ಬೆಳಗಾವಿ: ನಗರದ ಮಹೇಶ್ವರಿ ಅಂಧ ಮಕ್ಕಳ ಶಾಲೆಯಲ್ಲಿ, ಮಹಿಳಾ ಕಲ್ಯಾಣ ಸಂಸ್ಥೆಯ ಸಂಸ್ಥಾಪಕರಾದ ಎಂ.ಎಸ್ ಚೌಗಲಾರವರ ಎಲ್.ಕೆ.ಜಿ, ಯು.ಕೆ.ಜಿ ಶಿಶುಪಾಲನ ಗೃಹಗಳ ಶಿಕ್ಷಕಿಯರಿಗಾಗಿ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗಾಗಿ ಮಾರ್ಗದರ್ಶಿ, “ಸಮಗ್ರ ಪದ್ಧತಿ ಶಾಲಾ ಪೂರ್ವ ಶಿಕ್ಷಣ ಕೈಪಿಡಿ” ಬಿಡುಗಡೆ ಸಮಾರಂಭ ನಡೆಯಿತು.
ರಾಜ್ಯ ಬಾಲ ಭವನ ಸೊಸೈಟಿ ಬೆಂಗಳೂರು, ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಬೆಳಗಾವಿ, ಜಿಲ್ಲಾ ಬಾಲ ಭವನ ಸೊಸೈಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬೆಳಗಾವಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಮಹಿಳಾ ಕಲ್ಯಾಣ ಸಂಸ್ಥೆ ಬೆಳಗಾವಿ ಇವರುಗಳ ಸಂಯುಕ್ತ ಆಶ್ರಯದಲ್ಲಿ 2024-25 ನೇ ಸಾಲಿನ 6 ರಿಂದ 16 ವರ್ಷದ ಮಕ್ಕಳಿಗೆ ಜಿಲ್ಲಾ ಮಟ್ಟದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬೆಳಗಾವಿಯ ಉಪ ನಿರ್ದೇಶಕರಾದ ನಾಗರಾಜ್. ಆರ್ ಅವರ ಅಮೃತ ಹಸ್ತದಿಂದ “ಸಮಗ್ರ ಪದ್ಧತಿ ಶಾಲಾ ಪೂರ್ವ ಶಿಕ್ಷಣ ಕೈಪಿಡಿ” ಬಿಡುಗಡೆಯನ್ನ ಮಾಡಿದರು.
ಈ ಕುರಿತು ಎಂ.ಎಸ್ ಚೌಗಲಾ ಅವರು ಮಾತನಾಡಿ, ಮಕ್ಕಳಿಗೆ ಶಾಲಾ ಪೂರ್ವ ತಯಾರಿ ಬಹಳ ಮುಖ್ಯ ಇದರಿಂದ ಅವರ ಮುಂದಿನ ಶಿಕ್ಷಣದ ಎಲ್ಲ ಹಂತದಲ್ಲಿಯೂ ಸುಲಭವಾಗಿ ಶೈಕ್ಷಣಿಕ ಜೀವನ ನಡೆಸಲು ಸುಲಭವಾಗುವ ಆಶಯದಿಂದ ಈ ಕೈಪಿಡಿಯ ರಚನೆ ಮಾಡಲಾಗಿದೆ ಆದ ಕಾರಣ, ಎಲ್ಲ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಎಲ್.ಕೆ.ಜಿ, ಯು.ಕೆ.ಜಿ ಶಿಕ್ಷಕಿಯರು ಇದರ ಸದುಪಯೋಗ ಪಡೆಯಬೇಕೆಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬೆಳಗಾವಿ ಉಪನಿರ್ದೇಶಕರಾದ, ನಾಗರಾಜ್.ಆರ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಅಣ್ಣಪ್ಪ ಹೆಗಡೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಗಳಾದ ಶ್ರೀಮತಿ ಪರ್ವೀನ್, ಮಹಿಳಾ ಕಲ್ಯಾಣ ಸಂಸ್ಥೆ ಬೆಳಗಾವಿಯ ಸಂಸ್ಥಾಪಕರಾದ ಎಂ.ಎಸ ಚೌಗಲಾ, ಅನಿತಾ ಗಾವಡೆ ಪ್ರಾಂಶುಪಾಲರು ಮಹೇಶ್ವರಿ ಅಂಧ ಮಕ್ಕಳ ಶಾಲೆ ಬೆಳಗಾವಿ, ಸಿಬ್ಬಂದಿವರ್ಗ ಹಾಗೂ ಎಲ್ಲ ಮಕ್ಕಳು ಉಪಸ್ಥಿತರಿದ್ದರು.