ಬೆಳಗಾವಿ: ಜಿಲ್ಲೆಯಲ್ಲಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ವತಿಯಿಂದ ವಾಣಿಜ್ಯ ಪರೀಕ್ಷೆಯ ದಿನಾಂಕ 20 ರಿಂದ 27 ರವರೆಗೆ ಹಾಗೂ ಅರೇಬಿಕ್ ಪರೀಕ್ಷೆಯು ದಿನಾಂಕ 27 ರಿಂದ ಫೆ 1ರವರೆಗೆ ಜರುಗಲಿದ್ದು, ಇದರ ಹಿನ್ನಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಹಿತ ದೃಷ್ಟಿಯಿಂದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಯವರಾದ, ಮೊಹಮ್ಮದ ರೋಷನ್ ಅವರು ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಗೋಳಿಸಲು ಆದೇಶ ಹೊರಡಿಸಿದ್ದಾರೆ.