ಹುಕ್ಕೇರಿ: ತಾಲೂಕಿನ ಹಿಡಕಲ್ ಡ್ಯಾಮ್‌ನಲ್ಲಿರುವ ದೂದನಾನಾ ವಿಕಾಸ ಸಂಸ್ಥೆಯ ಬುದ್ಧಿಮಾಂದ್ಯ ವಿಕಲಚೇತನ ವಿಶೇಷ ಶಾಲೆಯಲ್ಲಿ ಮಾಜಿ ಸಚಿವರಾದ ಎ.ಬಿ. ಪಾಟೀಲ ಅವರ 73ನೇ ಜನ್ಮದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಹಿಡಕಲ್ ಡ್ಯಾಮಿನ ಗೆಳೆಯರ ಬಳಗ ಹಾಗೂ ಎ.ಬಿ. ಪಾಟೀಲ್ ಅಭಿಮಾನಿ ಬಳಗದ ವತಿಯಿಂದ ಈ ವಿಶೇಷ ಶಾಲೆಯ ಮಕ್ಕಳಿಗೆ ಸಿಹಿ ಮತ್ತು ಹಣ್ಣು-ಹಂಪಲು ವಿತರಿಸುವ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.
ಗಣ್ಯರ ಉಪಸ್ಥಿತಿ:
ಈ ಸಂದರ್ಭದಲ್ಲಿ ಯುವ ಧುರೀಣರು ಹಾಗೂ ಸಮಾಜ ಸೇವಕರಾದ ರಾಜು ಗಲಾಟೆ, ಪ್ರಮೋದ ಚೌಗಲಾ, ರಾಜು ಮುಲ್ತಾನಿ, ಮಹೇಶ ಹಂಜಿ, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಾರುತಿ ಹೊಸಮನಿ, ಗ್ರಾಮ ಪಂಚಾಯಿತಿ ಸದಸ್ಯ ಸದಾನಂದ ಮಾಳ್ಯಾಗೋಳ, ಹಾಗೂ ಕಾರ್ಯಕರ್ತರಾದ ಶಿವಲಿಂಗ ನೇಸರ್ಗಿ, ಮಹೇಶ ಹಂಜಿ, ಶ್ಯಾಮಲಾ ಹೊಸಮನಿ, ಗುರುಸಿದ್ಧ ಮೂಡಲಗಿ, ಅಲ್ಬರ್ಟ್ ಬ್ರುಟ್ಟೋ, ರಮೇಶ ಹುರುಳಿ, ನಿಸಾರ್ ಶೇಖ್, ಸಂಜು ಕಿಣಗಿ, ಅರ್ಜುನ ನೇಸರಗಿ, ದೀಪಾ ಪತ್ತಾರ, ಎ.ಎಮ್. ಇನಾಮದಾರ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಹಿಡಕಲ್ ಡ್ಯಾಮ್, ಹೊಸಪೇಟೆ, ಹಟ್ಟಿ ಆಲೂರ ಮುಂತಾದ ಗ್ರಾಮಗಳ ಕಾರ್ಯಕರ್ತರು ಮತ್ತು ಬುದ್ಧಿಮಾಂದ್ಯ ವಿಶೇಷ ವಿಕಲಚೇತನ ಶಾಲೆಯ ಸಿಬ್ಬಂದಿ ವರ್ಗದವರು ಸಹ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಹಿಡಕಲ್ ಡ್ಯಾಮಿನ ಶ್ರೀ ಬಸವೇಶ್ವರ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಅರ್ಥಶಾಸ್ತ್ರ ಉಪನ್ಯಾಸಕ ಎ.ವೈ. ಸೋನ್ಯಾಗೋಳ ಕಾರ್ಯಕ್ರಮವನ್ನು ನಿರೂಪಿಸಿದರು.
ವರದಿ: ಎ.ವೈ. ಸೋನ್ಯಾಗೋಳ
ಸುದ್ದಿ ಹಾಗೂ ಜಾಹೀರಾತುಗಳಿಗಾಗಿ ಸಂಪರ್ಕಿಸಿ
+91 9164577143