ಬೆಳಗಾವಿ: ತಾಲೂಕಿನ ಸುವರ್ಣಸೌಧದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಕಬ್ಬು ತುಂಬಿದ ಟ್ರಾಕ್ಟರ್ ಪಲ್ಟಿ, ಯುವಕ ಸ್ಥಳದಲ್ಲೇ ಸಾವು.
ಹುಬ್ಬಳ್ಳಿಯ ಲಕ್ಷ್ಮೀ ನಗರದ ನಿವಾಸಿ ಗಿರೀಶ ಕುಲಕರ್ಣಿ (24) ಸ್ಥಳದಲ್ಲೇ ಸಾವನಪ್ಪಿರುವ ದುರ್ದೈವಿ. ಬೆಳಗಾವಿ ಕಡೆಯಿಂದ ಹುಬ್ಬಳ್ಳಿ ಕಡೆಗೆ ಹೋಗುವಾಗ ಕಬ್ಬು ತುಂಬಿದ ಟ್ರಾಕ್ಟರ್ ಕಾರ ಮೇಲೆ ಉರುಳಿ ಅವಘಡ ಸಂಭವಿಸಿದೆ.
ಕಾರಿನಲ್ಲಿ ಸಿಲುಕಿದ್ದ ಮೂವರ ಪೈಕಿ ಓರ್ವ ಯುವಕ ಸ್ಥಳದಲ್ಲೇ ಸಾವನ್ನಪ್ಪಿದರೆ, ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಹಿರೇಬಾಗೆವಾಡಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.