ಚಿಕ್ಕೋಡಿ: ನಗರದ ಪ್ರಸಿದ್ಧ ಮಕ್ಕಳ ಆಸ್ಪತ್ರೆಯ ಮುಖ್ಯಸ್ಥರಾದ ಡಾ. ಬಿ.ವಿ. ಚೌಗಲಾ ಅವರ 71ನೇ ಹುಟ್ಟುಹಬ್ಬವನ್ನು ಭಿನ್ನ ರೀತಿಯಲ್ಲಿ, ಸಮಾಜಮುಖಿ ಚಟುವಟಿಕೆಗಳೊಂದಿಗೆ ಆಚರಿಸಲಾಯಿತು.
ಸಂಜೀವಿನಿ ಅನಾಥ ಮಕ್ಕಳ ಆಶ್ರಮದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ, ಆಶ್ರಮದ ಮಕ್ಕಳಿಗೆ ಉಚಿತ ಆರೋಗ್ಯ ತಪಾಸಣೆ ನಡೆಸಿ, ಅಗತ್ಯ ಔಷಧಿಗಳನ್ನು ವಿತರಿಸಲಾಯಿತು. ಮಕ್ಕಳಲ್ಲಿ ಆರೋಗ್ಯ ಜಾಗೃತಿಯನ್ನು ಮೂಡಿಸುವ ಸಲುವಾಗಿ ವಿಶೇಷ ಮಾರ್ಗದರ್ಶನ ನೀಡಲಾಯಿತು. ಜೊತೆಗೆ, ಉಪಹಾರ ಮತ್ತು ಹಣ್ಣು ಹಂಪಲುಗಳನ್ನು ವಿತರಿಸಿ ಮಕ್ಕಳಲ್ಲಿ ಸಂತೋಷ ತುಂಬಲಾಯಿತು. ಆಶ್ರಮದ ಮಕ್ಕಳು ಡಾ. ಚೌಗಲಾ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳನ್ನು ತಿಳಿಸಿದರು.
ಇದೇ ಸಂದರ್ಭದಲ್ಲಿ, ಡಾ. ಚೌಗಲಾ ಲಕ್ಷ್ಮಿ ಲೀಲಾ ಅನಾಥ ಮತ್ತು ವೃದ್ಧಾಶ್ರಮಕ್ಕೂ ಭೇಟಿ ನೀಡಿ, ಅಲ್ಲಿನ ಹಿರಿಯ ಜೀವಿಗಳಿಗೂ ಉಚಿತ ಆರೋಗ್ಯ ತಪಾಸಣೆ ಮಾಡಿ, ಅಗತ್ಯ ಔಷಧಿಗಳನ್ನು ವಿತರಿಸಿದರು. ವೃದ್ಧಾಶ್ರಮದ ನಿವಾಸಿಗಳ ಕುಶಲೋಪರಿ ವಿಚಾರಿಸಿ, ಅವರಿಗೆ ನೈತಿಕ ಧೈರ್ಯ ತುಂಬುವ ಕಾರ್ಯವನ್ನು ನೆರವೇರಿಸಿದರು.
ಈ ಕಾರ್ಯಕ್ರಮದಲ್ಲಿ ಡಾ. ಚೌಗಲಾ ಅವರ ಮಗಳು ಡಾ. ಪ್ರಿಯಾಂಕಾ ಅಭಿಷೇಕ್ ರಾಯಕರ್, ಅಳಿಯ ಡಾ. ಅಭಿಷೇಕ್ ರಾಯಕರ್, ಮೊಮ್ಮಗಳು ಆದ್ಯ, ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಶ್ರೀಶೈಲ ಕೋಲಾರ್, ಶ್ರೀಮತಿ ವಿಜಯಲಕ್ಷ್ಮಿ ಕೋಲಾರ್, ಸಂಜೀವಿನಿ ಆಶ್ರಮದ ಮುಖ್ಯಸ್ಥ ಓಂಕಾರ್ ಕಟ್ಟಿಮನಿ, ಲಕ್ಷ್ಮಿ ಲೀಲಾ ವೃದ್ಧಾಶ್ರಮದ ಮುಖ್ಯಸ್ಥ ರಂಜಿತ್ ಕೇನಿ ಹಾಗೂ ಆಶ್ರಮದ ಮಕ್ಕಳು ಮತ್ತು ಹಿರಿಯರು ಉಪಸ್ಥಿತರಿದ್ದರು.
ವರದಿ: ಚೇತನ ಡಿ.ಕೆ
ನಮ್ಮೂರ ಧ್ವನಿ ನ್ಯೂಸ್
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ
+91 9164577143