ಅಥಣಿ : ತಾಲೂಕಿನ ಮಹಿಷವಾಡಗಿ ಗ್ರಾಮದ ವೈದ್ಯ ಡಾ. ಆನಂದ ಉಪಾಧ್ಯಾಯ ಅವರನ್ನು ಅಪಹರಿಸಿ ಕ್ರೂರವಾಗಿ ಹಲ್ಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಜುಲೈ 10ರಂದು ಸವದಿ ಗ್ರಾಮದಲ್ಲಿ ನಡೆದ ಈ ಘಟನೆಯು ತಾಲೂಕಿನಲ್ಲಿ ಭೀತಿಯ ವಾತಾವರಣವನ್ನು ಉಂಟುಮಾಡಿದೆ.
ವಿವರಗಳ ಪ್ರಕಾರ, ಶಾಲಾ ಕ್ಯಾಂಪ್‌ನಿಂದ ವಾಪಸ್ಸಾಗುತ್ತಿದ್ದ ಡಾ. ಆನಂದ ಅವರನ್ನು ಅಪಹರಿಸಿ, ಸುಮಾರು ಎರಡು ಗಂಟೆಗಳ ಕಾಲ ಚಿತ್ರಹಿಂಸೆಗೊಳಪಡಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣವೇ ಬೆಳಗಾವಿಯ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ವಿವಾದದ ಹಿನ್ನೆಲೆ ಏನು?
ಡಾ. ಆನಂದ ಉಪಾಧ್ಯಾಯ ಅವರು ಶ್ರೀ ಪದ್ಮಾವತಿ ಇಂಟರ್‌ನ್ಯಾಷನಲ್ ಸ್ಕೂಲ್‌ನ ಸಂಸ್ಥಾಪಕರಾಗಿದ್ದು, ತೇಲಿ ಕುಟುಂಬದೊಂದಿಗೆ 2018ರಲ್ಲಿ ಈ ಶಾಲೆಯು ಆರಂಭಗೊಂಡಿತು. ಬಳಿಕ ಹಣಕಾಸಿನ ವಿಷಯದಲ್ಲಿ ಉಂಟಾದ ವ್ಯತ್ಯಾಸದಿಂದಾಗಿ ಡಾಕ್ಟರ್ ಆನಂದ ಅವರು ತೇಲಿ ಕುಟುಂಬಕ್ಕೆ 1.80 ಕೋಟಿ ರೂಪಾಯಿ ನೀಡಿ ಶಿಕ್ಷಣ ಸಂಸ್ಥೆಯಿಂದ ಹಿಂತೆಗೆದುಕೊಂಡರು. ಈ ಪ್ರಕರಣ ಈಗ ಹೈಕೋರ್ಟ್‌ನಲ್ಲಿದೆ.
ಆರೋಪಿಗಳು ಹಣೆಸರಿಯಾಗಿಲ್ಲ:
ಅಪಹರಣ ಹಾಗೂ ಹಲ್ಲೆಯ ಬಗ್ಗೆ ಡಾ. ಆನಂದ ಅವರ ಕುಟುಂಬದಿಂದ ತಕ್ಷಣವೇ ಅಥಣಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಪ್ರಕರಣ ದಾಖಲಾದರೂ, ಈವರೆಗೂ ಆರೋಪಿಗಳ ಬಂಧನವಾಗದಿರುವುದು ಸಾರ್ವಜನಿಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
ಸ್ಥಳೀಯರು ಮತ್ತು ವೈದ್ಯರ ಸಂಘಟನೆಗಳು ಪೊಲೀಸರು ಗಂಭೀರತೆಗೆ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸುತ್ತಿದ್ದು, ನ್ಯಾಯಕ್ಕಾಗಿ ಪ್ರತಿಭಟನೆ ನಡೆಸುವ ಸಾಧ್ಯತೆ ಇದೆ.
ಪೋಲೀಸರಿಂದ ಸ್ಪಷ್ಟನೆ ನಿರೀಕ್ಷೆ:
ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವಂತೆಯೇ, ಹೆಚ್ಚಿನ ಮಾಹಿತಿಗಾಗಿ ಪೋಲೀಸರು ತನಿಖೆ ನಡೆಸುತ್ತಿದ್ದಾರೆ. ಆದರೂ ಪ್ರಕರಣದಲ್ಲಿ ಬಂಧನ ಅಥವಾ ಸ್ಪಷ್ಟ ವರದಿ ಬರದಿರುವುದು ಪ್ರಶ್ನೆಗಳಿಗೆ ಗ್ರಾಸವಾಗಿದೆ.
ವರದಿ: ಚೇತನ ಡಿ.ಕೆ
ನಮ್ಮೂರ ಧ್ವನಿ ನ್ಯೂಸ್
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ
+91 9164577143