Live Stream

[ytplayer id=’22727′]

| Latest Version 8.0.1 |

Local News

ಹಿಡಕಲ್ ಡ್ಯಾಮ್‌ನಲ್ಲಿ ಉಚಿತ ಯಕ್ಷಗಾನ ಪ್ರದರ್ಶನ

ಹಿಡಕಲ್ ಡ್ಯಾಮ್‌ನಲ್ಲಿ ಉಚಿತ ಯಕ್ಷಗಾನ ಪ್ರದರ್ಶನ

 

ಹಿಡಕಲ್ ಡ್ಯಾಮ್: ಶ್ರೀ ಮಹಾಗಣಪತಿ ಪ್ರವಾಸಿ ಯಕ್ಷಗಾನ ಮಂಡಳಿ, ಕುಂದಾಪುರ (ಹಾಲಾಡಿ, ಉಡುಪಿ ಜಿಲ್ಲೆ) ಇವರಿಂದ ಹಿಡಕಲ್ ಡ್ಯಾಮ್‌ನಲ್ಲಿ ಸಾಂಸ್ಕೃತಿಕ ವೈಭವದಿಂದ ಕೂಡಿದ ಪೌರಾಣಿಕ ಕಥಾ ಪ್ರಸಂಗದ ಯಕ್ಷಗಾನ ಪ್ರದರ್ಶನವನ್ನು ಉಚಿತವಾಗಿ ಆಯೋಜಿಸಲಾಗಿದೆ.

ಈ ಪ್ರದರ್ಶನವು ಶ್ರೀ ಶಿವಾಲಯ ಮಂದಿರ, ಹಿಡಕಲ್ ಡ್ಯಾಮ್ದಲ್ಲಿ ನಡೆಯಲಿದ್ದು, ಜೂನ್ 26, ಗುರುವಾರ ಸಂಜೆ 7 ಗಂಟೆಗೆ ಪ್ರಾರಂಭವಾಗಲಿದೆ. ಯಕ್ಷಗಾನ ಕಲೆಯ ಸೊಬಗು ಹಾಗೂ ಪೌರಾಣಿಕ ಕಥಾನಕಗಳ ಅದ್ಭುತ ಸಂಯೋಜನೆಯೊಂದಿಗೆ ಪ್ರೇಕ್ಷಕರಿಗೆ ಸಾಂಸ್ಕೃತಿಕ ರಸದೌತಣ ಒದಗಿಸುವ ಈ ಕಾರ್ಯಕ್ರಮಕ್ಕೆ ಎಲ್ಲಾ ಕಲಾಭಿಮಾನಿಗಳನ್ನು ಸ್ವಾಗತಿಸಲಾಗಿದೆ.

ಈ ಮೇಳದ ವ್ಯವಸ್ಥಾಪಕರಾಗಿ ಕೋಡಿ ವಿಶ್ವನಾಥ ಗಾಣಿಗ ಹಾಗೂ ಜಿ. ರಾಘವೇಂದ್ರ ಮಯ್ಯ ಮುಂತಾದವರು ಕಾರ್ಯ ನಿರ್ವಹಿಸುತ್ತಿದ್ದು, ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲು ಎಲ್ಲವಿಧದ ಸಿದ್ಧತೆಗಳು ಪೂರ್ಣಗೊಂಡಿವೆ.
ಯಕ್ಷಗಾನ ಕಲಾಭಿಮಾನಿಗಳು ಹಾಗೂ ಶ್ರೀ ಮಹಾಗಣಪತಿ ಭಕ್ತರು ತಮ್ಮ ಕುಟುಂಬ ಸಮೇತ ಆಗಮಿಸಿ ಈ ಸಾಂಸ್ಕೃತಿಕ ಉತ್ಸವದಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗುವಂತೆ ಆಯೋಜಕರು ವಿನಂತಿಸಿಕೊಂಡಿದ್ದಾರೆ.
ಸರ್ವರಿಗೂ ಹಾರ್ದಿಕ ಸ್ವಾಗತ!

ವರದಿ: ಚೇತನ ಡಿ.ಕೆ

ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ
+91 95905 51177

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";