ಭಾರತದ ಮಹಾಕಾವ್ಯ ‘ರಾಮಾಯಣ’ ಆಧಾರಿತವಾಗಿ ನಿರ್ಮಿಸಲಾಗುತ್ತಿರುವ ಬಹು ನಿರೀಕ್ಷಿತ ಸಿನಿಮಾ ಇದೀಗ ಟೀಸರ್ ಮೂಲಕವೇ ಧೂಳೆಬ್ಬಿಸಿದೆ. ಈ ಚಿತ್ರದಲ್ಲಿ ಕನ್ನಡದ ಸ್ಟಾರ್ ನಟ ಯಶ್ ರಾವಣನಾಗಿ ಭರ್ಜರಿ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಗೆಟಪ್ ಹಾಗೂ ಅಭಿನಯ ಈಗಾಗಲೇ ಅಭಿಮಾನಿಗಳ ಗಮನ ಸೆಳೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಚಿತ್ರದಲ್ಲಿ ರಾಮನ ಪಾತ್ರಕ್ಕೆ ಬಾಲಿವುಡ್ ನಟ ರಣಬೀರ್ ಕಪೂರ್ ಆಯ್ಕೆಯಾಗಿದ್ದಾರೆ. ಸೀತೆಯಾಗಿ ದಕ್ಷಿಣ ಭಾರತದ ನಟಿ ಸಾಯಿ ಪಲ್ಲವಿ ಅಭಿನಯಿಸುತ್ತಿದ್ದು, ಹನುಮನ ಪಾತ್ರದಲ್ಲಿ ಸನ್ನಿ ಡಿಯೋಲ್ ಮಿಂಚಲಿದ್ದಾರೆ. ಅತ್ಯಾಧುನಿಕ ವಿಎಫ್ಎಕ್ಸ್ ತಂತ್ರಜ್ಞಾನದ ಸಹಾಯದಿಂದ ದೃಶ್ಯ ವೈಭವದಿಂದ ತುಂಬಿರುವ ಈ ಸಿನಿಮಾ, ರಾಮಾಯಣದ ಕಥೆಯನ್ನು ಹೊಸ ತಲೆಮಾರಿಗೆ ಪರಿಚಯಿಸುವ ಗುರಿಯೊಂದಿಗೆ ಬರಲಿದೆ.
ಈ ಬೃಹತ್ ಬಜೆಟ್ ಚಿತ್ರದ ನಿರ್ಮಾಪಕನಾಗಿ ನಮುತ್ ಮಲ್ತಾ ಕೆಲಸ ನಿರ್ವಹಿಸುತ್ತಿದ್ದಾರೆ. ಪ್ರಪಂಚದ ಒಂಬತ್ತು ಪ್ರಮುಖ ನಗರಗಳಲ್ಲಿ ಟೀಸರ್ ಬಿಡುಗಡೆಯನ್ನು ಭವ್ಯವಾಗಿ ಆಯೋಜಿಸಿದ್ದು, ನ್ಯೂಯಾರ್ಕ್ನ ಟೈಮ್ಸ್ ಸ್ಕ್ವೇರ್ನಲ್ಲೂ ವಿಶೇಷ ಪರದೆಯಲ್ಲಿ ಟೀಸರ್ ಪ್ರದರ್ಶನ ನಡೆಯಿತು. ಈ ಮೂಲಕ ಚಿತ್ರವು ಜಾಗತಿಕ ಮಟ್ಟದಲ್ಲಿ ಧ್ಯಾನ ಸೆಳೆಯಲು ಸಜ್ಜಾಗಿದೆ ಎನ್ನಬಹುದು.
ಈ ಯೋಜನೆಯ ಸಹ ನಿರ್ಮಾಪಕರಾಗಿರುವ ಯಶ್, ತಮ್ಮ ಮತ್ತೊಂದು ಸಿನಿಮಾ ‘ಟಾಕ್ಸಿಕ್’ ಜೊತೆಜೊತೆಗೆ ರಾಮಾಯಣದ ಚಿತ್ರಕ್ಕೂ ಮಹತ್ವ ನೀಡುತ್ತಿದ್ದಾರೆ. ಟೀಸರ್ ನೋಡಿ ಜನರು ಚಿತ್ರದಲ್ಲಿ ಬಳಸಿರುವ ವಿಸ್ಮಯಕರ ವಿಎಫ್ಎಕ್ಸ್ ಬಗ್ಗೆ ಶ್ಲಾಘೆ ವ್ಯಕ್ತಪಡಿಸುತ್ತಿದ್ದಾರೆ.
ಚಿತ್ರದ ವಿಸುಯಲ್ ಎಫೆಕ್ಟ್ಸ್ ಕಾರ್ಯವನ್ನು ಡಿಎನ್ ಇಜಿ ಮತ್ತು ರೆಡಿಫೈನ್ ಕಂಪನಿಗಳು ನಿರ್ವಹಿಸುತ್ತಿವೆ. ಮೊದಲ ಭಾಗ 2026ರಲ್ಲಿ ತೆರೆಗೆ ಬರಲಿದ್ದು, ಎರಡನೇ ಭಾಗ 2027ರಲ್ಲಿ ಬಿಡುಗಡೆಯಾಗಲಿದೆ. ಸಂಗೀತದಾರನಾಗಿ ಎ.ಆರ್. ರೆಹಮಾನ್ ಅವರು ಈ ಚಿತ್ರಕ್ಕೆ ಶ್ರವಣ ಸುಖವನ್ನು ನೀಡುತ್ತಿದ್ದಾರೆ.
ವರದಿ: ಚೇತನ ಡಿ.ಕೆ
ನಮ್ಮೂರ ಧ್ವನಿ ನ್ಯೂಸ್
ಸುದ್ದಿ ಅಥವಾ ಜಾಹೀರಾತಿಗಾಗಿ ಸಂಪರ್ಕಿಸಿ:
+91 91645 77143