ಬೆಳಗಾವಿ: ನಗರದ ಅಂಗಡಿ ತಾಂತ್ರಿಕ ಮತ್ತು ವ್ಯವಸ್ಥಾಪನಾ ಮಹಾವಿದ್ಯಾಲಯದಲ್ಲಿ ಎಸಿಎಂ ವಿದ್ಯಾರ್ಥಿ ಅಧ್ಯಾಯವು ಇತ್ತಿಚೆಗೆ ಸೈಬರ್‌ಸೆಕ್ಯುರಿಟಿ ಕುರಿತು ಎರಡು ದಿನಗಳ ತರಬೇತಿ ಕಾರ್ಯಾಗಾರವನ್ನು ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಥೀಟಾ ಡೈನಾಮಿಕ್ಸನ ಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಪ್ರೊ. ಗಜೇಂದ್ರ ದೇಶಪಾಂಡೆ, ಎಸಿಎಂ ಭಾರತದ ಪ್ರಖ್ಯಾತ ಸ್ಪೀಕರ ಮತ್ತು ಬೆಳಗಾವಿ ಎಸಿಎಂ ಅಧ್ಯಾಯದ ಅಧ್ಯಕ್ಷರು, ಪ್ರಕಾಶ ಕಾರೇಕರ, ಪ್ರಾದೇಶಿಕ ಸಂಯೋಜಕರು, ಎಸಿಎಂ ಮತ್ತು ಸಾಫ್ಟವೇರ ಎಂಜಿನೀಯರ್ ಐಸಿಇಸಿ ಸೈಬರ್ ಸೆಕ್ಯುರಿಟಿ ಸೊಲ್ಯೂಷನ್ಸ್ ಪ್ರೈ.ಲಿಮಿಟೆಡ್, ಅನಿಕೇತನ ಜೋಶಿ, ತಂತ್ರಾoಶ ಅಭಿಯಂತರರು, ಐಸ್ಯಾಕ್ ಸೈಬರ ಸೆಕ್ಯುರಿಟಿ ಸೊಲ್ಯೂಷನ್ಸ್ ಪ್ರೈ.ಲಿಮಿಟೆಡ್, ಇವರು ಆಗಮಿಸಿದ್ದರು.
ವಿಶೇಷವಾಗಿ ಕ್ಯುರೆಟೆಡ್ ತರಬೇತಿ ಕಾರ್ಯಕ್ರಮವು ಭಾಗವಹಿಸುವವರನ್ನು ಸೈಬರ್ ಸುರಕ್ಷತೆಯ ಪ್ರಮುಖ ಪರಿಕಲ್ಪನೆಗಳಿಗೆ ಪರಿಚಯಿಸಿತು ಮತ್ತು ವಿವಿಧ ಸೈಬರ್ ಸೆಕ್ಯುರಿಟಿ ಪರಿಕರಗಳು ಮತ್ತು ತಂತ್ರಗಳೊoದಿಗೆ ಅನುಭವವನ್ನು ನೀಡಿತು.
