ಮೈಸೂರು: 11ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಏಕಲ್ ಗ್ರಾಮೋಥಾನ್ ಫೌಂಡೇಶನ್ ಸಂಸ್ಥೆಯ ಸಮಗ್ರ ಗ್ರಾಮೀಣಾಭಿವೃದ್ಧಿ ಕೇಂದ್ರ ಹಾಗೂ ಮಹಿಳಾ ಸಬಲೀಕರಣ ಉಪಕೇಂದ್ರದ ಆಶ್ರಯದಲ್ಲಿ ವಿಶೇಷ ಯೋಗ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಫೌಂಡೇಶನ್ ಅಧ್ಯಕ್ಷ ಕುಂಟೇ ಗೌಡರು ಮಾತನಾಡಿ, ಸಂಸ್ಥೆಯು ಗ್ರಾಮೀಣ ಅಭಿವೃದ್ಧಿಗೆ ನಾನಾ ಕ್ಷೇತ್ರಗಳಲ್ಲಿ ಕೈಗೊಂಡಿರುವ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು. ಸಮಿತಿ ಸದಸ್ಯ ಮಹಾದೇವಪ್ಪ ಅವರು ಯೋಗ ದಿನಾಚರಣೆ ಹಾಗೂ ಯೋಗದ ಉಪಯೋಗಗಳ ಕುರಿತು ಮನೋಜ್ಞವಾಗಿ ವಿವರಿಸಿದರು.
ಸಂಸ್ಥೆಯ ರಾಜ್ಯ ಸಂಯೋಜಕ ಗೋವಿತ್ ಕಿರಣ್ ಅವರು “ಯೋಗ ದಿನಾಚರಣೆ ಕೇವಲ ಒಂದು ದಿನದ ಆಚರಣೆ ಮಾತ್ರವಲ್ಲ, ಅದು ನಿರಂತರವಾಗಿ ಪಾಲಿಸಬೇಕಾದ ಆರೋಗ್ಯ ಸಂಸ್ಕೃತಿ” ಎಂದು ಹೇಳಿದರು. ಅವರು ಮುಂದುವರೆದು, ಮಹಿಳಾ ಸಬಲೀಕರಣದ ಸಲುವಾಗಿ ಫೌಂಡೇಶನ್ ಸಂಸ್ಥೆ ಟೈಲರಿಂಗ್ ತರಬೇತಿ, ಕಂಪ್ಯೂಟರ್ ತರಬೇತಿ ನೀಡುತ್ತಿದ್ದು, ರೈತರಿಗೆ ಸಾವಯವ ಕೃಷಿ ತರಬೇತಿ ಮತ್ತು ಮಾರ್ಗದರ್ಶನವೂ ನೀಡುತ್ತಿದೆ ಎಂದು ತಿಳಿಸಿದರು. ಇದಲ್ಲದೇ ಗದ್ದಿಗೆ ಮತ್ತು ಸುತ್ತಮುತ್ತಲಿನ ಗ್ರಾಮಗಳ ಸಮಗ್ರ ಅಭಿವೃದ್ಧಿಗಾಗಿ ನಿರಂತರ ಶ್ರಮಿಸುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಂತ್ಯದಲ್ಲಿ ಎಲ್ಲಾ ಪಾಲ್ಗೊಂಡವರು ವಿವಿಧ ಯೋಗಾಸನಗಳನ್ನು ಸಾಮೂಹಿಕವಾಗಿ ಮಾಡಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಕುಂಟೇ ಗೌಡರು, ಸಮಿತಿ ಸದಸ್ಯ ಮಹಾದೇವಪ್ಪ, ಮಹಿಳಾ ಸಮಿತಿಯ ಶಾಂತಮ್ಮ, ಜ್ಯೋತಿ, ಸ್ಥಳೀಯ ಮಹಿಳೆಯರು, ವಿದ್ಯಾರ್ಥಿಗಳು ಹಾಗೂ ಶಿಕ್ಷಕಿ ಗೀತಾ ಹಾಗೂ ಇನ್ನಿತರರು ಉಪಸ್ಥಿತರಿದ್ದರು.