ಮೈಸೂರು: ಟೀಂ ಮೈಸೂರು ತಂಡದ ವತಿಯಿಂದ ಡಾಕ್ಟರ್‌ಗಳ ದಿನಾಚರಣೆ ಹಾಗೂ ಲೆಕ್ಕ ಪರಿಶೋಧಕರ ದಿನಾಚರಣೆಯ ಪ್ರಯುಕ್ತ ನಗರದ ಆದಿತ್ಯ ಅಧಿಕಾರಿ ಆಸ್ಪತ್ರೆಯಲ್ಲಿ ಗೌರವ ಸಮಾರಂಭವನ್ನು ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಖ್ಯಾತ ವೈದ್ಯರು ಹಾಗೂ ಸಮಾಜ ಸೇವಕರು ಆದ ಡಾ.ಚಂದ್ರಶೇಖರ್, ಡಾ.ಮಂಜುನಾಥ್ ಮತ್ತು ಡಾ.ಅರ್ಚನಾ ಇವರನ್ನು ಸನ್ಮಾನಿಸಲಾಯಿತು. ವೈದ್ಯಕೀಯ ಕ್ಷೇತ್ರದಲ್ಲಿ ಇವರ ಸೇವೆಯನ್ನು ಗುರುತಿಸಿ ಟೀಂ ಮೈಸೂರು ವತಿಯಿಂದ ವಿಶೇಷ ಗೌರವ ಸಲ್ಲಿಸಲಾಯಿತು.
ಅದೇ ರೀತಿ ಲೆಕ್ಕ ಪರಿಶೋಧಕರಾದ ಮಹೇಶ್ ಹಾಗೂ ಶ್ರೀಮತಿ ತೇಜಸ್ವಿನಿ ರವರಿಗೂ ಅವರ ವೃತ್ತಿಪರ ನಿಷ್ಠೆ ಹಾಗೂ ಸಮಾಜಮುಖಿ ಚಟುವಟಿಕೆಗಳ ಹಿನ್ನೆಲೆಯಲ್ಲಿ ಗೌರವ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಟೀಂ ಮೈಸೂರಿನ ಪ್ರಮುಖ ಸದಸ್ಯರಾದ ಗೋಕುಲ್ ಗೋವರ್ಧನ್, ಯಶವಂತ್ ಕುಮಾರ್, ಕಿರಣ್ ಜೈರಾಮ್ ಗೌಡ, ಹಿರಿಯಣ್ಣ, ಮನೋಹರ್, ಹರೀಶ್ ಶೆಟ್ಟಿ, ಮುರುಳಿ, ನಾಗೇಂದ್ರ, ಗಣೇಶ್, ಶಿವಶಂಕರ್, ಸಂತೋಷ್, ರಾಘವೇಂದ್ರ, ಶ್ರೀಮತಿ ಶಾಂತಕುಮಾರಿ, ಶ್ರೀಮತಿ ಸುಧಾ ಮುರಳಿ ಮತ್ತು ಕುಮಾರಿ ವರ್ಷಿಣಿ ಅವರು ಉಪಸ್ಥಿತರಿದ್ದರು.
ಈ ರೀತಿಯ ಕಾರ್ಯಕ್ರಮಗಳು ವೈದ್ಯರು ಮತ್ತು ಲೆಕ್ಕ ಪರಿಶೋಧಕರ ಸೇವೆಯನ್ನು ಸಮಾಜದ ಮುಂದಿಟ್ಟು, ಇತರರಿಗೂ ಪ್ರೇರಣೆಯಾದಂತೆ ಮಾಡುತ್ತವೆ ಎಂದು ತಂಡದ ಸದಸ್ಯರು ಅಭಿಪ್ರಾಯಪಟ್ಟರು.
ವರದಿ: ಚೇತನ ಡಿ.ಕೆ
ನಮ್ಮೂರ ಧ್ವನಿ ನ್ಯೂಸ್
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ
+91 9164577143