ಬೆಳಗಾವಿಯ ಶಿವ ಬಸವ ನಗರದಲ್ಲಿರುವ ಮಹಿಳಾ ಕಲ್ಯಾಣ ಸಂಸ್ಥೆ ಹಾಗೂ ಅದರ ವಿಭಾಗಗಳಲ್ಲಿ 78ನೇ ಸ್ವಾತಂತ್ರ್ಯೋತ್ಸವವನ್ನು, ಅತಿ ವಿಜ್ರಂಭಣೆಯಿಂದ ಆಚರಿಸಲಾಯಿತು.
ಮಹಿಳಾ ಕಲ್ಯಾಣ ಸಂಸ್ಥೆ ಬೆಳಗಾವಿಯ ಪ್ರಧಾನ ಕಚೇರಿಯಲ್ಲಿ ಮಹಿಳಾ ಕಲ್ಯಾಣ ಸಂಸ್ಥೆಯ ಕಾರ್ಯದರ್ಶಿ ಶ್ರೀಮತಿ ವೈಜಯಂತಿ ಚೌಗುಲವರಿಂದ, ಮಹಾಂತೇಶ ನಗರದ ಭಾರತ ಕಾಲೋನಿಯ ಸಾಂತ್ವನ ಹಾಗೂ ಸಂಗಾತಿ ಕೇಂದ್ರಗಳಲ್ಲಿ ಹಾಗೂ ನಮ್ಮೂರ ಬಾನುಲಿ ಸಮುದಾಯ ರೇಡಿಯೋ ಕೇಂದ್ರ ಬೆಳಗಾವಿಯಲ್ಲಿ ನಿವೃತ್ತ ಸೈನಿಕರು ಶ್ರೀ ಡಾ.ರಾಜೇಂದ್ರ ಹಲಗೆ ಯವರು ಧ್ವಜಾರೋಹಣ ನೆರವೇರಿಸಿದರು. ಇದೆ ರೀತಿ ಹಿಡಕಲ್ ಡ್ಯಾಮ್ ನ ಆಶ್ರಯ ಸ್ವಧಾರಗ್ರಹದಲ್ಲಿ, ನಾಗನೂರು ಶಿವಬಸವ ಟ್ರಸ್ಟ್ ವೃದ್ಧಾಶ್ರಮ ಬಸವನ ಕುಡಚಿಯಲ್ಲಿ ಧ್ವಜಾರೋಹಣ ನೆರವೇರಿಸಿ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನ ಆಚರಿಸಲಾಯಿತು.
ಈ ವೇಳೆ ನಿವೃತ್ತ ಸೈನಿಕರು ಶ್ರೀ ಡಾ.ರಾಜೇಂದ್ರ ಹಲಗೆ, ಮಹಿಳಾ ಕಲ್ಯಾಣ ಸಂಸ್ಥೆಯ ಸಂಸ್ಥಾಪಕರಾದ ಶ್ರೀ ಮಹಾಲಿಂಗ .ಎಸ್. ಚೌಗಲಾ, ಗೌರವ ಕಾರ್ಯದರ್ಶಿ ಶ್ರೀಮತಿ ವೈಜಯಂತಿ ಚೌಗಲಾ, ಶ್ರೀ ಪ್ರವೀಣ ಮಗದೂಮ, ಶ್ರೀ ನವೀನ ಮಗದೂಮ, ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.