Live Stream

[ytplayer id=’22727′]

| Latest Version 8.0.1 |

Local News

ಹುಕ್ಕೇರಿಯಲ್ಲಿ ಅರಿವು ಕೇಂದ್ರ ಸಲಹಾ ಸಮಿತಿ ಸದಸ್ಯರಿಗೆ ಒಂದು ದಿನದ ತರಬೇತಿ ಕಾರ್ಯಾಗಾರ

ಹುಕ್ಕೇರಿಯಲ್ಲಿ ಅರಿವು ಕೇಂದ್ರ ಸಲಹಾ ಸಮಿತಿ ಸದಸ್ಯರಿಗೆ ಒಂದು ದಿನದ ತರಬೇತಿ ಕಾರ್ಯಾಗಾರ

ಯಮಕನಮರಡಿ: ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಯ ವತಿಯಿಂದ ಹುಕ್ಕೇರಿ ತಾಲೂಕಿನ ದಡ್ಡಿ, ಬುಗಟ್ಟೆ ಆಲೂರ ಮತ್ತು ಕೆಸ್ತಿ ಗ್ರಾಮ ಪಂಚಾಯಿತಿಗಳ ಅರಿವು ಕೇಂದ್ರ ಸಲಹಾ ಸಮಿತಿ ಸದಸ್ಯರಿಗೆ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಹುಕ್ಕೇರಿ ತಾಲೂಕು ಪಂಚಾಯಿತಿ ಸಾಮರ್ಥ್ಯ ಸೌಧದಲ್ಲಿ ಆಯೋಜಿಸಲಾಯಿತು.

ಈ ಕಾರ್ಯಾಗಾರದಲ್ಲಿ ಮಾತನಾಡಿದ ಪಂಚಾಯತ್ ರಾಜ್ ಕೇಂದ್ರೀಕೃತ ತರಬೇತಿ ಸಂಯೋಜಕಿ ಉಮಾ ಎಮ್ಮಿ, “ಗ್ರಂಥಾಲಯಗಳನ್ನು ಈಗ ಸರ್ಕಾರ ಅರಿವು ಕೇಂದ್ರಗಳನ್ನಾಗಿ ಪರಿವರ್ತನೆ ಮಾಡಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಈ ಕೇಂದ್ರಗಳನ್ನು ಬೆಳಸುವ ನಿಟ್ಟಿನಲ್ಲಿ 13 ಸದಸ್ಯರ ಸಲಹಾ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿ ಪ್ರತಿಮಾಸದ ಸಭೆಗಳನ್ನು ನಡೆಸಿ, ಕೇಂದ್ರದ ಚಟುವಟಿಕೆಗಳನ್ನು ಉತ್ಕೃಷ್ಟಗೊಳಿಸಬೇಕು,” ಎಂದು ಹೇಳಿದರು.

ಅವರು ಮುಂದುವರೆದು, “ಅರಿವು ಕೇಂದ್ರಗಳು ಕೇವಲ ಪುಸ್ತಕ ಭಂಡಾರಗಳಾಗದೆ, ಗ್ರಾಮೀಯ ಇತಿಹಾಸ, ಆರೋಗ್ಯ, ಶಿಕ್ಷಣ, ಕೃಷಿ, ದೇಸಿ ಆಟಗಳು, ಸಾಂಸ್ಕೃತಿಕ ಚಟುವಟಿಕೆಗಳ ಮಾಹಿತಿಯನ್ನೂ ಒದಗಿಸಬೇಕು. ಈ ಮೂಲಕ ಗ್ರಾಮೀಣ ಸಮುದಾಯದ ಬುದ್ಧಿವಿಕಾಸಕ್ಕೆ ಪೂರಕವಾಗಬೇಕು,” ಎಂದು ಹೇಳಿದರು.

ಇದೇ ಕಾರ್ಯಕ್ರಮದಲ್ಲಿ ತರಬೇತಿ ಸಂಯೋಜಕಿ ಸಂಗೀತಾ ಮಸರಗುಪ್ಪಿ ಮಾತನಾಡಿ, “ಗ್ರಂಥಾಲಯ ಕೇವಲ ಓದುವ ಜಾಗವಲ್ಲ. ಇದು ಎಲ್ಲ ವರ್ಗದ ಜನರಿಗಾಗಿ—ಮಕ್ಕಳಿಗೆ ಬೇಸಿಗೆ ಶಿಬಿರ, ಅಂಗವಿಕಲರಿಗೆ ಓದುವ ವ್ಯವಸ್ಥೆ, ಮಹಿಳೆಯರಿಗೆ ತರಬೇತಿಗಳಂತಹ ಸವಲತ್ತುಗಳುಳ್ಳ ಸಂಪನ್ಮೂಲ ಕೇಂದ್ರವಾಗಬೇಕು. ಮಾಸದ ಮೂರನೇ ಶನಿವಾರ ಯೂಟ್ಯೂಬ್ ಮುಖಾಂತರ ಸಾರ್ವಜನಿಕ ಮಾಹಿತಿ ಕಾರ್ಯಕ್ರಮ ಕೂಡ ಇರುತ್ತದೆ,” ಎಂದು ವಿವರಿಸಿದರು.

ಅವರು ಶಾಲಾ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಹಾಗೂ ಸಾರ್ವಜನಿಕರಿಗೆ ಈ ಎಲ್ಲಾ ಕಾರ್ಯಕ್ರಮಗಳ ಮಾಹಿತಿ ತಲುಪಿಸಬೇಕೆಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಹುಕ್ಕೇರಿ ತಾಲೂಕು ವಿಷಯನಿರ್ವಾಹಕರಾದ ಕಿರಣ ಅಂಬೇಡ್ಕರ್, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.

 

ವರದಿ:ಕಲ್ಲಪ್ಪ ಪಾಮನಾಯಿಕ್

ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ
+91 95905 51177

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";