Live Stream

[ytplayer id=’22727′]

| Latest Version 8.0.1 |

Local NewsNational NewsState News

ತಿಗಡಿ ಗ್ರಾಮದ ಶಾಲಾ ಮಕ್ಕಳಿಗೆ ಮಹಿಳೆಯರ ಮತ್ತು ಮಕ್ಕಳ ಕಳ್ಳ ಸಾಗಾಣಿಕೆ ಕುರಿತು ಜಾಗೃತಿ ಕಾರ್ಯಕ್ರಮ

ತಿಗಡಿ ಗ್ರಾಮದ ಶಾಲಾ ಮಕ್ಕಳಿಗೆ ಮಹಿಳೆಯರ ಮತ್ತು ಮಕ್ಕಳ ಕಳ್ಳ ಸಾಗಾಣಿಕೆ ಕುರಿತು ಜಾಗೃತಿ ಕಾರ್ಯಕ್ರಮ

 

ಬೆಳಗಾವಿ: ಜಿಲ್ಲೆಯ ಬೈಲಹೊಂಗಲ ತಾಲೂಕಿನ ತಿಗಡಿ ಗ್ರಾಮದ ಬಿ.ಎಸ್ ಜಕಾತಿ ಪ್ರೌಢಶಾಲೆ ಇಲ್ಲಿ ಶಾಲಾ ಮಕ್ಕಳಿಗೆ ಮತ್ತು ತಾಯಂದಿರು ಮತ್ತು ಪೋಷಕರಿಗೆ “ಸುರಕ್ಷಿತ ಗ್ರಾಮ” ಕಾರ್ಯಕ್ರಮವನ್ನ ಮಾಯ್ ಚಾಯ್ಸ್ ಫೌಂಡೇಶನ್ ಹೈದರಾಬಾದ್ ಮತ್ತು ಮಹಿಳಾ ಕಲ್ಯಾಣ ಸಂಸ್ಥೆ ಬೆಳಗಾವಿ ಮತ್ತು ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬೆಳಗಾವಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಬೆಳಗಾವಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಮಹಿಳೆಯರು ಮತ್ತು ಮಕ್ಕಳ ಕಳ್ಳ ಸಾಗಣಿಕೆ ಕುರಿತು ಜಾಗೃತಿ ಕಾರ್ಯಕ್ರಮ ನಡೆಸಲಾಯಿತು.

ಆಧುನಿಕತೆ ಬೆಳೆದಂತೆ ಅಪರಾಧ ಕೃತ್ಯ ಹಾಗೂ ಅನೈತಿಕ ಚಟುವಟಿಕೆ ಹೆಚ್ಚಾಗ ತೊಡಗಿದೆ. ಜಾಗತಿಕ ಮಟ್ಟದಲ್ಲಿ ಮಹಿಳೆಯರ ಮತ್ತು ಮಕ್ಕಳ ಸಾಗಾಣಿಕೆ ಹೆಚ್ಚಾಗುತ್ತಿರುವ ಇಂದಿನ ದಿನಮಾನಗಳಲ್ಲಿ ಇದು ಹೆಚ್ಚುತ್ತಿರುವ ಇಂದಿನ ಸಮಸ್ಯೆಯಾಗಿದೆ. ಈ ಕುರಿತು ಗ್ರಾಮೀಣ ಮಟ್ಟದಲ್ಲಿ ಸಹ ಮಹಿಳೆಯರು ಮತ್ತು ಮಕ್ಕಳು ಹೆಚ್ಚಿನ ಜಾಗೃತಿ ವಹಿಸುವುದು ಇಂದಿಗೆ ಅವಶ್ಯಕವಾಗಿದೆ ಎಂದು ಶ್ರೀಮತಿ ಸುರೇಖಾ. ಡಿ. ಪಾಟೀಲ್ ಯೋಜನಾ ನಿರ್ದೇಶಕರು “ಉಜ್ವಲ” ಮಹಿಳೆಯರ ರಕ್ಷಣೆ ಹಾಗೂ ಪುನರ್ವಸತಿ ಕೇಂದ್ರ ದೇವರಾಜ ಅರಸ್ ಕಾಲೋನಿ, ಬೆಳಗಾವಿಯವರು ಮುಖ್ಯ ಅತಿಥಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾಹಿತಿಯನ್ನು ನೀಡಿದರು.

