ಬೆಳಗಾವಿ: ಜಿಲ್ಲೆಯ ಹುಕ್ಕೇರಿ ತಾಲೂಕಿನ ಕರಾಗುಪ್ಪಿ-ಯಲ್ಲಾಪುರದಲ್ಲಿ ಸ್ಥಾಪಿತವಾಗಿರುವ ನಮ್ಮೂರ ಬಾನುಲಿ 90.8 ಸಮುದಾಯ ರೇಡಿಯೋ ಕೇಂದ್ರ ಸದ್ಯ ಬೆಳಗಾವಿ,ಚಿಕ್ಕೋಡಿ,ಸಂಕೇಶ್ವರ,ಹುಕ್ಕೇರಿ,ಗೋಕಾಕಿನಲ್ಲಿ ತನ್ನ ಆಫ್ಲೈನ್ ವ್ಯಾಪ್ತಿಯ ಜೊತೆಗೆ ಇಂಟರ್ನೆಟ್ ರೇಡಿಯೋ ಮೂಲಕ 60ಕ್ಕೂ ಹೆಚ್ಚು ದೇಶಗಳಲ್ಲಿ ಪ್ರಸಾರವಾಗುತ್ತಿದೆ.
ಆದರೆ ಈಗ ವಿದೇಶದಲ್ಲಿಯೇ ಸಂದರ್ಶನ ಮಾಡಲು ಹಾಗೂ ಅಲ್ಲಿನ ನಮ್ಮ ಕನ್ನಡಿಗ ಸಾಧಕರನ್ನ ತಲುಪಲು ಈಗ ವಿದೇಶದಲ್ಲೂ ಕನ್ನಡದ ಕಂಪನ್ನ ಹರಡುತ್ತಿದೆ. ನಮ್ಮ ನಮ್ಮೂರ ಬಾನುಲಿ ರೇಡಿಯೋ ತಂಡದ ಸಿಬ್ಬಂದಿಯವರಾದ ಡಾ.ಶ್ರೀ ಶ್ರೀರಂಗ ಜೋಶಿ ಅವರು ಸ್ವೀಡನ್ ಹಾಗೂ ವಿವಿಧ ದೇಶಗಳಿಗೆ 3 ತಿಂಗಳ ಕಾಲ ಪ್ರಯಾಣ ಬೆಳೆಸಿ, ವಿದೇಶಿ ಸ್ನೇಹಿತರ ಜೊತೆಗಿನ ಸಂವಾದವನ್ನ ಮುಂದುವರೆಸಿದ್ದಾರೆ.
ಡಾ. ಶ್ರೀರಂಗ ಜೋಶಿ ಅವರ ಪ್ರಯಾಣ ಸುಖಕರವಾಗಲಿ ಎಂದು ನಮ್ಮೂರ ಧ್ವನಿ ಹಾಗೂ ನಮ್ಮೂರ ಬಾನುಲಿ ರೇಡಿಯೋ ತಂಡದ ವತಿಯಿಂದ ತುಂಬು ಹೃದಯದಿಂದ ಅಭಿನಂದಿಸುತ್ತೇವೆ. 💐💐