ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಭಯ ದೂರ ಮಾಡಲು ಶಿಕ್ಷಣ ಇಲಾಖೆಯಿಂದ ಕ್ರಮ
ಬೆಂಗಳೂರು: ಎಸ್‌ಎಸ್ಎಲ್‌ಸಿ ವಿದ್ಯಾ- ರ್ಥಿಗಳಿಗೆ ಆಯಾ ಶಾಲೆಗಳು ನಡೆಸುವ ಘಟಕ ಪರೀಕ್ಷೆಗಳಿಗೂ ಇನ್ನು ಮುಂದೆ ‘ವೆಬ್‌ಕಾಸ್ಟಿಂಗ್’ ಕಣ್ಣಾವಲು ಇರಲಿದೆ.ಸಾಮೂಹಿಕ ನಕಲು ತಡೆಯಲು 2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮೊದಲ ಬಾರಿ ಪರಿಚಯಿಸಿದ ವೆಬ್‌ಕಾಸ್ಪಿಂಗ್ ವ್ಯವಸ್ಥೆ ಯಿಂದಾಗಿ ಫಲಿತಾಂಶ ಕುಸಿದಿತ್ತು.
ಫಲಿತಾಂಶದಲ್ಲಿನ ಭಾರಿ ಕುಸಿತ ಚರ್ಚೆಗೆ ಫಲಿತಾಂಶ ಗ್ರಾಸವಾದರೂ, ಹೆಚ್ಚು ಪಡೆಯಲು ಇದುವರೆಗೆ ಅನುಸರಿಸುತ್ತಿದ್ದ ವಾಮಮಾರ್ಗಗಳನ್ನು ಅನಾವರಣಗೊಳಿಸಿತ್ತು. ಕಳೆದೆರಡು ದಶಕಗಳಿಂದ ‘ಹೆಚ್ಚಿನ ಫಲಿತಾಂಶ’ ಎಂಬ ಪ್ರತಿಷ್ಠೆಯ ಬೆನ್ನು ಹತ್ತಿದ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಹಾಗೂ ಅವರ ಅಂಕಗಳ ಪೋಷಕರನ್ನು ಭ್ರಮಾ ಲೋಕದಲ್ಲಿ ಲೋಕದಲ್ಲಿ ತೇಲಿಸಿದ್ದರು ಎಂಬ ಸತ್ಯವನ್ನು ಬಯಲು ಮಾಡಿತ್ತು. ಸೌಲಭ್ಯ ಇಲ್ಲದಿದ್ದರೆ ಸಮೀಪದ ಶಾಲೆಗಳಲ್ಲಿ ಪರೀಕ್ಷೆ ನಡೆಸಲಾಗುತ್ತದೆ
ಸಿ.ಸಿ.ಟಿ.ವಿ. ಕ್ಯಾಮೆರಾ ಕಡ್ಡಾಯ
ಎಲ್ಲ ಶಾಲೆಗಳಲ್ಲೂ ಸಿ.ಸಿ.ಟಿ.ವಿ, ಕ್ಯಾಮೆರಾ ಅಳವಡಿಸಿಕೊಳ್ಳ- ಲು ಶಾಲಾ ಶಿಕ್ಷಣ ಇಲಾಖೆ ಸೂಚಿಸಿದೆ.ಅಳವಡಿಸಿದ ಕ್ಯಾಮೆರಾಗಳ ಐಪಿ ಸಂಖ್ಯೆಗಳನ್ನು (ಇಂಟರ್‌ನೆಟ್ ಪ್ರೋಟೊಕಾಲ್ ನಂಬರ್) ಅಯಾ ಶಾಲೆಗಳ ಮುಖ್ಯ ಶಿಕ್ಷಕರು ಮೇಲಧಿಕಾರಿಗಳ ಜೊತೆ ಹಂಚಿಕೊಳ್ಳಬೇಕು. ಐಪಿ ಸಂಖ್ಯೆ ಬಳಸಿಕೊಂಡ ಅಧಿಕಾರಿಗಳು ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು ತಮ್ಮ ಕಚೇರಿಯಲ್ಲೇ ಕುಳಿತು ಪರೀಕ್ಷಾ ಚಟುವಟಿಕೆ ವೀಕ್ಷಿಸುತ್ತಾರೆ.
