Live Stream

[ytplayer id=’22727′]

| Latest Version 8.0.1 |

Local NewsNational NewsState News

ನಾಲ್ಕು ವರ್ಷದ ಮಗು ಚೂಯಿಂಗ್ ಗಮ್ ನುಂಗಿ ಸಾವು…!

ನಾಲ್ಕು ವರ್ಷದ ಮಗು ಚೂಯಿಂಗ್ ಗಮ್ ನುಂಗಿ ಸಾವು…!

 

ಉತ್ತರ ಪ್ರದೇಶ: ರಾಜ್ಯದ ಕಾನ್ಪುರದಲ್ಲಿ ನಡೆದ ಒಂದು ದುರಂತ ಘಟನೆಯಲ್ಲಿ, ನಾಲ್ಕು ವರ್ಷದ ಮಗುವೊಂದು ಅಂಗಡಿಯಿಂದ ಖರೀದಿಸಿದ ಚೂಯಿಂಗ್ ಗಮ್ ಅನ್ನು ನುಂಗಿ ಉಸಿರುಗಟ್ಟಿ ಸಾವನ್ನಪ್ಪಿದೆ. ರಾಹುಲ್ ಕಶ್ಯಪ್ ಅವರ ಮಗ ಎಂದು ಗುರುತಿಸಲಾದ ಮಗು ಭಾನುವಾರ ಸಂಜೆ ಚೂಯಿಂಗ್ ಗಮ್ ಖರೀದಿಸಿತ್ತು ಎಂದು ವರದಿಯಾಗಿದೆ.

ಅದನ್ನು ಸೇವಿಸಿದ ಸ್ವಲ್ಪ ಸಮಯದ ನಂತರ, ಚೂಯಿಂಗ್ ಗಮ್ ಅವನ ಗಂಟಲಿನಲ್ಲಿ ಸಿಲುಕಿಕೊಂಡು, ಉಸಿರಾಟದ ತೊಂದರೆಗೆ ಕಾರಣವಾಯಿತು. ಕುಟುಂಬ ಸದಸ್ಯರು ಚೂಯಿಂಗ್ ಗಮ್ ಅನ್ನು ತೆಗೆಯಲು ಹರಸಾಹಸ ಪಟ್ಟರು, ಆದರೆ ಅದು ಸಿಲುಕಿಕೊಂಡಿತ್ತು. ತಕ್ಷಣವೇ ಹುಡುಗನನ್ನು ಕಾನ್ಪುರದ ಅತಿದೊಡ್ಡ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಪ್ರಯತ್ನಗಳ ಹೊರತಾಗಿಯೂ, ಆಸ್ಪತ್ರೆ ತಲುಪುವ ಮೊದಲೇ ಮಗು ಸಾವು ಕಂಡಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಘಟನೆಯನ್ನು ವಿವರಿಸಿರುವ, ರಾಹುಲ್ ಕಶ್ಯಪ್ ತನ್ನ ಮಗ ಚೂಯಿಂಗ್ ಗಮ್ ಬೇಕು ಎಂದು ಹಠ ಮಾಡುತ್ತಿದ್ದ. ಸಂಜೆ 7 ಗಂಟೆ ಸುಮಾರಿಗೆ ಆತನಿಗೆ ನೀಡಿದ ಬಳಿಕ ಅದನ್ನು ತೆಗೆದು ತಿನ್ನಲು ಆರಂಭಿಸಿದ್ದ ಎಂದಿದ್ದಾರೆ. ಪರಿಸ್ಥಿತಿ ಇಷ್ಟು ಕೈಮೀರಬಹುದು ಎಂದು ಅಂದಾಜಿರಲಿಲ್ಲ. ಆದರೆ, ಆತನ ಗಂಟಲಲ್ಲಿ ಚೂಯಿಂಗ್‌ ಗಮ್‌ ಸಿಕ್ಕಿಹಾಕಿಕೊಂಡಾಗ ಪರಿಸ್ಥಿತಿ ವೇಗವಾಗಿ ಹದಗೆಟ್ಟಿತು.

ಚೂಯಿಂಗ್‌ ಗಮ್‌ ತಯಾರಿಸಿದ ಕಂಪನಿಯನ್ನ ಅವರು ಟೀಕೆ ಮಾಡಿದ್ದು, ತಯಾರಕ ಪರಿ ಜೈನ್ ಟಾಫಿ ಕಂಪನಿಯ ವಿರುದ್ಧ ಅಧಿಕಾರಿಗಳಿಗೆ ದೂರು ನೀಡಲು ಯೋಜಿಸುತ್ತಿದ್ದೇನೆ ಎಂದು ಕಶ್ಯಪ್ ತಮ್ಮ ದುಃಖವನ್ನ ವ್ಯಕ್ತಪಡಿಸಿದರು. ಈ ಘಟನೆಯು ಇದೇ ರೀತಿಯ ಉತ್ಪನ್ನಗಳ ಸುರಕ್ಷತೆಯ ಬಗ್ಗೆ ಭಯವನ್ನು ಹುಟ್ಟುಹಾಕಿದೆ.

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";