ಬೆಳಗಾವಿ ನ.೧೧ (ಕರ್ನಾಟಕ ವಾರ್ತೆ): ೨೦೨೪-೨೫ ನೇ ಸಾಲಿನಲ್ಲಿ ಬೆಳಗಾವಿ ಜಿಲ್ಲೆಯ ಹೊಸದಾಗಿ ಮಂಜೂರಾಗಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ಬಂತರದ ಬಾಲಕರ-೦೪ ಬಾಲಕಿಯರ-೦೨ ಒಟ್ಟು ೬ ವಿದ್ಯಾರ್ಥಿನಿಲಯಗಳ ನಿರ್ವಹಣೆಗಾಗಿ ಬಾಡಿಗೆ ಕಟ್ಟಡಗಳನ್ನು ಪಡೆಯಲು ಬಾಡಿಗೆ ಮಾಲೀಕರಿಂದ ಅರ್ಜಿ ಆಹ್ವಾನಿಸಲಾಗಿದೆ.
ಹುಕ್ಕೇರಿ ತಾಲ್ಲೂಕಿನ ನಿಡಸೋಶಿ, ಚಿಕ್ಕೋಡಿ, ಬೆಲಹೊಂಗಲ ತಾಲೂಕಿನ ನಾಗನೂರು ಒಟ್ಟು ೪ ಬಾಲಕರ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯ ಹಾಗೂ ರಾಮದುರ್ಗ ತಾಲೂಕಿನ ಸುರೇಬಾನ, ಸವದತ್ತಿ ತಾಲೂಕಿನ ಯರಗಟ್ಟಿ ಒಟ್ಟು ೨ ಬಾಲಕಿಯರ ವಿದ್ಯಾರ್ಥಿನಿಯಗಳನ್ನು ಪ್ರಾರಂಭಿಸಲಾಗಿದೆ. ಪ್ರತಿ ವಿದ್ಯಾರ್ಥಿನಿಲಯವು ೧೦೦ ಸಂಖ್ಯಾಬಲದ ಮಂಜೂರಾತಿ ಹೊಂದಿದ್ದು, ಈ ವಿದ್ಯಾರ್ಥಿನಿಲಯಗಳ ನಿರ್ವಹಣೆಗೆ
ಬಾಡಿಗೆ ಕಟ್ಟಡಗಳ ಅವಶ್ಯಕತೆ ಇರುವುದರಿಂದ ಲೋಕೋಪಯೋಗಿ ಇಲಾಖೆ ನಿಗಧಿಪಡಿಸಿದ ಮಾಸಿಕ ಬಾಡಿಗೆ ಆಧಾರದ ಮೇಲೆ ಕಟ್ಟಡಗಳನ್ನು ಕೊಡಲು ಇಚ್ಛಿಸುವ ಕಟ್ಟಡ ಮಾಲೀಕರು ಅರ್ಜಿ ಸಲ್ಲಿಸಬಹುದು.
ಆಸಕ್ತ ಮಾಲೀಕರು ನ.೨೦ ರೊಳಗಾಗಿ ಕಟ್ಟಡ ನಕ್ಷೆ ಇತ್ಯಾದಿ ಮಾಹಿತಿಗಳೊಂದಿಗೆ ಒಪ್ಪಿಗೆ ಪತ್ರವನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ಕಚೇರಿಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