Live Stream

[ytplayer id=’22727′]

| Latest Version 8.0.1 |

Local NewsState News

ಮಾದಕ ವಸ್ತುಗಳ ವಿರುದ್ಧ ಜಾಗೃತಿ: ಮಕ್ಕಳಿಗೆ ಸಂಸ್ಕಾರದ ಅಗತ್ಯತೆ ಬಗ್ಗೆ ಪ್ರೊ. ನೀಲಕಂಠ ಭೂಮಣ್ಣವರ ಸಲಹೆ

ಮಾದಕ ವಸ್ತುಗಳ ವಿರುದ್ಧ ಜಾಗೃತಿ: ಮಕ್ಕಳಿಗೆ ಸಂಸ್ಕಾರದ ಅಗತ್ಯತೆ ಬಗ್ಗೆ ಪ್ರೊ. ನೀಲಕಂಠ ಭೂಮಣ್ಣವರ ಸಲಹೆ

ಪಾಷಾಪುರ: ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್, ಹುಕ್ಕೇರಿ ವಲಯ ಹಾಗೂ ಮಹಿಳಾ ಒಕ್ಕೂಟ ಪಾಷಾಪುರ ಇವರ ಸಹಯೋಗದಲ್ಲಿ ಬಸವೇಶ್ವರ ದೇವಾಲಯದ ಅವರಣದಲ್ಲಿ “ಮಾದಕ ವಸ್ತುಗಳ ವಿರೋಧಿ ದಿನಾಚರಣೆ” ಆಚರಿಸಲಾಯಿತು.

ಕಾರ್ಯಕ್ರಮದ ಉದ್ಘಾಟನೆ ಮಾಡಿರುವ ಯಮಕನಮರಡಿ ಪಿಎಸ್‌ಐ ಆರ್.ಎಂ. ಪಾಟೀಲ ಅವರು ಮಾತನಾಡಿ, “ಮಕ್ಕಳನ್ನು ಕೇರಳಿಕೆಯ ಮಾರ್ಗದಿಂದ ದೂರ ಇಡುವುದು ಹೆತ್ತವರ ಜವಾಬ್ದಾರಿ. ಮಾದಕ ವಸ್ತುಗಳಿಂದ ಉಂಟಾಗುವ ಅಪಾಯದ ಬಗ್ಗೆ ಮಕ್ಕಳಿಗೆ ಅರಿವು ನೀಡಬೇಕು” ಎಂದು ಸಲಹೆ ನೀಡಿದರು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಾಪಕ ಪ್ರೊ. ನೀಲಕಂಠ ಭೂಮಣ್ಣವರ ಅವರು, “ಮಕ್ಕಳಲ್ಲಿ ಸದುಪಾಯ ಹಾಗೂ ಸಂಸ್ಕಾರ ಬೆಳೆಸುವುದೇ ಈ ವ್ಯಸನಗಳಿಂದ ಅವರನ್ನು ರಕ್ಷಿಸುವ ಪ್ರಮುಖ ಮಾರ್ಗ. ತಾಯಂದಿರ ಪಾತ್ರ ಇಲ್ಲಿ ಬಹುಮುಖ್ಯವಾಗಿದೆ” ಎಂದು ವಿಶ್ಲೇಷಿಸಿದರು.

ಕಾರ್ಯಕ್ರಮದಲ್ಲಿ ಹುಕ್ಕೇರಿ ಕ್ಷೇತ್ರ ಯೋಜನಾಧಿಕಾರಿಗಳಾದ ಶ್ರೀಕಾಂತ್ ನಾಯ್ಕ್, ಪಾಷಾಪುರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಅಬ್ದುಲ್ ಗಣಿ ದರ್ಗಾ, ಸದಸ್ಯರಾದ ಲಕ್ಷ್ಮೀ ದುಂಡಗಿ, ಮಹಿಳಾ ಒಕ್ಕೂಟದ ಅಧ್ಯಕ್ಷರಾದ ಮಾನಿಷಾ ಸಿಂಧೆ, ಕಾರ್ಯಕ್ರಮ ಅಧಿಕಾರಿ ಚಂದ್ರಕಾಂತ ಹಲಸಿಗಿ, ಗಂಗಾ ಅಂಬಿಗೇರ್, ಪತ್ರಕರ್ತ ನಿಲೇಶ್ ಜಡಜಂಪಿ ಹಾಗೂ ಅಂಕಲಿಗಿಯ ಪಿ.ಎಸ್.ಐ ಜಾದವ್ ಸೇರಿದಂತೆ ಮಹಿಳಾ ಸ್ವಸಾಯ ಸಂಘದ ಸದಸ್ಯರು ಹಾಗೂ ಮೇಲ್ವಿಚಾರಕರು ಉಪಸ್ಥಿತರಿದ್ದರು.

ವರದಿ: ನೀಲಕಂಠ ಭೂಮಣ್ಣವರ

ನಮ್ಮೂರ ಧ್ವನಿ ನ್ಯೂಸ್

ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ

+91 9164577143

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";