ನೈಜ-ಪ್ರಪಂಚದ ಸೈಬರ್ ಸುರಕ್ಷತೆ ಸವಾಲುಗಳು, ಬೆದರಿಕೆ ನಿರ್ವಹಣಾ ಕಾರ್ಯತಂತ್ರಗಳು ಮತ್ತು ರಕ್ಷಣಾ ಕಾರ್ಯವಿಧಾನಗಳ ಬಗ್ಗೆ ವಿದ್ಯಾರ್ಥಿಗಳು ವಿಮರ್ಶಾತ್ಮಕ ಒಳನೋಟಗಳ ಕುರಿತು ಜ್ಞಾನವನ್ನು ಪಡೆದರು. ಉದ್ಯಮದ ಬೇಡಿಕೆಗಳಿಗೆ ತಮ್ಮ ಸನ್ನದ್ಧತೆಯನ್ನು ಗಮನಾರ್ಹವಾಗಿ ಹೆಚ್ಚಿಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಾಗಾರದಲ್ಲಿ ಅಂಗಡಿ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ರಾಜು ಜೋಶಿ, ಪ್ರಾಚಾರ್ಯ ಡಾ. ಆನಂದ ಭೀ. ದೇಶಪಾಂಡೆ, ಗಣಕಯಂತ್ರ ವಿಭಾಗದ ಮುಖ್ಯಸ್ಥೆ ಹಾಗೂ ಎಐಟಿಎಂ ಎಸಿಎಂ ಸ್ಟುಡೆಂಟ ಚಾಪ್ಟರ್‌ನ ಫ್ಯಾಕುಲ್ಟಿ ಅಡ್ವೆöÊಸರ್ ಡಾ. ಧನಶ್ರೀ ಕುಲಕರ್ಣಿ, ಎಐಟಿಎಂ ಎಸಿಎಂ ಸ್ಟುಡೆಂಟ ಚಾಪ್ಟರ್‌ನ ಫ್ಯಾಕುಲ್ಟಿ ಸಂಯೋಜಕ ಹಾಗೂ ಎಲ್ಲ ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪೋಟೊ ಶಿರ್ಷಿಕೆ: ಬೆಳಗಾವಿ ನಗರದ ಅಂಗಡಿ ತಾಂತ್ರಿಕ ಮತ್ತು ವ್ಯವಸ್ಥಾಪನಾ ಮಹಾವಿದ್ಯಾಲಯದಲ್ಲಿ ಎಸಿಎಂ ವಿದ್ಯಾರ್ಥಿ ಅಧ್ಯಾಯವು ಇತ್ತಿಚೆಗೆ ಸೈಬರ್‌ಸೆಕ್ಯುರಿಟಿ ಕುರಿತು ಎರಡು ದಿನಗಳ ತರಬೇತಿ ಕಾರ್ಯಾಗಾರವು ನೆರವೇರಿತು. ಸಂಪನ್ಮೂಲ ವ್ಯಕ್ತಿಗಳಾಗಿ ಥೀಟಾ ಡೈನಾಮಿಕ್ಸನ ಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಪ್ರೊ. ಗಜೇಂದ್ರ ದೇಶಪಾಂಡೆ, ಎಸಿಎಂ ಭಾರತದ ಪ್ರಖ್ಯಾತ ಸ್ಪೀಕರ ಮತ್ತು ಬೆಳಗಾವಿ ಎಸಿಎಂ ಅಧ್ಯಾಯದ ಅಧ್ಯಕ್ಷರು, ಪ್ರಕಾಶ ಕಾರೇಕರ, ಪ್ರಾದೇಶಿಕ ಸಂಯೋಜಕರು, ಎಸಿಎಂ ಮತ್ತು ಸಾಫ್ಟವೇರ ಎಂಜಿನೀಯರ್ ಐಸಿಇಸಿ ಸೈಬರ್ ಸೆಕ್ಯುರಿಟಿ ಸೊಲ್ಯೂಷನ್ಸ್ ಪ್ರೆöÊ.ಲಿಮಿಟೆಡ್, ಅನಿಕೇತನ ಜೋಶಿ, ತಂತ್ರಾAಶ ಅಭಿಯಂತರರು, ಐಸ್ಯಾಕ್ ಸೈಬರ ಸೆಕ್ಯುರಿಟಿ ಸೊಲ್ಯೂಷನ್ಸ್ ಪ್ರೆöÊ.ಲಿಮಿಟೆಡ್, ಆಡಳಿತಾಧಿಕಾರಿ ರಾಜು ಜೋಶಿ, ಪ್ರಾಚಾರ್ಯ ಡಾ. ಆನಂದ ಭೀ. ದೇಶಪಾಂಡೆ, ಗಣಕಯಂತ್ರ ವಿಭಾಗದ ಮುಖ್ಯಸ್ಥೆ ಹಾಗೂ ಎಐಟಿಎಂ ಎಸಿಎಂ ಸ್ಟುಡೆಂಟ ಚಾಪ್ಟರ್‌ನ ಫ್ಯಾಕುಲ್ಟಿ ಅಡ್ವೆöÊಸರ್ ಡಾ. ಧನಶ್ರೀ ಕುಲಕರ್ಣಿ, ಎಐಟಿಎಂ ಎಸಿಎಂ ಸ್ಟುಡೆಂಟ ಚಾಪ್ಟರ್‌ನ ಫ್ಯಾಕುಲ್ಟಿ ಸಂಯೋಜಕ ಹಾಗೂ ಎಲ್ಲ ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.