ಡಿಸೆಂಬರ್‌ಗೆ ಪಠ್ಯ ಬೋಧನೆ ಪೂರ್ಣ
ಎಸ್‌ಎಸ್ಎಲ್‌ಸಿಯ ಎಲ್ಲ ವಿಷಯಗಳ ಪಠ್ಯ ಬೋಧನೆಯನ್ನು ಈ ವರ್ಷ ಡಿಸೆಂಬರ್ ಒಳಗೆ ಪೂರ್ಣಗೊಳಿಸಲಾಗುತ್ತದೆ. ಘಟಕ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳ ಪ್ರಗತಿ ವೀಕ್ಷಿಸಿ, ಕಡಿಮೆ ಫಲಿತಾಂಶ ಪಡೆದ ಮಕ್ಕಳಿಗೆ ವಿಶೇಷ ತರಗತಿ ನಡೆಸಬೇಕು. ಅಂತಹ ಮಕ್ಕಳನ್ನು ಇತರೆ ಮಕ್ಕಳ ಹಂತಕ್ಕೆ ತರಲು ಎಲ್ಲ ಶಿಕ್ಷಕರೂ ಸಮಾನವಾಗಿ ಜವಾಬ್ದಾರಿ ಹಂಚಿಕೊಳ್ಳಬೇಕು. ಬರವಣಿಗೆಯ ಗುಣಮಟ್ಟ ಹೆಚ್ಚಿಸಲು ಪ್ರತಿ ದಿನ ಎರಡು ಪುಟಗಳನ್ನು ಬರೆಸಬೇಕು. ಗಟ್ಟಿಯಾಗಿ ಓದಿಸುವ ಹವ್ಯಾಸ ರೂಢಿಸಬೇಕು. ಪ್ರತಿ 15 ದಿನಗಳಿಗೆ ಒಮ್ಮೆ ಪೋಷಕರ ಸಭೆ ನಡೆಸಿ, ಮಾಹಿತಿ ನೀಡಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಸೂಚಿಸಿದೆ.
ಎಲ್ಲ ಶಾಲೆಗಳು ಕಡ್ಡಾಯವಾಗಿ ಸಿ.ಸಿ.ಟಿ.ವಿ. ಕ್ಯಾಮೆರಾ ಅಳವಡಿಸಿ- ಕೊಳ್ಳಬೇಕು. ಆಯಾ ಕ್ಷೇತ್ರ ಶಿಕ್ಷಣಾ- ಧಿಕಾರಿಗಳ ಕಚೇರಿಯಲ್ಲಿ ಕುಳಿತು ಅಧಿಕಾರಿಗಳು ವೆಬ್‌ಕಾಸ್ಟಿಂಗ್ ಮೂಲಕ ಪರೀಕ್ಷಾ ಪ್ರಕ್ರಿಯೆ ವೀಕ್ಷಿಸಬೇಕು. ಸಿ.ಸಿ. ಟಿ.ವಿ. ಕ್ಯಾಮೆರಾ ಸೌಲಭ್ಯ ಇಲ್ಲದ ಶಾಲೆಗಳು ಲಭ್ಯವಿರುವ ಸಮೀಪದ ಶಾಲೆಗಳಿಗೆ ತೆರಳಿ ಪರೀಕ್ಷೆ ಬರೆಸಬೇಕು.
ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಿದ ನಂತರ ಕಡಿಮೆ ಫಲಿತಾಂಶ ಪಡೆದ ವಿದ್ಯಾರ್ಥಿಗಳ ಜೊತೆ ಚರ್ಚಿಸಿ, ಫಲಿತಾಂಶ ವೃದ್ಧಿಗೆ ಅಗತ್ಯ ಕ್ರಮ ವಹಿಸಬೇಕು’ ಎಂದು ಶಾಲಾ ಶಿಕ್ಷಣ ಇಲಾಖೆ ಪ್ರಧಾನ ರಿತೇಶ್‌ಕುಮಾರ್ ಸಿಂಗ್ ಕಾರ್ಯದರ್ಶಿ ಅವರು ಸೂಚಿಸಿದ್ದಾರೆ.