ಹಿಡಕಲ್ ಡ್ಯಾಂ: ದುರ್ಬಲರ ಸೇವೆಯನ್ನು ಮಾಡುವುದು ಕೇವಲ ಮಾನವೀಯ ಕರ್ತವ್ಯವಲ್ಲಾ ಅದು ದೇವರ ಪ್ರಾಪ್ತಿಗೆ ದಾರಿ ಎಂದು ಹಿಡಕಲ್ ಡ್ಯಾಂ ಸಂತ ಮಿಖಾಯಲ್ ಚರ್ಚಿನ ಫಾದರ್ ಲೂರ್ದಸ್ವಾಮಿ ಅಭಿಪ್ರಾಯಪಟ್ಟರು, ಚರ್ಚ್ ಮೂಲಕ ಹುಕ್ಕೇರಿಯ ಮಹಿಳಾ ಕಲ್ಯಾಣ ಸಂಸ್ಥೆಯ ಶಕ್ತಿ ಸದನ ಮಹಿಳಾ ಪುನರ್ವಸತಿ ಕೇಂದ್ರದ ಫಲಾನುಭವಿಗಳಿಗೆ ಬಟ್ಟೆ ಹಾಗೂ ಹೊದಿಕೆ ವಿತರಿಸಿ ಮಾತನಾಡಿದರು
ಸಮಾಜದಲ್ಲಿ ಅಸಹಾಯಕರಿಗೆ ನೇರವಾಗುವ ಮೂಲಕ ನಾವು ಸಂಘ ಸಂಸ್ಥೆಗಳಿಗೆ ಸಹಕರಿಸಬೇಕು, ಸಮಾಜಮುಖಿ ಕಾರ್ಯಗಳಿಗೆ ಪ್ರೋತ್ಸಾಹಿಸುವುದು ಇಂದಿನ ಅಗತ್ಯತೆಯಿದೆ ತನ್ಮೂಲಕ ನಾವು ನೈತಿಕ ಹಾಗೂ ಆತ್ಮಶುದ್ದಿ ಸಾಧಿಸಲು ಸಹಾಯಕವಾಗುತ್ತದೆ ಎಂದರು.
ಅತಿಥಿಯಾಗಿ ಭಾಗವಹಿದ ಮಕ್ಕಳ ಸಾಹಿತ್ಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷರು ಡಾ. ಪ್ರಕಾಶ ಹೊಸಮನಿ ಮಾತನಾಡಿ ಮಕ್ಕಳಿಗೆ ಉಚಿತ ಪುಸ್ತಕ, ಕಲಿಕಾಸಾಮಗ್ರಿ, ಹುಟ್ಟುಹಬ್ಬದ ನಿಮಿತ್ಯ ಅನ್ನದಾನ, ಮುಂತಾದವುಗಳನ್ನು ಮಾಡುವ ಮೂಲಕ ನಮ್ಮ ಸಂತೋಷ ವನ್ನು ಹೆಚ್ಚಿಸಿಕೊಳ್ಳಬೇಕೆಂದರು.
ಇನ್ನೊರ್ವ ಅತಿಥಿ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಚಾರ್ಯ ಕಿರಣ ಚೌಗಲಾ ಮಾತನಾಡಿ, ಬಡಜನರಿಗೆ ಸೇವೆಮಾಡುವುದು ಕೇವಲ ಸರಕಾರದ, ಸ್ವಯಂ ಸೇವಾ ಸಂಸ್ಥೆಗಳ ಜವಾಬ್ದಾರಿಯಾಗಿರದೇ ಸಮುದಾಯದ ಸಹಬಾಗಿತ್ವ ಅಗತ್ಯವೆಂದರು.
ಗ್ರಾಮಪಂಚಾಯಿತ ಸದಸ್ಯರಾದ ಇರ್ಪಾದ ಕಿಲ್ಲದಾರ, ಅಧ್ಯಕ್ಷರು ಶ್ರೀಮತಿ ರೇಣುಕಾ ಬೂದಿಹಾಳ, ಪಾತ್ರಕರ್ತರಾದ ಎ ಎಂ ಕರನಾಚಿ, ಜಾನ್ ಬುಕ್ಕ ಉಪಸ್ಥಿತರಿದ್ದರು.
ಶಕ್ತಿಸದನ ಕೇಂದ್ರದ ಶ್ರೀಮತಿ ಸುಗಂದಾ ವೆತಾಶಿ ಕಾರ್ಯಕ್ರಮನಿರ್ವಹಿಸಿ ಸ್ವಾಗತಿಸಿದರು ಶ್ರೀಮತಿ ದ್ರಾಕ್ಷಿಯಿಣಿ ಮಠಪತಿ ವಂದಿಸಿದರು.
ವರದಿ: ಚೇತನ ಡಿ.ಕೆ
ನಮ್ಮೂರ ಧ್ವನಿ ನ್ಯೂಸ್
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ
+91 9164577143