ಬರ್ಮಿಂಘಮ್: ಅಂತಾರಾಷ್ಟ್ರೀಯ ಯೋಗ ದಿನಾಚರಣೆ–2025 ಅನ್ನು ಜೂನ್ 21 ರಂದು ಭಾರತ ಸರ್ಕಾರದ ಬರ್ಮಿಂಘಮ್ ದೂತವಾಸ ಕಚೇರಿ ಆಶ್ರಯದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು. “ಒಂದು ಆರೋಗ್ಯ, ಒಂದು ಭೂಮಿ” ಎಂಬ ಘೋಷವಾಕ್ಯದೊಂದಿಗೆ ಬರ್ಮಿಂಘಮ್‌ನ ವಿಕ್ಟೋರಿಯಾ ಚೌಕ್‌ನಲ್ಲಿ 400ಕ್ಕೂ ಅಧಿಕ ಯೋಗಾಭ್ಯಾಸಿಗಳು ಭಾಗಿ ನಡೆದ ಈ ಯೋಗೋತ್ಸವ, ದೇಹ-ಮನಸ್ಸಿನ ಏಕತೆಯ ಸ್ಪಷ್ಟ ಚಿತ್ರಣ ನೀಡಿತು.
ಕಾರ್ಯಕ್ರಮವನ್ನು ದೂತಾವಾಸದ ಕಾನ್ಸಲ್ ಜನರಲ್ ಡಾ.ವೆಂಕಟಾಚಲಂ ಮೂರುಗನ್ ಉದ್ಘಾಟಿಸಿದರು. ಲಾರ್ಡ್ ಲೆಫ್ಟಿನೆಂಟ್ ಡೆರಿಕ್ ಆಂಡರ್ಸನ್ ಮತ್ತು ಉಪಮೇಯರ್ ನಿತೀಶ್ ರಾವತ್ ಅವರು ಸಾಂಸ್ಕೃತಿಕ ಬಾಂಧವ್ಯದ ಮಹತ್ವವನ್ನು ಉಲ್ಲೇಖಿಸಿದರು.
ಯೋಗಪಾಠವನ್ನು ಡಾ.ಮಧು ಗೌಡ, ಮೇರಿಯಾ ಸಿಂಪ್ಸನ್ ಮತ್ತು ಎಪ್ರಿಲ್ ಲೂಯಿಸ್ ನೇತೃತ್ವದಲ್ಲಿ ನಡೆಸಿದರು. ತಾಡಾಸನದಿಂದ ಪ್ರಾಣಾಯಾಮದವರೆಗೆ ನಡೆದ ಸಂಯಮಿತ ಯೋಗ ಕ್ರಿಯೆಗಳು ಮತ್ತು ಶ್ಲೋಕ ಪಠನದಿಂದ ಶಾಂತತೆ ಹರಡಿದವು. ಕನ್ನಡಿಗರ ಮಕ್ಕಳ ತಂಡವು ಚಂದ್ರನಮಸ್ಕಾರ ಪ್ರದರ್ಶನ ನೀಡಿ ಸಾಂಸ್ಕೃತಿಕ ವೈಭವವನ್ನೂ ಹೆಚ್ಚಿಸಿದರು.
ಈ ಕಾರ್ಯಕ್ರಮದ ವಿಶೇಷ ಕ್ಷಣಗಳಲ್ಲಿ ಮೇರಿಯಾ ಅವರ ಜನ್ಮದಿನಕ್ಕೆ ಮಕ್ಕಳ ಸಂಸ್ಕೃತ ಶುಭಾಶಯ, ಮಕ್ಕಳ ಉತ್ಸಾಹದ ಯೋಗ ಪ್ರದರ್ಶನ ಮತ್ತು ಮಿಡ್ಲೆಂಡ್ಸ್ ಕನ್ನಡಿಗರ 30 ಸದಸ್ಯರ ಶ್ರದ್ಧಾಭರಿತ ಭಾಗವಹಿಸುವಿಕೆ ಗಮನಸೆಳೆದವು.
ಕಾರ್ಯಕ್ರಮ ಯಶಸ್ವಿಯಾಗಿ ನಡೆಸಿಕೊಟ್ಟ ಭಾರತೀಯ ದೂತವಾಸ ಕಚೇರಿ, ಹಾಗೂ ಬ್ರಹ್ಮಕುಮಾರೀಸ್, ಆರ್ಟ್ ಆಫ್ ಲಿವಿಂಗ್, ಹಾರ್ಟ್‌ಫುಲ್‌ನೆಸ್, ಶಿವೋಧಾಮ್ ಯುಕೆ, ಮಿಡ್ಲ್ಯಾಂಡ್ಸ್ ಕನ್ನಡಿಗರು ಯುಕೆ ಸೇರಿ ಅನೇಕ ಸಂಸ್ಥೆಗಳಿಗೆ ಧನ್ಯವಾದಗಳು ಸಲ್ಲಿಸಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ ಮಿಡ್ಲೆಂಡ್ಸ್ ಕನ್ನಡಿಗರಿಗೆ ಗೌರವಪತ್ರವನ್ನು ನೀಡಿ ಸಮುದಾಯದ ಶ್ರಮಕ್ಕೆ ಗೌರವ ನೀಡಲಾಯಿತು.
ಈ ಯೋಗೋತ್ಸವದ ಮೂಲಕ ಮನುಷ್ಯತ್ವ, ಶಾಂತಿ ಮತ್ತು ಏಕತೆಯ ಪರಿಪೂರ್ಣ ಚಿತ್ರಣ ಮೂಡಿಬಂದಿತು. “ವಸುಧೈವ ಕುಟುಂಬಕಮ್” ಎಂಬ ಸಂಸ್ಕೃತ ಘೋಷವಾಕ್ಯದ ಜೀವಂತ ಉದಾಹರಣೆಯಾಗಿ ಈ ಯೋಗೋತ್ಸವ ನೆನಪಿನಲ್ಲಿ ಉಳಿಯುತ್ತದೆ.
ವರದಿ – ಶ್ರೀಶೈಲ ಶಿವಪುತ್ರಪ್ಪ ಸಂಗೊಳ್ಳಿ
ರಾಯಲ್ ಲೀಮಿಂಗ್ಟನ್ ಸ್ಪಾ,
ಮಿಡ್ಲೆಂಡ್ಸ್ ಕನ್ನಡಿಗರು ಯುಕೆ
ನಮ್ಮೂರ ಧ್ವನಿ ನ್ಯೂಸ್
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ
+91 9164577143