Live Stream

[ytplayer id=’22727′]

| Latest Version 8.0.1 |

Local NewsState News

ಕೊಟ್ಟೂರು: ಪೊಲೀಸ್ ಕಾರ್ಯಚರಣೆಯಲ್ಲಿ ಹ್ಯಾಂಡ್ ಲಾಕ್ ಮುರಿದು ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿತನಿಂದ ಅಂದಾಜು 1,00000/-ರೂ ಬೆಲೆ ಬಾಳುವ ಒಟ್ಟು 03 ಬೈಕ್ ಗಳ ಜಪ್ತಿ

ಕೊಟ್ಟೂರು: ಪೊಲೀಸ್ ಕಾರ್ಯಚರಣೆಯಲ್ಲಿ ಹ್ಯಾಂಡ್ ಲಾಕ್ ಮುರಿದು ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿತನಿಂದ ಅಂದಾಜು 1,00000/-ರೂ ಬೆಲೆ ಬಾಳುವ ಒಟ್ಟು 03 ಬೈಕ್ ಗಳ ಜಪ್ತಿ

ವಿಜಯನಗರ: ಜಿಲ್ಲೆ ಕೊಟ್ಟೂರು ಪಟ್ಟಣದಲ್ಲಿ ಇತ್ತೀಚಿಗೆ ರಾತ್ರಿ 8-15 ಗಂಟೆಗೆ ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ದಾಖಲಾದ ಗುನ್ನೆ ನಂಬರ್: 103/2025 ಕಲಂ.303(2) ಬಿ.ಎನ್.ಎಸ್ ರೀತ್ಯ ಪ್ರಕರಣದಲ್ಲಿ ತನಿಖೆ ಕೈಗೊಂಡು, ಈ ಬಗ್ಗೆ ಆರೋಪಿತರ ಹಾಗೂ ಮಾಲು ಪತ್ತೆಗಾಗಿ ಶ್ರೀ ಮಲ್ಲೇಶ ದೊಡ್ಡಮನಿ ಡಿ.ವೈ.ಎಸ್, ಪಿ. ಕೂಡ್ಲಿಗಿ ರವರ ಮಾರ್ಗದರ್ಶನದಲ್ಲಿ ವೆಂಕಟಸ್ವಾಮಿ, ಟಿ ಸಿ.ಪಿ.ಐ. ಕೊಟ್ಟೂರು ವೃತ್ತ ರವರ ನೇತೃತ್ವದಲ್ಲಿ, ಶ್ರೀಮತಿ ಗೀತಾಂಜಲಿ. ಶಿಂಧೆ. ಪಿ.ಎಸ್.ಐ ,ಕೊಟ್ಟೂರು ಪೊಲೀಸ್ ಠಾಣೆ, ಪೊಲೀಸ್ ಸಿಬ್ಬಂದಿಯಾದ ಬಸವರಾಜ ಹೆಚ್ , ವೀರೇಶ, ಶಶಿಧರ, ನಾಗಪ್ಪ ಯು, ಯರಿಸ್ವಾಮಿ ಇವರ ನೇತೃತ್ವದಲ್ಲಿ ತಂಡ ರಚಿಸಿದ್ದು, ಸದರಿ ತಂಡದವರು ವಿವಿಧ ಆಯಾಮಗಳಲ್ಲಿ ತನಿಖೆಯನ್ನು ನಡೆಸಿ ಪ್ರಕರಣದ ಆರೋಪಿ ಪತ್ತೆಕಾರ್ಯದಲ್ಲಿ ಕಾರ್ಯನಿರತರಾಗಿ ಆರೋಪಿ- ಕೆ.ಹನುಮಂತ ಟಿಂಗು ತಂದೆ ತಿಂದಪ್ಪ 23 ವರ್ಷ ಕೊವರ ಜನಾಂಗ ಗಾರೆ ಕೆಲಸ ವಾಸ: ಉಜ್ಜಿನಿ ಹೊಸ ಪ್ಲಾಟ್ ಉಜ್ಜಿನಿ ಗ್ರಾಮ ಕೊಟ್ಟೂರು ತಾಲೂಕು. ಈತನನ್ನು ದಿನಾಂಕ: 09-05-2025 ರಂದು ಬೆಳಿಗ್ಗೆ 11-45 ಗಂಟೆಗೆ, ಕೊಟ್ಟೂರು ಪಟ್ಟಣದ ಶ್ರೀ ಮರುಳ ಸಿದ್ದೇಶ್ವರ ಕಲ್ಯಾಣ ಮಂಟಪದ ಹತ್ತಿರ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲಾಗಿ ಎಂದು ಪತ್ರಿಕೆ ಪ್ರಕಟಣೆಗೆ ಪೊಲೀಸ್ ಸಿಬ್ಬಂದಿ ತಿಳಿಸಿದ್ದಾರೆ.

ಕೊಟ್ಟೂರು ಪೊಲೀಸ್ ಠಾಣೆಗೆ ಸಂಬಂದಿಸಿದ 03 ಬೈಕ್ ಗಳು ಆರೋಪಿತನಿಂದ ಅಂದಾಜು 100000/-ರೂ ಬೆಲೆ ಬಾಳುವ ಹಿರೋ ಸ್ಪ್ಯಂಡರ್ ಪ್ಲಸ್ ಕಂಪನಿಯ 03 ಮೋಟಾರ್ ಸೈಕಲ್ ಗಳನ್ನು ವಶಕ್ಕೆ ಪಡೆದುಕೊಂಡಿರುತ್ತಾರೆ. ತಂಡದ ಕಾರ್ಯಾಚರಣೆ ಯಶಸ್ವಿಯನ್ನು ಗಮನಿಸಿದ ವಿಜಯನಗರ ಜಿಲ್ಲೆ ಪೊಲೀಸ್ ಅಧೀಕ್ಷಕರಾದ ಶ್ರೀಹರಿಬಾಬು ರವರು ಕೊಟ್ಟೂರು ಪೊಲೀಸ್ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.

ವರದಿ: ಚಿಗಟೇರಿ ಜಯಪ್ಪ ವಿಜಯನಗರ

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";