ಬೆಳಗಾವಿ: ರೋಟರಿ ಕ್ಲಬ್ ಆಫ್ ಬೆಳಗಾವಿ ದರ್ಪಣ ವತಿಯಿಂದ ಬಾಲಕಿಯರಿಗಾಗಿ ಗರ್ಭಕಂಠದ ಕ್ಯಾನ್ಸರ್ ಲಸಿಕೆ ಜಾಗೃತಿ ಅಧಿವೇಶನವನ್ನು ಶುಕ್ರವಾರ ಯಶಸ್ವಿಯಾಗಿ ಆಯೋಜಿಸಲಾಯಿತು. ಈ ಕಾರ್ಯಕ್ರಮವು ರೋಟರಾಕ್ಟ್ ಕ್ಲಬ್ ಆಫ್ ಯುವ ದರ್ಪಣ, ಇಂಟರ್ಯಾಕ್ಟ್ ಕ್ಲಬ್ ಆಫ್ ಲವ್‌ಡೇಲ್ ಸೆಂಟ್ರಲ್ ಸ್ಕೂಲ್ ಮತ್ತು ಲವ್‌ಡೇಲ್ ಸೆಂಟ್ರಲ್ ಸ್ಕೂಲ್‌ನ ಸಹಯೋಗದಲ್ಲಿ ಜರುಗಿತು.
ಅಧಿವೇಶನದ ಆರಂಭದಲ್ಲಿ ಕ್ಲಬ್ ಅಧ್ಯಕ್ಷೆ ರೂಪಾಲಿ ಜನಜ್ ಆತ್ಮೀಯ ಸ್ವಾಗತ ನೀಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಡಾ. ಅನಿತಾ ಉಮದಿ ಅವರು ಗರ್ಭಕಂಠದ ಕ್ಯಾನ್ಸರ್ ಹಾಗೂ ಮುಟ್ಟಿನ ನೈರ್ಮಲ್ಯ ನಿರ್ವಹಣೆ (MHM) ಕುರಿತು ವಿದ್ಯಾರ್ಥಿಗಳಿಗೆ ಸರಳ ಹಾಗೂ ಸೂಕ್ಷ್ಮತೆಯೊಂದಿಗೆ ಮಾಹಿತಿ ನೀಡಿದರು. ಲಸಿಕೆಯ ಅಗತ್ಯತೆ, ಸುರಕ್ಷತೆ ಹಾಗೂ ಲಾಭಗಳ ಬಗ್ಗೆ ಸ್ಪಷ್ಟತೆ ನೀಡುತ್ತಾ ವಿದ್ಯಾರ್ಥಿಗಳ ಅನುಮಾನಗಳಿಗೆ ಸಮರ್ಪಕ ಉತ್ತರಗಳನ್ನು ನೀಡಿದರು.
ಕಾರ್ಯಕ್ರಮದಲ್ಲಿ ಕಾರ್ಯಕ್ರಮದ ಅಧ್ಯಕ್ಷೆ ಅಡ್ವ. ದಿವ್ಯಾ ಮುದಿಗೌಡರ್, ಪ್ರಾಂಶುಪಾಲೆ ಶ್ರೀಮತಿ ಲಕ್ಷ್ಮಿ ಇಂಚಲ, ಇಂಟರ್ಯಾಕ್ಟ್ ಕ್ಲಬ್ ಮಾರ್ಗದರ್ಶಕಿ ಶ್ರೀಮತಿ ಚೇತನಾ, ರೋಟರಿ ಸದಸ್ಯೆ ಪ್ರೀತಿ ಮನ್ನಿಕೇರಿ ಹಾಗೂ ರೋಟರಿ ಮತ್ತು ರೋಟರಾಕ್ಟ್ ಕ್ಲಬ್‌ಗಳ ಸದಸ್ಯರು ಉಪಸ್ಥಿತರಿದ್ದರು.
ವರದಿ: ಚೇತನ ಡಿ.ಕೆ
ನಮ್ಮೂರ ಧ್ವನಿ ನ್ಯೂಸ್
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ
+91 9164577143