ಬೆಳಗಾವಿ: ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ, ಇತಿಹಾಸ ಉಪನ್ಯಾಸಕರ ಸಂಘ ಹಾಗೂ ಭರತೇಶ ಪದವಿ ಮಹಾವಿದ್ಯಾಲಯ ಬೆಳಗಾವಿ ಇವರ ಸಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ಭರತೇಶ ಪದವಿ ಮಹಾವಿದ್ಯಾಲಯದ ಮೌಲ್ಯಮಾಪನ ಕೇಂದ್ರದಲ್ಲಿ ಇತಿಹಾಸ ಪ್ರಾಧ್ಯಾಪಕರ ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ ಇತಿಹಾಸ ವಿಭಾಗದ ಪ್ರಾಧ್ಯಾಪಕರಾದ ಪ್ರೊ. ಶೀಲಾಧರ ಮುಗಳಿ ಮಾತನಾಡಿ, “ಭಾರತದಲ್ಲಿ ಜಾತಿ ವಿರೋಧಿ ಚಳವಳಿಗೆ ಮಹತ್ವಪೂರ್ಣ ಕೊಡುಗೆ ನೀಡಿದವರು ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧೀಜಿ. ಅವರ ಚಿಂತನೆಗಳನ್ನು ಸಂವಿಧಾನದ ಮೂಲಕ ಅಳವಡಿಸಿಕೊಳ್ಳುವುದು, ಜಾಗೃತಿ ಮೂಡಿಸುವುದು ಇಂದು ಅವಶ್ಯಕವಾಗಿದೆ” ಎಂದು ಹೈಲೈಟ್ ಮಾಡಿದರು.
ವಿಚಾರ ಸಂಕಿರಣದ ಆರಂಭದಲ್ಲಿ ಡಾ. ಸಿ.ಬಿ. ತಾಬೋಜಿ ಪ್ರಾಸ್ತಾವಿಕ ಭಾಷಣ ನೀಡಿದರು. ಈ ಸಂದರ್ಭದಲ್ಲಿ ನೆಟ್, ಸೆಟ್ ಹಾಗೂ ಪಿ.ಎಚ್.ಡಿ ಪೂರೈಸಿದ ಅಭ್ಯರ್ಥಿಗಳು ಮತ್ತು ಇತರೆ ಸಾಧಕರಿಗೆ ಸನ್ಮಾನ ಕಾರ್ಯಕ್ರಮವೂ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಕಾಲೇಜು ಇತಿಹಾಸ ಉಪನ್ಯಾಸಕರ ಸಂಘದ ಅಧ್ಯಕ್ಷ ಡಾ. ಆರ್.ಎಚ್. ಸಜ್ಜನ್ ವಹಿಸಿದ್ದರು. ವಿಶೇಷ ಆಹ್ವಾನಿತರಾಗಿ ಭರತೇಶ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಪ್ರಶಾಂತ್ ಆರ್. ಕಾಂಬಳೆ, ಉಪಾಧ್ಯಕ್ಷ ಎಸ್.ಎಮ್. ನಿಂಗನೂರ, ಕೋಶಾಧಿಕಾರಿ ಮಹೇಶ ಅಂಗಡಿ, ಡಾ. ಆರ್.ಎಸ್. ಕರ್ಕಿ, ಡಾ. ಎ.ಬಿ. ವಗ್ಗರ ಹಾಗೂ ಇತರೆ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕೆ.ಎ. ಚಂಡಿ ವಂದನಾಪೂರ್ವಕವಾಗಿ ಮಾತನಾಡಿದರು ಮತ್ತು ಕುಮಾರ ಗಾಯಕವಾಡ ನಿರೂಪಣೆ ನಿರ್ವಹಿಸಿದರು.
ವರದಿ: ಎ.ವೈ. ಸೋನ್ಯಾಗೋಳ
ಸಂಪರ್ಕ: ಸುದ್ದಿ ಹಾಗೂ ಜಾಹೀರಾತುಗಳಿಗಾಗಿ
– +91 95905 51177