ಬೆಳಗಾವಿ: ಆಂಜನೇಯ ನಗರದಲ್ಲಿ ವಾಸವಿದ್ದ ಹಾಗೂ ಮೂಲತಃ ಹದಲಿ ಗ್ರಾಮದವರಾದ ಶ್ರೀಮತಿ ಅನ್ನಪೂರ್ಣ ಅಶೋಕ ಮಳಗಲಿ ಅವರು ಜುಲೈ 8 ರಂದು ಮುಂಜಾನೆ ನಿಧನರಾಗಿದ್ದಾರೆ. ಅವರು ಕೆಲ ದಿನಗಳಿಂದ ಅಸ್ವಸ್ಥರಾಗಿದ್ದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು.
ಕೃಷಿ ಮಾರುಕಟ್ಟೆ ಇಲಾಖೆಯ ನಿವೃತ್ತ ಅಧಿಕಾರಿ ಅಶೋಕ ಮಳಗಲಿ ಅವರ ಪತ್ನಿಯಾದ ಅನ್ನಪೂರ್ಣ ಅವರು, ಸಮಾಜಸೇವೆ, ಜಾಗತಿಕ ಲಿಂಗಾಯತ ಮಹಾಸಭೆಯ ಮಹಿಳಾ ಘಟಕದ ಪದಾಧಿಕಾರಿಯಾಗಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದವರು.
ಅವರು ತಮ್ಮ ಹಿಂದೆ ಪತಿ ಅಶೋಕ ಮಳಗಲಿ, ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಅವರ ನಿಧನದಿಂದ ಕುಟುಂಬದವರಷ್ಟೇ ಅಲ್ಲದೆ ಸಾಮಾಜಿಕ ವಲಯದಲ್ಲಿಯೂ ದುಃಖದ ಛಾಯೆ ಆವರಿಸಿದೆ.
ವರದಿ: ಚೇತನ ಡಿ.ಕೆ
ನಮ್ಮೂರ ಧ್ವನಿ ನ್ಯೂಸ್
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ
+91 9164577143