ಬೆಳಗಾವಿ: ಇಲ್ಲಿನ ವಂಟಮುರಿ ಘಾಟ್ ನಿಂದ ಕೊಲ್ಹಾಪುರಕ್ಕೆ ಹೋಗುವ ರಸ್ತೆಯಲ್ಲಿ ಅಪಘಾತವೊಂದು ಸಂಭವಿಸಿದ್ದು, ವೈದ್ಯಾಧಿಕಾರಿ ಡಾ. ಯತಿರಾಜ್ ಅವರ ಸಮಯಪ್ರಜ್ಞೆಯಿಂದ ವಯೋವೃದ್ಧರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಹೌದು ವೈದ್ಯೋ ನಾರಾಯಣೋ ಹರಿ ಅಂತ ಹೇಳ್ತಾರೆ. ಈಗ ಸದ್ಯ ಅಂತಹದ್ದೇ ಒಬ್ಬ ವೈದ್ಯರಿಂದ ಇಬ್ಬರು ವಯೋವೃದ್ಧರ ಪ್ರಾಣ ಉಳಿದಿದೆ. ಇಂದು ಬೆಳಗ್ಗೆ ವಂಟಮುರಿ ಘಾಟ್ ಕಡೆಯಿಂದ ಕೊಲ್ಲಾಪುರಕ್ಕೆ ಹೋಗುವ ರಸ್ತೆಯಲ್ಲಿ ಇಬ್ಬರು ವಯೋವೃದ್ಧರು ತಮ್ಮ ಕಾರಿನಲ್ಲಿ ಹೊರಡುವ ಸಂಧರ್ಭದಲ್ಲಿ ಒಂದು ಕಲ್ಲಿನಿಂದಾಗಿ ಆಯ ತಪ್ಪಿ ಅವರ ಕಾರು 3 ಪಲ್ಟಿ ಹೊಡೆದಿದೆ. ಇದೇ ಸಂದರ್ಭದಲ್ಲಿ ಅಭಯ ಪ್ರಾಜೆಕ್ಟ್ ನ ವೈದ್ಯಾಧಿಕಾರಿಗಳಾದ ಯತಿರಾಜ್ ದೇಶಪಾಂಡೆ ಅವರು ಆ ಮಾರ್ಗವಾಗಿ ಹೋಗುತ್ತಿರಬೇಕಾದರೆ ಈ ಘಟನೆ ನಡೆದಿದ್ದು, ಕೂಡಲೇ ಡಾ. ಯತಿರಾಜ ಅವರು ಸಮಯಪ್ರಜ್ಞೆಯಿಂದ ಪಲ್ಟಿ ಹೊಡೆದಿದ್ದ ಕಾರಿನ ಹಿಂಬದಿಯ ಗ್ಲಾಸನ್ನು ಒಡೆದು, ಆ ಇಬ್ಬರು ವಯೋವೃದ್ಧರನ್ನು ಪ್ರಾಣಪಾಯದಿಂದ ಕಾಪಾಡಿದ್ದಾರೆ.
ಜೊತೆಗೆ ವಯೋವೃದ್ಧರು ಸೀಟ್ ಬೆಲ್ಟ್ ಧರಿಸಿದ್ದ ಕಾರಣಕ್ಕಾಗಿ ಅವರಿಗೆ ಹೆಚ್ಚಾಗಿ ಯಾವುದೇ ಪೆಟ್ಟಾಗಿರಲಿಲ್ಲ. ಒಬ್ಬರಿಗೆ ತಲೆಗೆ ಹಾಗೂ ಇನ್ನೊಬ್ಬರಿಗೆ ಭುಜಕ್ಕೆ ಸಣ್ಣ ಪುಟ್ಟ ಗಾಯಗಳಾಗಿದ್ದವು. ಅದಕ್ಕೂ ಸಹ ಶುಶ್ರುಷೆ ಮಾಡಿದಂತಹ ಡಾಕ್ಟರ್ ಯತಿರಾಜ್ ಅವರು ನಂತರ ಅವರ ಸಂಬಂಧಿಕರಿಗೆ ಕರೆ ಮಾಡಿ ಅವರಿಬ್ಬರನ್ನು ಸುರಕ್ಷಿತ ವಾಗಿ ಕಳಿಸಿಕೊಟ್ಟಿದ್ದಾರೆ. ಸದ್ಯ ಈಗ ಆ ಇಬ್ಬರು ವಯೋವೃದ್ಧರು ಸುರಕ್ಷಿತವಾಗಿದ್ದಾರೆ.
ಎಂತಹುದೇ ಗಡಿಬಿಡಿ ಸಮಯದಲ್ಲಿ ತಮ್ಮ ಕರ್ತವ್ಯ ಪ್ರಜ್ಞೆಯನ್ನು ಮರೆಯದೆ ವೈದ್ಯ ವೃತ್ತಿಯನ್ನ ನಿರ್ವಹಿಸಿದ ಡಾ. ಯತಿರಾಜ್ ದೇಶಪಾಂಡೆ ಅವರಿಗೆ ನಮ್ಮ ನಮ್ಮೂರ ಧ್ವನಿ ಸುದ್ಧಿ ವಾಹಿನಿಯ ಕಡೆಯಿಂದ ಸಲಾಂ ಹಾಗೂ ಅಭಿನಂದನೆಗಳು. 💐💐