ನೌಕಾಪಡೆಯಲ್ಲಿ ಆಯ್ಕೆಯಾದ ಯುವಕನಿಗೆ ಅದ್ಧೂರಿ ಸ್ವಾಗತ
ಚಿಕ್ಕೋಡಿ: ತಾಲೂಕಿನ ದೇಸಾಯಿ ಇಂಗಳಿ ಗ್ರಾಮದ ಆದರ್ಶ ಕುಡಚೆ ಇವರು, ಭಾರತೀಯ ನೌಕಾಪಡೆಯಲ್ಲಿ ಆಯ್ಕೆ ಆಗಿ ಓರಿಸ್ಸಾದಲ್ಲಿ ನಾಲ್ಕು ತಿಂಗಳು ಮತ್ತು ಕಾರವಾರದಲ್ಲಿ ಹತ್ತು ದಿನ ತರಬೇತಿಯನ್ನು ಮುಗಿಸಿ ಸ್ವಂತ ಊರಿಗೆ ಬರುವಾಗ ಊರಿನ ಜನರಿಂದ ಅದ್ಧೂರಿ ಸ್ವಾಗತ ಕೋರಲಾಯಿತು.
ಸೈನಿಕ ನಮ್ಮ ದೇಶದ ಆಸ್ತಿ. ಅವರು ನಮಗಾಗಿ ತಮ್ಮ ಕುಟುಂಬ ಹಾಗೂ ಮನೆಯವರನ್ನೂ ಮರೆತು ದೇಶ ಸೇವೆಯಲ್ಲಿ ನಿರತರಾಗಿರುತ್ತಾರೆ. ಕೊರೆತುವ ಚಳಿ ಇರಲಿ, ಬಿರಿ ಬಿಸಿಲಿರಲಿ ದೇಶ ಅನ್ನುವ ಮಾತು ಬಂದಾಗ, ಎಲ್ಲದಕ್ಕೂ ಸಿದ್ಧರಗುವವರು ನಮ್ಮ ಸೈನಿಕರು
ಅಂತಹದುರಲ್ಲಿ, ಆದರ್ಶ ಕುಡಚೆ ಅವರು ತಮ್ಮ ಹದಿ ಹರೆಯದ ವಯಸ್ಸಿನಲ್ಲಿ, ಭಾರತೀಯ ನೌಕಾಪಡೆಯಲ್ಲಿ ಆಯ್ಕೆ ಆಗಿ ಓರಿಸ್ಸಾದಲ್ಲಿ ನಾಲ್ಕು ತಿಂಗಳು ಮತ್ತು ಕಾರವಾರದಲ್ಲಿ ಹತ್ತು ದಿನ ತರಬೇತಿಯನ್ನು ಮುಗಿಸಿ ತಮ್ಮ ಸ್ವ ಗ್ರಾಮಕ್ಕೆ ಮರಳಿದಾಗಾ ಊರಿನ ಜನರ ಸಂತೋಷಕ್ಕೆ ಪಾರವೇ ಇರಲಿಲ್ಲ. ಹಾಗಾಗಿ ತಮ್ಮ ಊರಿನ ಮಗನ ಸ್ವಾಗತವನ್ನ ವಿಜೃಂಭಣೆಯಿಂದ ಮಾಡಿದರು.
ಈ ಸಂದರ್ಭದಲ್ಲಿ, ಊರಿನ ಗಣ್ಯವ್ಯಕ್ತಿಗಳು, ಹೆಚ್ಚಿನ ಸಂಖ್ಯೆಯಲ್ಲಿ ರೈತರು, ಸಹಪಾಠಿಗಳು, ಸ್ನೇಹಿತರು ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು.