Live Stream

[ytplayer id=’22727′]

| Latest Version 8.0.1 |

Local NewsState News

ವೀರಶೈವ ಲಿಂಗಾಯತ ಸಮಾಜದ ವಿದ್ಯಾರ್ಥಿನಿಯರ ವಸತಿ ನಿಲಯಕ್ಕೆ ಅರ್ಜಿ ಆಹ್ವಾನ

ವೀರಶೈವ ಲಿಂಗಾಯತ ಸಮಾಜದ ವಿದ್ಯಾರ್ಥಿನಿಯರ ವಸತಿ ನಿಲಯಕ್ಕೆ ಅರ್ಜಿ ಆಹ್ವಾನ

ಅರ್ಜಿ ಸಲ್ಲಿಕೆ ದಿನಾಂಕವನ್ನು ಜುಲೈ 5ರವರೆಗೆ ವಿಸ್ತರಣೆ

ಬೆಳಗಾವಿ: ಜಿಲ್ಲೆಯ ಸುಭಾಷ ನಗರದಲ್ಲಿ ನೂತನವಾಗಿ ನಿರ್ಮಿತವಾದ ‘ವೀರಶೈವ ಲಿಂಗಾಯತ ಮಹಿಳಾ ವಸತಿ ಗೃಹ, ಕ್ಷೇಮಾಭಿವೃದ್ಧಿ ಸಂಘ, ಬೆಳಗಾವಿ’ದಿಂದ ಬಡ ವಿದ್ಯಾರ್ಥಿನಿಯರಿಗಾಗಿ ಉಚಿತ ವಸತಿ ಸೌಲಭ್ಯ ಒದಗಿಸುವ ಉದ್ದೇಶದಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆದಿನವನ್ನು ಜುಲೈ 5, 2025ರ ವರೆಗೆ ವಿಸ್ತರಿಸಲಾಗಿದೆ.

ಈ ವಸತಿ ನಿಲಯಕ್ಕೆ ವೀರಶೈವ ಲಿಂಗಾಯತ ಸಮಾಜಕ್ಕೆ ಸೇರಿದವರು ಹಾಗೂ ಪಿಯುಸಿ, ಪದವಿ, ಇಂಜಿನಿಯರಿಂಗ್, ಎಂಬಿಬಿಎಸ್, ಡಿಪ್ಲೋಮಾ ಕೋರ್ಸುಗಳಲ್ಲಿ ಅಧ್ಯಯನ ಮಾಡುತ್ತಿರುವ ಬಡ ವಿದ್ಯಾರ್ಥಿನಿಯರು ಮಾತ್ರ ಅರ್ಹರಾಗಿರುತ್ತಾರೆ.

ಅರ್ಜಿ ಸಲ್ಲಿಕೆ ವಿಳಾಸ:
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ,
ಲಿಂಗಾಯತ ಭವನ, ಶಿವಬಸವನಗರ,
ಬೆಳಗಾವಿ, ತಾಲ್ಲೂಕು ಮತ್ತು ಜಿಲ್ಲೆ: ಬೆಳಗಾವಿ.

ಅರ್ಜಿ ಜೊತೆಗೆ ಲಗತ್ತಿಸಬೇಕಾದ ದಾಖಲೆಗಳು:

  • ಕಾಲೇಜು ಪ್ರವೇಶ ರಸೀದಿ
  • ಬಿಪಿಎಲ್ ಕಾರ್ಡ್ ಪ್ರತಿ
  • ಆಧಾರ್ ಕಾರ್ಡ್
  • ರಹವಾಸಿಯ ದೃಢೀಕೃತ ಪ್ರಮಾಣ ಪತ್ರ

ಹೆಚ್ಚಿನ ಮಾಹಿತಿಗೆ ಬೆಳಗಾವಿ ಮಹಾಸಭೆ ಜಿಲ್ಲಾ ಘಟಕದ ಕಚೇರಿಗೆ (ದೂರವಾಣಿ: 0831 2475145) ಅಥವಾ ಪ್ರವೀಣ ತವಕರಿ (ಮೊಬೈಲ್: 6366316671) ಅವರನ್ನು ಸಂಪರ್ಕಿಸಬಹುದು.

ಈ ಕುರಿತು ಮಾಹಿತಿಯನ್ನು ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷೆ ಶ್ರೀಮತಿ ರತ್ನಪ್ರಭಾ ಬೆಲ್ಲದ ಹಾಗೂ ವಸತಿ ನಿಲಯದ ಕಾರ್ಯದರ್ಶಿ ಡಾ. ಪ್ರೀತಿ ದೊಡವಾಡ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವರದಿ: ಚೇತನ ಡಿ.ಕೆ
ನಮ್ಮೂರ ಧ್ವನಿ ನ್ಯೂಸ್
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ
+91 9164577143

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";