ಮೈಸೂರು: ಮೈಸೂರು ಜಿಲ್ಲೆಯ ಐವಿಡಿ ಗದ್ದಿಗೆ ಸಮೀಪದ ಏಕಲ್ ಗ್ರಾಮೋತ್ಥಾನ ಪ್ರತಿಷ್ಠಾನ ಕೇಂದ್ರದಲ್ಲಿ, ಮೈಸೂರು ಮಿಡ್‌ಟೌನ್‌ನ ಇನರ್ ವೀಲ್ ಕ್ಲಬ್ ಸಹಯೋಗದಲ್ಲಿ ಉಚಿತ ಹೊಲಿಗೆ ಯಂತ್ರ ಮತ್ತು ವೀಲ್‌ಚೇರ್ ವಿತರಣಾ ಕಾರ್ಯಕ್ರಮವನ್ನು ಸೋಮವಾರ ಏರ್ಪಡಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಇನರ್ ವೀಲ್ ಕ್ಲಬ್ ಆಫ್ ಮೈಸೂರಿನ ಅಧ್ಯಕ್ಷೆ ಶ್ರೀಮತಿ ಸಂಧ್ಯಾ ಸುರೇಶ್ ಮಾತನಾಡಿ, ಈ ತರಹದ ಉಪಕ್ರಮಗಳು ಗ್ರಾಮೀಣ ಮಹಿಳೆಯರಿಗೆ ಆರ್ಥಿಕವಾಗಿ ಸ್ವಾವಲಂಬಿಗಳಾಗಲು ದಾರಿ ತೆರೆಯುತ್ತವೆ ಎಂದರು. ಅವರು ಮಹಿಳಾ ಸಬಲೀಕರಣದ ಮಹತ್ವವನ್ನು ವಿವರಿಸಿದರು.
ಇದೇ ಸಂದರ್ಭದಲ್ಲಿ ಏಕಲ್ ಗ್ರಾಮೋತ್ಥಾನ ಪ್ರತಿಷ್ಠಾನದ ರಾಜ್ಯ ಸಂಯೋಜಕರಾದ ಗೋವಿತ್ ಕಿರಣ್ ಮಾತನಾಡಿ, ಟೈಲರಿಂಗ್ ತರಬೇತಿಗಳು ಮಹಿಳೆಯರ ಸ್ವಾಭಿಮಾನ ಹಾಗೂ ಆರ್ಥಿಕ ಅಭಿವೃದ್ಧಿಗೆ ಒತ್ತಾಸೆಯಾಗುತ್ತವೆ ಎಂದು ಹೇಳಿದರು. ಇಂಥ ತರಬೇತಿ ಕೇಂದ್ರಗಳು ಗ್ರಾಮೀಣ ಸಮಾಜದ ಪ್ರಗತಿಗೆ ದಾರಿದೀಪವಾಗುತ್ತವೆ ಎಂಬ ನಂಬಿಕೆಯನ್ನು ಅವರು ವ್ಯಕ್ತಪಡಿಸಿದರು.
ಕಾರ್ಯಕ್ರಮದ ವೇಳೆ ಏಕಲ್ ಪ್ರತಿಷ್ಠಾನದ ಅಧ್ಯಕ್ಷರಾದ ಕುಂಟೇಗೌಡರು, ಫಲಾನುಭವಿಗಳ ಪೋಷಕರು, ತರಬೇತಿ ಪಡೆದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದ ಮೂಲಕ ಮಹಿಳಾ ಸಬಲೀಕರಣಕ್ಕೆ ನೂತನ ಚಲನಶಕ್ತಿ ದೊರೆತಿದ್ದು, ಗ್ರಾಮೀಣ ಪ್ರದೇಶದ ಬದುಕಿನಲ್ಲಿ ಹೊಸ ಭರವಸೆ ಮೂಡಿಸಿದೆ.
ವರದಿ: ಚೇತನ ಡಿ.ಕೆ
ನಮ್ಮೂರ ಧ್ವನಿ ನ್ಯೂಸ್
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ
+91 9164577143