ಬೆಳಗಾವಿ: ಇತ್ತೀಚೆಗೆ ನಡೆದ ರಾಷ್ಟ್ರಮಟ್ಟದ ಚಾರ್ಟರ್ಡ್ ಅಕೌಂಟೆಂಟ್ (ಸಿ.ಎ.) ಪರೀಕ್ಷೆಯಲ್ಲಿ ಬೆಳಗಾವಿಯ ಅಣ್ಣಾಸಾಹೇಬ (ಕಿರಣ) ಪಾಟೀಲ ಅವರು ಶ್ಲಾಘನೀಯ ಅಂಕಗಳನ್ನು ಪಡೆದು ಯಶಸ್ವಿಯಾಗಿ ಉತ್ತೀರ್ಣರಾಗಿದ್ದಾರೆ.
ಅನ್ನಾಸಾಹೇಬ ಪಾಟೀಲ ಅವರಿಗೆ ಬೆಳಗಾವಿಯ ಖ್ಯಾತ ಲೆಕ್ಕಪರಿಶೋಧಕರಾದ ಕುಂತುಸಾಗರ ಹರದಿ ಹಾಗೂ ಜಗದೀಶ ಕಾಮಕರ ಅವರಿಂದ ಮಾರ್ಗದರ್ಶನ ದೊರೆತಿದ್ದು, ಅವರ ಪ್ರೇರಣೆ ಮತ್ತು ಬೆಂಬಲ ಈ ಸಾಧನೆಗೆ ಸಹಕಾರಿಯಾಗಿದೆ.
ಅವರ ಈ ಸಾಧನೆಗೆ ಕುಟುಂಬಸ್ಥರು, ಗುರುಗಳು ಹಾಗೂ ಸ್ನೇಹಿತರು ಅಭಿನಂದನೆ ಸಲ್ಲಿಸಿದ್ದಾರೆ. ಯುವರನ್ನು ಪ್ರೇರಣೆಯತ್ತ ಕೊಂಡೊಯ್ಯುವಂತ ಈ ಸಾಧನೆಯು, ನಿಶ್ಚಯ ಮತ್ತು ಪರಿಶ್ರಮದಿಂದ ಯಾವುದೇ ಗುರಿಯನ್ನು ತಲುಪಬಹುದು ಎಂಬುದಕ್ಕೆ ಸಾಕ್ಷಿಯಾಗಿದೆ.
ವರದಿ: ಚೇತನ ಡಿ.ಕೆ
ನಮ್ಮೂರ ಧ್ವನಿ ನ್ಯೂಸ್
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ
+91 9164577143