ಗದಗ: ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕಡುಬಡವ ಅರ್ಹ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಧಾರವಾಡದ ವಿದ್ಯಾಪೋಷಕ ಸಂಸ್ಥೆಯು ನರ್ಚರ್ ಮೆರಿಟ್ ಯೋಜನೆಯಡಿಯಲ್ಲಿ 2025-26ನೇ ಶೈಕ್ಷಣಿಕ ಸಾಲಿಗಾಗಿ ಆರ್ಥಿಕ ಸಹಾಯವನ್ನು ನೀಡಲು ಮುಂದಾಗಿದೆ.
ಅರ್ಹತೆಗಳು:
- 10ನೇ ತರಗತಿ ನಂತರದ ಶಿಕ್ಷಣ ಮುಂದುವರಿಕೆಗಾಗಿ, ಆರ್ಥಿಕ ಸಹಾಯ್ಕಕಾಗಿ ಅರ್ಜಿ ಹಾಕಲು ವಿದ್ಯಾರ್ಥಿಗಳು ಪ್ರಥಮ ಬಾರಿ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಮಾರ್ಚ 2025ರಲ್ಲಿ ಬರೆದಿರಬೇಕು. ಮತ್ತು ಮೊದಲನೇ ಪ್ರಯತ್ನದಲ್ಲಿ ಶೇ.80%ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿ/ನಿಯರು ಈ ಅರ್ಜಿಯನ್ನು ಸಲ್ಲಿಸಲು ಅರ್ಹರಿರುತ್ತಾರೆ.
- ಪಿ.ಯು.ಸಿ. ಮೊದಲನೇ ವರ್ಷದ ವಾಣಿಜ್ಯ ಮತ್ತು ಡಿಪ್ಲೋಮಾ ಕೋರ್ಸಗೆ ಸೇರಲು ಬಯಸುವ ವಿದ್ಯಾರ್ಥಿ/ನಿಯರು ಈ ಅರ್ಜಿಯನ್ನು ಸಲ್ಲಿಸಲು ಅರ್ಹರಿರುತ್ತಾರೆ. ಕುಟುಂಬದ ವಾರ್ಷಿಕ ವರಮಾನ ರೂ. 1,20,000/- ಕ್ಕಿಂತ ಕಡಿಮೆ ಇರಬೇಕು. ವಿದ್ಯಾರ್ಥಿಯ ಪಾಲಕರು/ಪೋಷಕರು ಧಾರವಾಡ, ಗದಗ, ಹಾವೇರಿ, ಬೆಳಗಾವಿ, ಉತ್ತರ ಕನ್ನಡ, ಶಿವಮೊಗ್ಗ, ವಿಜಯಪುರ, ವಾಗಲಕೋಟೆ, ದಾವಣಗೆರೆ ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ ವಾಸವಿದ್ದವರಾಗಿರಬೇಕು.
- ವಿದ್ಯಾಪೋಷಕ ನರ್ಚರ್ ಮೆರಿಟ್ ಕಾರ್ಯಕ್ರಮವು ಸ್ವಯಂಸೇವಕರ ಲಭ್ಯತೆಯ ಮೇಲೆ ಅವಲಂಬಿತವಾಗಿರುತ್ತದೆ. ಕಾರಣ ಹೊಸ ಅರ್ಜಿಯನ್ನು 2025-26 ಪರಿಗಣಿಸುವುದು ಕೆಲವೊಂದು (ಸ್ವಯಂಸೇವಕರು ಲಭ್ಯವಿರುವ) ಜಿಲ್ಲಾ ಅಥವಾ ತಾಲೂಕುಗಳಿಗೆ ಮಾತ್ರ ಸೀಮಿತವಾಗಿರುತ್ತದೆ.
- ಧನ ಸಹಾಯದ ಅರ್ಜಿಯು ವಿದ್ಯಾಪೋಷಕ ಸಂಸ್ಥೆಯ ವೆಬಸೈಟ್ www.vidyaposhak.ngo ದಲ್ಲಿ ಲಭ್ಯವಿದೆ. ವಿದ್ಯಾರ್ಥಿಗಳು ಅರ್ಜಿಯನ್ನು ಆನ್‌ಲೈನ್ ಮೂಲಕ ಅದರಲ್ಲಿ ನಮೂದಿಸಿರುವ ಮಾಹಿತಿಯನ್ನು ತುಂಬಿ ಅಗತ್ಯ ದಾಖಲಾತಿಗಳನ್ನು ಅಪ್‌ಲೋಡ್ ಮಾಡಬೇಕು.
- ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜೂನ್ 10, 2025 ಹೆಚ್ಚಿನ ಮಾಹಿತಿಗಾಗಿ, ದೂರವಾಣಿ ಸಂಖ್ಯೆ : 0836-2747357ನ್ನು ಸಂಪರ್ಕಿಸಬಹುದು.