ಹುಕ್ಕೇರಿ: ತಾಲೂಕು ಬೆಳ್ಳಂಕಿ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿಯ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಡಲಾಗಿದೆ. ಲೋಕೋಪಯೋಗಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರ ವಿಶೇಷ ಅನುದಾನದಲ್ಲಿ ಸುಮಾರು 20 ಲಕ್ಷ ರೂ. ವೆಚ್ಚದ ಸಿ.ಸಿ. ರಸ್ತೆ ಕಾಮಗಾರಿಗೆ ಭಾನುವಾರ ಭವ್ಯವಾಗಿ ಚಾಲನೆ ನೀಡಲಾಯಿತು.
ಕಾಮಗಾರಿಗೆ ಸಚಿವರ ಆಪ್ತ ಸಹಾಯಕ ದಯಾನಂದ ಪಾಟೀಲ ಮತ್ತು ಸ್ಥಳೀಯ ಗಣ್ಯರು ಪೂಜೆ ನೆರವೇರಿಸಿ ಚಾಲನೆ ನೀಡಿದರು. ಈ ಸಿ.ಸಿ. ರಸ್ತೆ ಕಾಮಗಾರಿ ಶ್ರೀ ಭೈರವನಾಥ ದೇವಾಲಯದ ರಸ್ತೆ ಮೇಲಾಗಿ ಹಮ್ಮಿಕೊಳ್ಳಲಾಗಿದೆ. ಇದರಿಂದ ಗ್ರಾಮಸ್ಥರಿಗೆ ಸುಗಮ ಸಂಚಾರಕ್ಕೆ ಸಾಧ್ಯವಾಗಲಿದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ದಯಾನಂದ ಪಾಟೀಲ ಅವರು, “ಬೆಳ್ಳಂಕಿ ಗ್ರಾಮದ ಪ್ರತಿಯೊಂದು ಗಲ್ಲಿಗೂ ಅಭಿವೃದ್ಧಿ ತರುವ ದೃಷ್ಟಿಯಿಂದ ಸಚಿವ ಸತೀಶ್ ಜಾರಕಿಹೊಳಿ ನಿರಂತರ ಶ್ರಮಿಸುತ್ತಿದ್ದಾರೆ. ಅವರ ಮಾರ್ಗದರ್ಶನದಲ್ಲಿ ದೇವಾಲಯದ ರಸ್ತೆ ಅಭಿವೃದ್ಧಿ ಮಾಡಲಾಗುತ್ತಿದೆ,” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಮೇಶ್ ದೇಸಾಯಿ, ಚಂದ್ರಕಾಂತ್ ಮಸಳೆ, ಸಯಾಜಿ ದೇಸಾಯಿ, ಮಾರುತಿ ಪಾಟೀಲ್, ತಾನಾಜಿ ಕಾಂಬಳೆ, ಮಾರುತಿ ಕಾಂಬಳೆ, ಗಣಪತಿ ಕಾಂಬಳೆ, ಗುತ್ತಿಗೆದಾರರು ಅಶೋಕ್ ತಳವಾಳ ಹಾಗೂ ಸಂದೀಪ್ ಮಾನೆ ಸೇರಿದಂತೆ ಹಲವಾರು ಗ್ರಾಮಸ್ಥರು ಭಾಗವಹಿಸಿದ್ದರು.
ವರದಿ: ಕಲ್ಲಪ್ಪ ಪಾಮನಾಯಿಕ್