ಬೆಳಗಾವಿ: ಅಥಣಿ ತಾಲೂಕಿನ ಕೃಷ್ಣಾ ಕಿತ್ತೂರು ಗ್ರಾಮದ ಸರಕಾರಿ ಪ್ರಾಥಮಿಕ ಮರಾಠಿ ಶಾಲೆಯಲ್ಲಿ ಕನ್ನಡ ಭಾಷೆ ಬೋಧಕರಾಗಿ ಕಾರ್ಯನಿರ್ವಹಿಸುತ್ತಿದ್ದ ಸಂಜಯ ಇಚಲಕರಂಜಿ ಅವರು ಸೇವಾ ನಿವೃತ್ತಿ ಹೊಂದಿದ್ದಾರೆ. ಮೂರು ದಶಕಗಳ ಕಾಲ ಶಾಲಾ ಶಿಕ್ಷಣ ಇಲಾಖೆಯಲ್ಲಿ ಪ್ರಾಮಾಣಿಕ ಹಾಗೂ ನಿಷ್ಠೆಯ ಸೇವೆ ಸಲ್ಲಿಸಿ ಸಾವಿರಾರು ಮಕ್ಕಳ ಬಾಳಲ್ಲಿ ಶಿಕ್ಷಣದ ನಂದಾದೀಪ ಹಚ್ಚಿದ ಅವರು, ವಿವಿಧ ಶಾಲೆಗಳಲ್ಲಿ ಸೇವೆ ಸಲ್ಲಿಸಿ ಗೌರವದ ಸ್ಥಾನಕ್ಕೇರಿದವರು.
ಈ ನೆಲೆಯಲ್ಲಿ ಇಚಲಕರಂಜಿ ಅವರಿಗೆ ಶಾಲೆಯ ವತಿಯಿಂದ ಬೀಳ್ಕೊಡುಗೆ ನೀಡಲಾಯಿತು. ಹಿರಿಯ ಶಿಕ್ಷಕ, ಸಾಹಿತಿ ಹಾಗೂ ಸಂಘಟಕರಾದ ಬಸವರಾಜ ಫಕೀರಪ್ಪ ಸುಣಗಾರ ಅವರು ಅಭಿನಂದನಾ ಭಾಷಣ ನೀಡುತ್ತಾ, “ಮಕ್ಕಳೆಮ್ಮಗೆ ಜೀವ-ಬದುಕು ಎಂದು ಭಾವಿಸಿ ಶೈಕ್ಷಣಿಕ ಕ್ಷೇತ್ರದಲ್ಲಿ ಸಂಪೂರ್ಣ ನಿಷ್ಠೆಯಿಂದ ಸೇವೆ ಸಲ್ಲಿಸಿದ್ದಾರೆ. ಅವರು ಮಾಡಿದ ಸೇವೆ ಇವರ ಹೆಗ್ಗಳಿಕೆಯಾಗಿದೆ,” ಎಂದು ಪ್ರಶಂಸಿಸಿದರು.
ಸಂಜಯ ಇಚಲಕರಂಜಿಯವರು ತಮ್ಮ ಸೇವಾ ಆರಂಭವನ್ನು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಆರಂಭಿಸಿ, ನಂತರ ಬೆಳಗಾವಿ ತಾಲೂಕಿನ ಹಾಲಗಿಮರಡಿ ಹಾಗೂ ಕಾಗವಾಡ ತಾಲೂಕಿನ ಮೊಳೆ ಗ್ರಾಮದ ಶಾಲೆಗಳಲ್ಲಿ ಕಾರ್ಯನಿರ್ವಹಿಸಿದ್ದರು. ಅವರ ಶೈಕ್ಷಣಿಕ ಸೇವೆಯ ಕೊನೆಯ ದಟ್ಟಣಿಯಾಗಿರುವ ಕೃಷ್ಣಾ ಕಿತ್ತೂರು ಶಾಲೆಯಿಂದ ಅವರು ನಿವೃತ್ತಿಯಾಗಿದ್ದಾರೆ.
ಸಮಾರಂಭದಲ್ಲಿ ವಿವಿಧ ಶಿಕ್ಷಕರು, ಹಳೆಯ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಭಾಗವಹಿಸಿ ಅವರು ಸಲ್ಲಿಸಿದ ಸೇವೆಯನ್ನು ಸ್ಮರಿಸಿ ಅಭಿನಂದಿಸಿದರು.
ಸಂಜಯ ಇಚಲಕರಂಜಿಯವರು ಬೆಳಗಾವಿ ನಗರ ಕೇಂದ್ರ ಗ್ರಂಥಾಲಯದ ಗ್ರಂಥಪಾಲಕರಾಗಿ ಸೇವೆ ಸಲ್ಲಿಸುತ್ತಿರುವ ಯುವ ಉತ್ಸಾಹಿ ಪ್ರಕಾಶ ಇಚಲಕರಂಜಿಯವರ ಸಹೋದರರಾಗಿದ್ದಾರೆ.
ಬೀಳ್ಕೊಡುಗೆ ಸಂದರ್ಭದಲ್ಲಿ ಅವರ ಮುಂದಿನ ನಿವೃತ್ತಿ ಜೀವನ ಸಂತೋಷಪೂರ್ಣವಾಗಿರಲಿ, ದೇವರು ಅವರಿಗೆ ಆಯುರಾರೋಗ್ಯ, ಭಾಗ್ಯ ಹಾಗೂ ಸಕಲ ಐಶ್ವರ್ಯ ನೀಡಿ ಕಾಪಾಡಲಿ ಎಂಬ ಪ್ರಾರ್ಥನೆಗಳು ವ್ಯಕ್ತವಾದವು. ನಿವೃತ್ತಿ ನಂತರವೂ ಅವರು ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಹಸಿರುಭವಿಷ್ಯ ಕಟ್ಟಲಿ ಎಂಬ ಹಾರೈಕೆಗಳು ವ್ಯಕ್ತಗೊಂಡವು.
ವರದಿ: ಚೇತನ ಡಿ.ಕೆ
ನಮ್ಮೂರ ಧ್ವನಿ ನ್ಯೂಸ್
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ
+91 9164577143