ರಾಯಚೂರು: 1993-94 ರಲ್ಲಿ ರಾಯಚೂರು ಜಿಲ್ಲಾಧಿಕಾರಿಯಾಗಿದ್ದ ಐ.ಆರ್ ಪೆರುಮಾಳ್ ಈಗ ಸನ್ಯಾಸಿಯಾಗಿ ಕುಂಭಮೇಳದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಅವರನ್ನು ಈಗ ಈ ರೀತಿ ನೋಡಿದ ಜನರು ನಿಬ್ಬೆರಗಾಗಿದ್ದಾರೆ. ಡಿಸಿಯಾಗಿದ್ದಾಗ ಕಚೇರಿಯಲ್ಲಿ ಕುಳಿತ ಫೋಟೋ ಹಾಗೂ ಈಗ ಗಡ್ಡ ಜಟ ಬಿಟ್ಟಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸಂಚಲನವನ್ನು ಮೂಡಿಸಿದೆ. ಜೀವನದ ಪರಮಾರ್ಥ ಅರಿತು ಸನ್ಯಾಸದತ್ತ ವಾಲಿರಬಹುದು ಎಂಬ ವಿಶ್ಲೇಷಣೆ ಮಾಡಲಾಗುತ್ತಿದೆ.
ಪ್ರಯಾಗ್ರಾಜ್ ನಲ್ಲಿರುವ ಮಹಾಕುಂಭಮೇಳ ಈಗ ಎಲ್ಲರ ಆಕರ್ಷಣೆಯಾಗಿದೆ. ಇಲ್ಲಿ ಎಂತೆಂಥವರು ಸನ್ಯಾಸಿಗಳಾಗಿರುವುದು ಈಗ ಸದ್ಯ ಕಂಡುಬರುತ್ತಿದೆ. ಜೀವನದ ಅಂತಿಮ ಸತ್ಯಕ್ಕೆ ಮನಸೋತು, ಆಧ್ಯಾತ್ಮದತ್ತ ವಾಲಿದ ಎಷ್ಟೋ ಜನ ಕಂಡು ಬರುತ್ತಿದ್ದಾರೆ.
ಲೌಕಿಕ ಜೀವನದಿಂದ ದೂರ ಸರಿದು ಸನ್ಯಾಸಿದೆ ಸನ್ಯಾಸತ್ವದಲ್ಲಿ ಸಂತೋಷ ಪಡೆಯುವುದು ಪರಮಾರ್ಥ ಎಂದು ಅರಿತವರ ಸಂಖ್ಯೆ ಕಡಿಮೆ ಏನಿಲ್ಲ. ಅವರ ಸಾಲಿನಲ್ಲಿ ರಾಯಚೂರಿನಲ್ಲಿ ಡಿಸಿ ಆಗಿದ್ದ ಪೆರುಮಾಳ್ ಕೂಡ ಒಬ್ಬರು ಅಂತ ಹೇಳಲಾಗುತ್ತಿದೆ.