ಗೋಕಾಕ: ತಾಲೂಕಿನ ಕಲ್ಲೋಳಿ ಗ್ರಾಮದ ರೈತ ರಮೇಶ ಅವರ ಸಮಗ್ರ ಕೃಷಿ ಪದ್ದತಿಯನ್ನ ಮೆಚ್ಚಿ ಹಾಡಿ ಹೊಗಳಿದ, ವೈ ಎಸ್ ಪಾಟೀಲ್ ಕೃಷಿ ಆಯುಕ್ತರು ಹಾಗೂ ಸಿಬ್ಬಂದಿ ವರ್ಗ.
ಹೌದು ಕಳೆದ ಸುಮಾರು ವರ್ಷಗಳಿಂದ ಕೃಷಿಯಲ್ಲಿ ತಮ್ಮ ಜೀವನ ನಡೆಸುತ್ತಿರುವ ರಮೇಶ ಅವರು, ಇತ್ತೀಚೆಗೆ 06 ವರ್ಷಗಳಿಂದ ಸಮಗ್ರ ಕೃಷಿ ಪದ್ದತಿಯನ್ನ ತಮ್ಮ ಕೃಷಿಯಲ್ಲಿ ಅಳವಡಿಸಿಕೊಂಡಿದ್ದರು. ಇದರಲ್ಲಿ ಅವರು ಸಾವಯವ ಕೃಷಿ, ಮಿಶ್ರ ಬೇಸಾಯ, ಕುರಿ-ಕೋಳಿ ಸಾಕಾಣಿಕೆ, ಮೊಲ, ಬಾತುಕೋಳಿ, ಲವ್ ಬರ್ಡ್ಸ್, ಪಾರಿವಾಳ, ದೇಸಿ ಆಕಳುಗಳು, ಹಾಗೂ ಅವುಗಳಿಂದ ಬರುವ ಗೋ ಉತ್ಮನ್ನಗಳಾದ ಗೋಅರ್ಕ,ವಿಭೂತಿ, ಫಿನೈಲ್,ದಂತ ಮಂಜನ ಧೂಪಗಳು,ಗೊಬ್ಬರ ಹೀಗೆ ಮುಂತಾದವುಗಳನ್ನು ಮಾಡಿ ಯಶಸ್ಸು ಕಂಡಿದ್ದಾರೆ.
ಇದರ ಜೊತೆಗೆ, ಪುದೀನ, ಸ್ಟೀವಿಯಾ, ಚಕ್ರಿ, ಬ್ರಾಂಹಿ, ಒಂದೆಲಗ ಔಷಧೀಯ ಸಸ್ಯಗಳು ಹಾಗೂ 15 ತರಹದ ವಿವಿಧ ಹಣ್ಣಿನ ವಿಧಗಳನ್ನು ನಾವು ಇವರ ಬೇಸಾಯದಲ್ಲಿ ನೋಡಬಹುದು. ಹಾಗೆಯೇ, ಬೇರೆ ಬೇರೆ ತರಹದ ಯಂತ್ರ(ಕೋಲ್ಡ್ ಪ್ರೆಸ್ ಆಯಿಲ್ ಮಿಲ್, ಕಬ್ಬಿನ ಹಾಲಿನ ಮಷಿನ್ ಇತ್ಯಾದಿ)ಗಳನ್ನೂ ಸಹ ಅಳವಡಿಸಿಕೊಂಡು, ಎಲ್ಲದಕ್ಕೂ ಸೋಲಾರ ಅಳವಡಿಕೆ ಮಾಡಿ, ತಮ್ಮ ಕೃಷಿಗೆ ಪೂರಕವಾಗುವ ರೀತಿಯಲ್ಲಿ ಇವರ ಈ ಕೃಷಿ ನಡೆಯುತ್ತಿದೆ. ಇವರ ಈ ಸಮಗ್ರ ಕೃಷಿ ಪದ್ಧತಿಯಿಂದ ವ್ಯವಸಾಯದಲ್ಲಿ ಅತ್ಯಧಿಕ ಲಾಭವನ್ನ ಗಳಿಸಿ, ಇತರ ರೈತರಿಗೆ ಮಾದರಿಯಾಗಿದ್ದಾರೆ.
ಜೊತೆಗೆ, ಕಾರ್ಯಕ್ಕೆ ಸಂದ ಪುರಸ್ಕಾರ ಅನ್ನುವ ಹಾಗೆ, ಕೃಷಿ ಇಲಾಖೆಯ ಆಯುಕ್ತರಾದ ವೈ ಎಸ್ ಪಾಟೀಲ್ ಹಾಗೂ ಅವರ ತಂಡ ಸಾಧಕ ರೈತ ರಮೇಶ ಅವರ ಜಮೀನಿಗೆ ಭೇಟಿ ಕೊಟ್ಟು, ಅವರ ಈ ಸಮಗ್ರ ಕೃಷಿಯನ್ನ ಮೆಚ್ಚಿ ಹೊಗಳಿದ್ದಾರೆ.
ರೈತ ರಮೇಶ ಅವರು ಸರಕಾರದ ಯೋಜನೆಗಳನ್ನ ಸರಿಯಾದ ರೀತಿಯಲ್ಲಿ ಬಳಿಸಿಕೊಂಡು, ಕೃಷಿ ಇಲಾಖೆಯಿಂದ ನೀಡಿದ ತರಬೇತಿಗಳ ಲಾಭ ಪಡೆದು, ಆತ್ಮ ಸಿಬ್ಬಂಧಿಗಳು, ಎಡಿಎ, ಎಒಗಳ ತಾಂತ್ರಿಕ ಸಲಹೆಗಳನ್ನ ಕೃಷಿಯಲ್ಲಿ ಅಳವಡಿಸಿಕೊಂಡು, ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಮಾಡಿಕೊಂಡಿರುವ ರೀತಿ ಪುನರಾವರ್ತಿಸಲು ಅತ್ಯಂತ ಯೋಗ್ಯವಾದದ್ದು ಎಂದು ವರದಿ ಮಾಡಿದ್ದಾರೆ.
ಈ ವೇಳೆ, ವೈ ಎಸ್ ಪಾಟೀಲ್ ಕೃಷಿ ಆಯುಕ್ತರು, ಜಿ ಟಿ ಪುತ್ರ ಕೃಷಿ ನಿರ್ದೇಶಕರು, ವಿ. ಜೆ ಪಾಟೀಲ್ ಹೆಚ್ಚುವರಿ ಕೃಷಿ ನಿರ್ದೇಶಕರು, ಎಸ್. ಎಸ್ ಪಾಟೀಲ್, ಜಂಟಿ ಕೃಷಿ ನಿರ್ದೇಶಕರು ಬೆಳಗಾವಿ, ಹೆಚ್. ಡಿ ಕೋಳೇಕರ್ ಮತ್ತು ಕೊಂಗವಾಡ ಸರ್ ಉಪನಿರ್ದೇಶಕರು ಬೆಳಗಾವಿ,
ಎಂ. ಎಂ ನದಾಫ ಎಡಿಎ, ಕಲ್ಲೋಳಿ ಜನತೆ ಉಪಸ್ಥಿತರಿದ್ದರು.