ಹುಕ್ಕೇರಿ: ಶೈಕ್ಷಣಿಕ ಕ್ಷೇತ್ರದಲ್ಲಿ ಇಂದು ತೀವ್ರ ಪೈಪೋಟಿ ಇರುವುದರಿಂದ, ವಿದ್ಯಾರ್ಥಿಗಳು ಪರೀಕ್ಷೆಗಳಿಗೆ ತಯಾರಿ ಮಾಡುವಲ್ಲಿ ‘ವಿದ್ಯಾರ್ಥಿ ಮಿತ್ರ’ ಪತ್ರಿಕೆ ಬಹುಪಾಲು ಸಹಕಾರಿಯಾಗಲಿದೆ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಶಂಕರ ಕಾಂಬಳೆ ಹೇಳಿದರು.
ತಾಲೂಕಿನ ದಡ್ಡಿ ಗ್ರಾಮದ ಶ್ರೀಮತಿ ಸುಂದರಬಾಯಿ ಬಾದುರ್ಗೆ ಪ್ರೌಢಶಾಲೆಯ ಎಸ್‌ಎಸ್‌ಎಲ್‌ಸಿ ಕನ್ನಡ ಮತ್ತು ಮರಾಠಿ ಮಾಧ್ಯಮದ ವಿದ್ಯಾರ್ಥಿಗಳಿಗೆ ‘ವಿದ್ಯಾರ್ಥಿ ಮಿತ್ರ’ ಪತ್ರಿಕೆ ವಿತರಣೆ ಸಂದರ್ಭದಲ್ಲಿ ಗುರುವಾರ ಅವರು ಮಾತನಾಡಿದರು.
“ವಿದ್ಯಾರ್ಥಿ ಮಿತ್ರ ಪತ್ರಿಕೆಯಲ್ಲಿ ಎಸ್‌ಎಸ್‌ಎಲ್‌ಸಿ ಪಠ್ಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು, ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿಯೂ ಕೂಡ ಲಭ್ಯವಿದೆ. ಈ ಪತ್ರಿಕೆ 86 ವಿದ್ಯಾರ್ಥಿಗಳಿಗೆ ವಿತರಿಸಲಾಗಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು,” ಎಂದು ಅವರು ತಿಳಿಸಿದರು.
ಶಾಲೆಯ ಮುಖ್ಯೋಪಾಧ್ಯಾಯಕ ಮಾಂತೇಶ್ ಪಾಟೀಲ ಮಾತನಾಡಿ, “ವಿದ್ಯಾರ್ಥಿಗಳ ಭವಿಷ್ಯ ಬೆಳಗಲು ಗ್ರಾ.ಪಂ ವತಿಯಿಂದ ಪತ್ರಿಕೆ ನೀಡಿರುವುದು ಶ್ಲಾಘನೀಯ. ಪಿಡಿಒ ಶಂಕರ ಕಾಂಬಳೆ, ಅಧ್ಯಕ್ಷೆ ಲಕ್ಷ್ಮಿ ನಾಯಕ್ ಹಾಗೂ ಸರ್ವ ಸದಸ್ಯರಿಗೆ ಧನ್ಯವಾದಗಳು,” ಎಂದರು.
ಪತ್ರಕರ್ತ ಕಲ್ಲಪ್ಪಾ ಪಾಮನಾಯಿಕ ಮಾತನಾಡಿ, “ಪತ್ರಿಕೆಯಲ್ಲಿ ಕೇವಲ ಎಸ್‌ಎಸ್‌ಎಲ್‌ಸಿ ವಿಷಯವಷ್ಟೇ ಅಲ್ಲದೆ, ಕೆಎಎಸ್, ಐಎಎಸ್ ಹಾಗೂ ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿಯೂ ಇದೆ. ಇದು ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ನೆರವಾಗಲಿದೆ,” ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಿ ನಾಯಕ್, ಉಪಾಧ್ಯಕ್ಷೆ ಸೀಮಾ ಗಡಕರಿ, ಸದಸ್ಯರು ನಸೀಮಾ ಬುಡ್ಡನ್ನವರ, ಸುಜಾತಾ ಕಾಂಬಳೆ, ಮುನಿರುದ್ದೀನ್ ಶೇಖ್, ಮುಖಂಡರಾದ ರಾಜು ಫೋಸರವಾಡಕರ, ಪಿತಾಂಬರ ಇಂಗವಲೆ, ಪರಶುರಾಮ್ ಪಾಮನಾಯಿಕ, ಗ್ರಾ.ಪಂ ಕಾರ್ಯದರ್ಶಿ ಯಾಸಿನ್ ಅರಳಿಕಟ್ಟಿ, ಬಸವರಾಜ ಜಾಂಬೋಟಿ ಹಾಗೂ ಶಿಕ್ಷಕರು ವಿನೋದ್ ಪಾಟೋಳಿ, ಭರಮಾ ಮಾಲಾಜಿ, ಈಶ್ವರ್ ಪಾಳೇಕರ್, ವಿಠ್ಠಲ್ ಪಾಟೀಲ, ಜಿ.ಸಿ. ಕಡೆವಾಡಿ ಹಾಗೂ ಇತರರು ಉಪಸ್ಥಿತರಿದ್ದರು.
ದಡ್ಡಿ ಗ್ರಾಮದ ಶ್ರೀಮತಿ ಸುಂದರಬಾಯಿ ಬಾದುರ್ಗೆ ಪ್ರೌಢಶಾಲೆಯಲ್ಲಿ ಪತ್ರಿಕೆ ವಿತರಣೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ವರದಿ: ಕಲ್ಲಪ್ಪ ಪಾಮನಾಯಿಕ್
ನಮ್ಮೂರ ಧ್ವನಿ ನ್ಯೂಸ್
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ
+91 9164577143