Live Stream

[ytplayer id=’22727′]

| Latest Version 8.0.1 |

Local NewsState News

ಗೋಕಾಕ: ಯೋಗ ಸಹೋದರ-ಸಹೋದರಿ ದ್ವಯರು: ಭವಿಷ್ಯದ ಯೋಗ ದೀಪಗಳು

ಗೋಕಾಕ: ಯೋಗ ಸಹೋದರ-ಸಹೋದರಿ ದ್ವಯರು: ಭವಿಷ್ಯದ ಯೋಗ ದೀಪಗಳು

 

ಗೋಕಾಕ: ಬಾಲಕರಲ್ಲಿ ಯೋಗದ ಒಲವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿ, ನಗರದ ಭಾರತಿ ವಿದ್ಯಾ ಮಂದಿರ ಹೈಸ್ಕೂಲಿನಲ್ಲಿ 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ನಾಗರಾಜ್ ಪರಶುರಾಮ್ ಮದಿಹಳ್ಳಿ ಹಾಗೂ ಅವರ ಅಕ್ಕ ಅಶ್ವಿನಿ ಪರಶುರಾಮ್ ಮದಿಹಳ್ಳಿ ರಾಷ್ಟ್ರಮಟ್ಟದ ಯೋಗ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.

 

ಅಶ್ವಿನಿ ಮದಿಹಳ್ಳಿ, ಶೆಫರ್ಡ್ ಮಿಷನ್ ಆಂಗ್ಲ ಮಾಧ್ಯಮ ಶಾಲೆಯ 7ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದು, ಯೋಗದ ಪ್ರಯಾಣವನ್ನು ಮೊದಲಿಗೆ ತಾನೇ ಆರಂಭಿಸಿ ತಮ್ಮನಿಗೂ ಪ್ರೇರಣೆಯಾಗಿ ಮುಂದಾಳುತ್ವ ವಹಿಸಿದ್ದಾರೆ. ಇಬ್ಬರೂ ಸಹೋದರ-ಸಹೋದರಿ ಕಳೆದ ಒಂದು ವರ್ಷದಿಂದ ಶ್ರದ್ಧೆಯಿಂದ ಯೋಗ ಅಭ್ಯಾಸದಲ್ಲಿ ತೊಡಗಿಸಿಕೊಂಡು ಹಲವಾರು ರಾಜ್ಯ, ಜಿಲ್ಲೆ ಮತ್ತು ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಸಾಧನೆ ಮಾಡಿದ್ದಾರೆ.

ಈ ಶ್ರೇಯಸ್ಸಿನ ಹಿಂದೆ ಕು. ಡಾ. ಭಾರ್ಗವಿ ಎಸ್.ಸಿ ಅವರ ಮಾರ್ಗದರ್ಶನ ಅಮೂಲ್ಯವಾಗಿದೆ. ಅವರು ಶಾಲೆಯ ಯೋಗ ಶಿಕ್ಷಕಿ ಆಗಿದ್ದು, ಮಕ್ಕಳಿಗೆ ನಿಯಮಿತವಾಗಿ ತರಬೇತಿ ನೀಡಿ ಅವರ ಪ್ರತಿಭೆಯನ್ನು ಜಗತ್ತಿಗೆ ಪರಿಚಯಿಸಿದ್ದಾರೆ. ಮಕ್ಕಳನ್ನು ಮಾರ್ಗದರ್ಶನ ಮಾಡುವಲ್ಲಿ ತಾಯಿ ಶಂತಾ ಪರಶುರಾಮ ಮದಿಹಳ್ಳಿ ಮತ್ತು ತಂದೆ ಪರಶುರಾಮ ಮದಿಹಳ್ಳಿ ಅವರ ಸಹಕಾರವೂ ಪ್ರಮುಖವಾಗಿದೆ.

ಇವರು ಕರ್ನಾಟಕ ಸ್ಟೇಟ್ ಅಮೆಚೂರ್ ಯೋಗಾ ಸ್ಪೋರ್ಟ್ಸ್ ಅಸೋಸಿಯೇಷನ್ ವತಿಯಿಂದ ಆಯೋಜಿಸಲಾದ “ಕರ್ನಾಟಕ ಸ್ಟೇಟ್ ಯೋಗಾಸನ ಸ್ಪೋರ್ಟ್ಸ್ ಚಾಂಪಿಯನ್‌ಶಿಪ್” ನಲ್ಲಿ ಕೂಡ ತಮ್ಮ ಪ್ರತಿಭೆಯನ್ನು ಮೆರೆದಿದ್ದಾರೆ. ಈ ಸಾಧನೆಯು ಇತರ ಮಕ್ಕಳಿಗೂ ಪ್ರೇರಣೆ ಆಗಬೇಕು ಎಂಬುದು ಎಲ್ಲರ ಆಶಯ.

 

ನಮ್ಮೂರ ಧ್ವನಿ ಸುದ್ದಿ ವಾಹಿನಿಯ ವತಿಯಿಂದ ನಾಗರಾಜ್ ಮತ್ತು ಅಶ್ವಿನಿಗೆ ಹೃತ್ಪೂರ್ವಕ ಅಭಿನಂದನೆಗಳು. ಇವರ ಯಶಸ್ಸು ಮುಂದಿನ ದಿನಗಳಲ್ಲಿ ಅಂತರಾಷ್ಟ್ರದ ಮಟ್ಟದಲ್ಲಿ ಕೀರ್ತಿ ತರುವಂತಾಗಲಿ ಎಂಬುದೇ ಎಲ್ಲರ ಹಾರೈಕೆ.

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";