ಬೆಳಗಾವಿ: ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ, ನಾಗನೂರು ಶ್ರೀ ಶಿವಬಸವೇಶ್ವರ ಟ್ರಸ್ಟ್‌ನ ಶ್ರೀಮತಿ ಚಿನ್ನಮ್ಮ ಬಿ. ಹಿರೇಮಠ ವೃದ್ಧಾಶ್ರಮ, ದೇವರಾಜ ಅರಸ್ ಕಾಲೋನಿ, ಬಸವನ ಕುಡಚಿ ಇಲ್ಲಿ ಪತಂಜಲಿ ಯೋಗ ಸಮಿತಿ, ಬೆಳಗಾವಿ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾದ 6 ದಿನಗಳ ವಿಶೇಷ ಯೋಗ ಶಿಬಿರವು ಇಂದು ಯಶಸ್ವಿಯಾಗಿ ಸಮಾರೋಪಗೊಂಡಿತು.
2025ರ ಜೂನ್ 16 ರಿಂದ 21ರ ವರೆಗೆ ಪ್ರತಿದಿನ ಬೆಳಿಗ್ಗೆ 5.30ರಿಂದ 7.00ರ ವರೆಗೆ ನಡೆದ ಈ ಶಿಬಿರದಲ್ಲಿ, ವೃದ್ಧಾಶ್ರಮದ ವಯೋವೃದ್ಧರೊಂದಿಗೆ ಸ್ಥಳೀಯರಿಗೂ ವಿವಿಧ ಯೋಗಾಭ್ಯಾಸ ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ನೀಡಲಾಯಿತು. ಪ್ರತಿದಿನ ವಿಭಿನ್ನ ಯೋಗ ನಿಪುಣರು ತರಬೇತಿಯನ್ನು ನೀಡಿದರು:
- ಮೊದಲ ದಿನ: ಪತಂಜಲಿ ಯೋಗ ಸಮಿತಿಯ ಜಿಲ್ಲಾಧ್ಯಕ್ಷ ಮೋಹನ ಬಾಗೇವಾಡಿ
- ಎರಡನೆಯ ದಿನ: ಸಮಿತಿಯ ಸದಸ್ಯ ಶಂಕರ ಕುದ್ರಿ
- ಮೂರನೆಯ ದಿನ: ಯೋಗ ಶಿಕ್ಷಕರಾದ ಭರಮಪ್ಪ ಪರಸಣ್ಣವರ್
- ನಾಲ್ಕನೆಯ ದಿನ: ಪತಂಜಲಿ ಉತ್ತರ ಕರ್ನಾಟಕ ಪ್ರಭಾರಿ ಕಿರಣ್ ಮನ್ನೋಳಕರ್
- ಐದನೆಯ ದಿನ: ಯೋಗ ಶಿಕ್ಷಕರಾದ ರಮೇಶ ಮಹಡಿಕ
- ಆರನೆಯ ದಿನ: ಪತಂಜಲಿ ಯೋಗ ಸಮಿತಿಯ ಯೋಗ ಶಿಕ್ಷಕರಾದ ದುರ್ಗಾ ಶುಕ್ಲಾ
ಈ ಶಿಬಿರದ ಕೊನೆ ದಿನವಾದ ಇಂದು, ಜೂನ್ 21ರಂದು, ಯೋಗದ ಮಹತ್ವ, ಜೀವನಶೈಲಿಯಲ್ಲಿ ಅದರ ಪಾತ್ರ ಮತ್ತು ದೈನಂದಿನ ಅಭ್ಯಾಸದ ಲಾಭಗಳ ಕುರಿತು ವಿಶೇಷ ಸಂವಾದವೂ ಜರುಗಿತು.
ಈ ಶಿಬಿರದಲ್ಲಿ, ವೃದ್ಧಾಶ್ರಮ ಮತ್ತು ಮಹಿಳಾ ಕಲ್ಯಾಣ ಸಂಸ್ಥೆ ಬೆಳಗಾವಿಯ ಸಂಯೋಜಕ ಎಂ.ಎಸ್. ಚೌಗಲಾ, ಮಹಿಳಾ ಕಲ್ಯಾಣ ಸಂಸ್ಥೆ ಬೆಳಗಾವಿಯ ಗೌರವ ಕಾರ್ಯದರ್ಶಿಗಳಾದ ಶ್ರೀಮತಿ ವೈಜಯಂತಿ ಚೌಗಲಾ, ಕಿರಣ್ ಚೌಗಲಾ, ಸುರೇಖಾ ಪಾಟೀಲ್, ವೃದ್ಧಾಶ್ರಮದ ಮೇಲ್ವಿಚಾರಕರಾದ ಅಲ್ಲಾಬಕ್ಷ, ಜಾನಕಿ, ವೃದ್ಧರು ಮತ್ತು ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು.