ಯಮಕನಮರಡಿ: ಸರ್ಕಾರೀ ಉದ್ಯೋಗ ದೊರೆಯದ ಬೇಸರದಿಂದ ಮನನೊಂದು ಬೃಹತ್ ನಿರ್ಧಾರ ಕೈಗೊಂಡಿರುವ ಘಟನೆ ಹುಕ್ಕೇರಿ ತಾಲ್ಲೂಕಿನ ಮಾವನೊರ ಗ್ರಾಮದಲ್ಲಿ ಸೋಮವಾರ ಸಂಭವಿಸಿದೆ. ಇಲ್ಲಿನ ನಿವಾಸಿ ಸುಶ್ಮಿತಾ ಸತೀಶ್ ಕಮತಗಿ (30) ಎಂಬವರು ತಮ್ಮ ಮನೆಯ ಛಾವಣಿಗೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಸುಶ್ಮಿತಾ ಅವರು ಎಂ.ಎಸ್.ಸಿ ಹಾಗೂ ಬಿ.ಎಡ್ ಪದವೀಧರೆ ಆಗಿದ್ದು, ಹಲವು ದಿನಗಳಿಂದ ಸರ್ಕಾರಿ ನೌಕರಿಗಾಗಿ ಪ್ರಯತ್ನಿಸುತ್ತಿದ್ದರೂ ಫಲಪ್ರದವಾಗದ ಹಿನ್ನೆಲೆ ಅವರು ನಿರಾಶೆಗೆ ಒಳಗಾಗಿದ್ದರೆಂದು ತಿಳಿಸಿದ್ದಾರೆ.
ಈ ಕುರಿತು ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಈ ಘಟನೆ ಗ್ರಾಮದಲ್ಲಿ ಶೋಕದ ಛಾಯೆ ಮೂಡಿಸಿದೆ.
ವರದಿ: ಕಲ್ಲಪ್ಪ ಪಾಮನಾಯಿಕ್
ನಮ್ಮೂರ ಧ್ವನಿ ನ್ಯೂಸ್ ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ
+91 95905 51177