ನಂತರ ಶ್ರೀಮತಿ ಶ್ರೀದೇವಿ ಕುಂಟೋಜಿ ಎ. ಸಿ. ಡಿ. ಪಿ. ಓ ಬೈಲಹೊಂಗಲ ಇವರು ಬಾಲ್ಯ ವಿವಾಹ ಪೋಕ್ಸೋ ಕಾಯ್ದೆ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದರು. ನಂತರ ಎಂ.ಎಂ. ಗಡಗಲಿ ಕ್ಷೇತ್ರ ತರಬೇತಿದಾರರು, ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಆಪರೇಷನ್ ರೆಡ್ ಅಲರ್ಟ್ ಕುರಿತು ವಿವರವಾದ ಮಾಹಿತಿಯನ್ನು ನೀಡಿದರು. ಆನಂತರ ಶ್ರೀಮತಿ ಭಾರತಿ ನಿಚ್ಚನಿ ಅಂಗನವಾಡಿ ಕಾರ್ಯಕರ್ತೆ ಹಾಗು ಗ್ರಾಮ ರಕ್ಷಕರು ಈ ಕುರಿತು ವಿವರವಾಗಿ ಮಾತನಾಡಿ ಸಮಸ್ಯೆಗಳ ಬಗ್ಗೆ ಮಾತನಾಡಿದರು . 10ನೇ ತರಗತಿ ವಿದ್ಯಾರ್ಥಿನಿ ಕುಮಾರಿ ವಿಜಯಲಕ್ಷ್ಮಿ ಅಡಿವೆಪ್ಪ ನಾಯ್ಕರ್ ಅವರು ಬಾಲ್ಯ ವಿವಾಹ ಕುರಿತು ಮತ್ತು ಕಾರ್ಯಕ್ರಮದ ಬಗ್ಗೆ ತಮ್ಮ ಅಭಿಪ್ರಾಯವನ್ನ ಹಂಚಿಕೊಂಡರು.

ಈ ಸಂಧರ್ಭದಲ್ಲಿ ತಿಗಡಿ ಗ್ರಾಮದ ಐ.ಸಿ.ಡಿ.ಎಸ್ ಸೂಪರ್ವೈಸರ್ ಶ್ರೀಮತಿ ಗಂಗಮ್ಮ ಡಮ್ಮನಿಗೆ, ಶ್ರೀಮತಿ ಕಲ್ಪನಾ ಡೋಂಕಣ್ಣವರ್ ಗ್ರಾಮ ಪಂಚಾಯತ್ ಅಧ್ಯಕ್ಷರು, ಶ್ರೀಮತಿ ಸವಿತಾ ಹುಕ್ಕೇರಿ ಪಂಚಾಯತ್ ಕಾರ್ಯದರ್ಶಿ, ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರು ಮಹಾಂತೇಶ್ ಜಕಾತಿ, ಉಳಿವೆಪ್ಪ ಕುರುಬರ ಗ್ರಾಮ ಪಂಚಾಯತ್ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರರಾದ, ಭಾರತೀ ನಿಚ್ಚಣಿ, ಶಶಿಕಲಾ ದಳವಾಯಿ, ಸುಶೀಲ ಪಿಸ್ಸೆ, ರೂಪ ಪಿಸ್ಸೆ, ನೀಲಾವ ಸಂಗೋಳ್ಳಿ, ಆಶಾ ಕಾರ್ಯಕರ್ತೆಯರರಾದ, ಮಲ್ಲವ್ವ ಕರೆಣ್ಣವರ್, ಈರವ್ವ ಕರೆಣ್ಣವರ್, ಸುರೇಖಾ ಅಡ್ಲೀಮಠ, ಶ್ರೀದೇವಿ ವಡಿಬಾಳಪ್ಪಗೋಳ, ಮಂಗಳಾ ದೇಸನವರ್, ಪ್ರೇಮಾ ಮಡಿವಾಳರ್ ಹಾಗೂ ಇತರರು ಉಪಸ್ಥಿತರಿದ್ದರು.

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";