ಬೆಳಗಾವಿ: ನಗರದ ಆರ್.ಎಲ್.ಲಾ ಕಾಲೇಜಿನ ವಿದ್ಯಾರ್ಥಿನಿಯಾದ ಕುಮಾರಿ ಸಮೀಕ್ಷಾ. ರಮೇಶ್. ಮಹಡಿಕ್ ರಾಷ್ಟ್ರೀಯ ಮಟ್ಟದ ಮುಟ್ಕೋರ್ಟ್ ಸ್ಪರ್ಧೆಯಲ್ಲಿ “ಬೆಸ್ಟ್ ಲೇಡಿ ಅಡ್ವೊಕೇಟ್” ಪ್ರಶಸ್ತಿಗೆ ಭಾಜನರಾಗಿ ನಮ್ಮ ರಾಜ್ಯಕ್ಕೆ, ಜಿಲ್ಲೆಗೆ ಹೆಮ್ಮೆಯನ್ನು ತಂದು ಕೊಟ್ಟಿದ್ದಾರೆ.
ಕುಮಾರಿ ಸಮೀಕ್ಷಾ ರವರ ತಂದೆ ರಮೇಶ ಯೋಗ ಶಿಕ್ಷಕರಾಗಿದ್ದು, ಪತಂಜಲಿ ಯೋಗ ಸಮಿತಿ ಮೂಲಕ ಬೆಳಗಾವಿ ಜಿಲ್ಲೆಯಾದ್ಯಂತ ವಿವಿಧ ಸಮಾಜ ಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಸದ್ಯ ಅವರ ಸುಪುತ್ರಿ ಈಗ 9th ಸೆಮಿಸ್ಟರ್ ನಲ್ಲಿ ವ್ಯಾಸಂಗ ಮಾಡುತ್ತಿರುವ ಸಮೀಕ್ಷಾ ಅವರು, ಇತ್ತೀಚೆಗೆ ಕರ್ನಾಟಕ ಸ್ಟೇಟ್ ಲಾ ಯುನಿವರ್ಸಿಟಿ ಹುಬ್ಬಳ್ಳಿಯವರು ಆಯೋಜಿಸಿದ್ದ, ರಾಷ್ಟ್ರೀಯ ಮಟ್ಟದ ಮುಟ್ಕೋರ್ಟ್ ಸ್ಪರ್ಧೆಯಲ್ಲಿ “ಬೆಸ್ಟ್ ಲೇಡಿ ಅಡ್ವೊಕೇಟ್” ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಈ ಪ್ರತಿಭೆಗೆ ನಮ್ಮೂರ ಧ್ವನಿ ಸುದ್ದಿ ವಾಹಿನಿಯ ಕಡೆಯಿಂದ ಹೃತ್ಪೂರ್ವಕ ಅಭಿನಂದನೆಗಳು.💐🙏🏻👏🏻