ಧಾರವಾಡ: ಸಾಲದ ಹಣ ಕೇಳಿದ ವಿಚಾರಕ್ಕೆ ಜಗಳವಾಯ್ದು ಚಾಕು ಇರಿತದಿಂದ ಯುವಕನೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ಧಾರವಾಡ ನಗರದ ಕಂಠಿಗಲ್ಲಿಯಲ್ಲಿ ನಿನ್ನೆ ಸಂಜೆ ನಡೆದಿದೆ. ಈ ಹೃದಯವಿದ್ರಾವಕ ಘಟನೆಯಿಂದ ಸ್ಥಳೀಯರು ಬೆಚ್ಚಿ ಬೀಳಿದ್ದು, ಆರೋಪಿಯ ಬಂಧನಕ್ಕಾಗಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಘಾಯಗೊಂಡ ಯುವಕನನ್ನು ಕಂಠಿಗಲ್ಲಿಯ ನಿವಾಸಿ ರಾಘವೇಂದ್ರ ಗಾಯಕವಾಡ (25) ಎಂದು ಗುರುತಿಸಲಾಗಿದ್ದು, ಆತನ ಬೆನ್ನಿಗೆ ಚಾಕು ಇರಿತದಿಂದ ತೀವ್ರ ಗಾಯವಾಗಿದೆ. ಆರೋಪಿಯಾಗಿರುವ ಮಲ್ಲೀಕ್ ಎಂಬಾತನು ಚಾಕುವಿನಿಂದ ದಾಳಿ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾನೆ.
ಪ್ರಾಥಮಿಕ ಮಾಹಿತಿಯಂತೆ, ಮಲ್ಲೀಕ್ ಅವರು ರಾಘವೇಂದ್ರನ ಅಣ್ಣನಿಗೆ ಮೊದಲು ಸಾಲ ನೀಡಿದ್ದು, ಹಣವನ್ನು ಹಿಂದಕ್ಕೆ ಪಡೆಯಲು ರಾಘವೇಂದ್ರ ಮನೆಗೆ ತೆರಳಿದ್ದಾನೆ. ಈ ಸಂದರ್ಭದಲ್ಲಿ ಅವರಿಬ್ಬರ ನಡುವೆ ಮಾತಿನ ಚಕಮಕಿ ಉಂಟಾಗಿ, ಕ್ಷಣಾರ್ಧದಲ್ಲಿ ಆಕ್ರೋಶಕ್ಕೆ ಒಳಗಾದ ಮಲ್ಲೀಕ್, ರಾಘವೇಂದ್ರನ ಬೆನ್ನಿಗೆ ಚಾಕು ಇರಿದು ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ಘಟನೆಯಲ್ಲಿ ರಾಘವೇಂದ್ರನ ಬೆನ್ನಿಗೆ ಅರ್ಧ ಕಟ್ ಆದ ಚಾಕುವೇ ಉಳಿದುಕೊಂಡಿದ್ದು, ಉಳಿದ ಭಾಗ ನೆಲಕ್ಕೆ ಬಿದ್ದಿದೆ. ಗಾಯಗೊಂಡ ರಾಘವೇಂದ್ರನನ್ನು ತಕ್ಷಣವೇ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿಸಲಾಗಿದ್ದು, ಅವನ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಘಟನೆ ಬಗ್ಗೆ ಮಾಹಿತಿ ದೊರಕುತ್ತಿದ್ದಂತೆ ಧಾರವಾಡ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಡಿಸಿಪಿ ರವೀಶ್, ಎಸಿಪಿ ಪ್ರಶಾಂತ ಸಿದ್ಧನಗೌಡ ಹಾಗೂ ಉಪನಗರ ಠಾಣೆಯ ಇನ್‌ಸ್ಪೆಕ್ಟರ್ ದಯಾನಂದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಕುರಿತು ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಆರೋಪಿ ಮಲ್ಲೀಕ್ ಬಂಧನೆಗೆ ಪೊಲೀಸ್ ಪಡೆ ಬಲೆ ಬೀಸಿದೆ.
ವರದಿ: ಚೇತನ ಡಿ.ಕೆ
ನಮ್ಮೂರ ಧ್ವನಿ ನ್ಯೂಸ್
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ
+91 9164577143