕ್ಷಣೆ ಹಾಗೂ ದೈಹಿಕ-ಮಾನಸಿಕ ಆರೋಗ್ಯದ ಪ್ರಚಾರಕ್ಕೆ ಇದು ಪ್ರೇರಣಾದಾಯಕ ಹೆಜ್ಜೆಯಾಗಲಿದೆ.