ಮುಂಬೈ: ಹೆಸರಾಂತ ಭೋಜಪುರಿ ನಟ, ನಿರ್ಮಾಪಕ ಮತ್ತು ರಾಜಕಾರಣಿ ಎಂದು ಗುರುತಿಸಿಕೊಂಡಿದ್ದ ಸುದೀಪ್ ಪಾಂಡೆ ಮುಂಬೈನಲ್ಲಿ ಚಿತ್ರದ ಚಿತ್ರೀಕರಣದ ವೇಳೆ ಹೃದಯಾಘಾತದಿಂದ ಕುಸಿದು ಬಿದ್ದು ಕೊನೆಯುಸಿರೆಳದಿದ್ದಾರೆ.
ಸುದೀಪ್ ಅವರು ಕೇವಲ ನಟರಷ್ಟೇ ಅಲ್ಲದೆ, ನಿರ್ಮಾಪಕ ಹಾಗೂ ರಾಜಕಾರಣದಲ್ಲೂ ಸಕ್ರಿಯ ರಾಗಿದ್ದವರು. ಸಣ್ಣ ವಯಸ್ಸಿನಲ್ಲಿ ಹೃದಯಾಘಾತದಿಂದ ಇಹಲೋಕ ತ್ಯಜಿಸಿರುವುದು ಎಲ್ಲರಿಗೂ ಆಘಾತ ತಂದಿದೆ.
ಸುದೀಪ್ ಅವರ ನಿಧನದ ಸುದ್ದಿ ತಿಳಿದು ಕುಟುಂಬಸ್ಥರು ಹಾಗೂ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ಇದೇ ಜನವರಿ 5 ರಂದು ಸುದೀಪ ಅವರು ಹುಟ್ಟು ಹಬ್ಬವನ್ನ ಆಚರಿಸಿಕೊಂಡಿದ್ದರು. ತಮ್ಮ ಮುಂದಿನ ಚಿತ್ರದ ಶೂಟಿಂಗ್ ಆಗಿ ಮುಂಬೈಗೆ ಬಂದಿದ್ದರು. ಎಂದಿನಂತೆ ಸುದೀಪ್ ಅವರು ಸಿನಿಮಾ ಬಂದರ ಶೂಟಿಂಗ್ನಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಹೃದಯಾಘಾತದಿಂದ ಕುಸಿದು ಬಿದ್ದಿದ್ದಾರೆ. ಅದಾದ ಬಳಿಕ ಆಸ್ಪತ್ರೆಗೆ ದಾಖಲು ಮಾಡಿದರು ಚಿಕಿತ್ಸೆ ಫಲಿಸಲಿಲ್ಲ.
ಸುದೀಪ್ ಪಾಂಡೆಯವರ ಆತ್ಮಕ್ಕೆ ಶಾಂತಿ ಸಿಗಲೆಂದು ನಮ್ಮೂರ ಧ್ವನಿ ಸುದ್ದಿವಾಹಿನಿಯ ವತಿಯಿಂದ ದೇವರಲ್ಲಿ ಪ್ರಾರ್ಥಿಸುತ್ತೇವೆ.