======================
1965 ಏಪ್ರಿಲ್ 2 ರಂದು ಕರ್ನಾಟಕ ರಾಜ್ಯ ಪೊಲೀಸ್ ಕಾಯ್ದೆ ಜಾರಿಯಲ್ಲಿ ಬಂದಿದ್ದು, ಈ ದಿನವನ್ನು ಪೊಲೀಸ್ ಧ್ವಜ ದಿನಾಚರಣೆಯನ್ನಾಗಿ ಆಚರಿಸಿ ಪೊಲೀಸ್ ಸೇವೆಯಲ್ಲಿ ಇರುವವರೆಲ್ಲರೂ ತಮ್ಮನ್ನು ಸೇವೆಗೆ ಪುನರ್ ಸಮರ್ಪಿಸಿಕೊಳ್ಳುವುದಲ್ಲದೇ, ಈ ದಿನವನ್ನು “ಪೊಲೀಸ್ ಕಲ್ಯಾಣ ದಿನ” ವನ್ನಾಗಿ ಕೂಡಾ ಆಚರಿಸಲಾಗುತ್ತದೆ. ಈ ವಿಶೇಷ ದಿನದಂದು ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರನ್ನು ನೆನಸಿ ಅವರ ಕಲ್ಯಾಣ ಕಾರ್ಯಕ್ರಮವನ್ನು ಚಿಂತಿ ಸಲಾಗುತ್ತದೆ. ಪೊಲೀಸ್ ಪಡೆಯ ಸೇವೆ, ಶೌರ್ಯ ,ಕರ್ತವ್ಯ ನಿಷ್ಠೆಗೆ ಹಾಗೂ ಸಮರ್ಪಣಾ ಮನೋಭಾವವನ್ನು ಗೌರವಿಸುವ ಹಾಗೂ ಪುರಸ್ಕರಿಸುವ ದಿನ – ಪೊಲೀಸ್ ಧ್ವಜ ದಿನಾಚರಣೆ!
ಶೌರ್ಯ, ಸೇವೆ, ತ್ಯಾಗ ಮತ್ತು ಪ್ರಾಮಾಣಿಕತೆಯ ಪ್ರತೀಕ ಪೊಲೀಸ್ ಧ್ವಜ. ನಮ್ಮ ರಕ್ಷಕರ ಸಮರ್ಪಣಾ ಮನೋಭಾವಕ್ಕೆ ಕೃತಜ್ಞತೆ ಸಲ್ಲಿಸೋಣ.
ಕಾನೂನು ಸುವ್ಯವಸ್ಥೆ ಕಾಪಾಡಲು ಹಗಲಿರುಳೆನ್ನದೆ ಶ್ರಮಿಸುವ ನಮ್ಮ ಎಲ್ಲಾ ಪೊಲೀಸರಿಗೆ ಗೌರವದ ನಮನಗಳು.
ಕವನ : ಉಂಟು ಉಂಟು
=======================
“ರಕ್ಷಕ”ನಾಗಿ ನನ್ನಲ್ಲಿಯು ಆಸೆ ಉಂಟು
ನಿನ್ನಲ್ಲಿಯು ಆಸೆ ಉಂಟು
ಯಾರಲ್ಲಿ ಆಸೆ ಇಲ್ಲ ಹೇಳುಂಟು..? //
” ಕರ್ತವ್ಯನಿಷ್ಠ”ನಾಗಿ ನನ್ನಲ್ಲಿ ಕನಸು ಉಂಟು
ನಿನ್ನಲ್ಲಿ ಕನಸು ಉಂಟು
ಯಾರಲ್ಲಿ ಕನಸಿಲ್ಲ ಹೇಳುಂಟು..? //
“ಆರಕ್ಷಕ”ನಾಗಿ ನನ್ನಲ್ಲಿ ಹೃದಯ ಉಂಟು
ನಿನ್ನಲ್ಲಿ ಹೃದಯ ಉಂಟು
ಯಾರಲ್ಲಿ ಹೃದಯವಿಲ್ಲ ಹೇಳುಂಟು..? //
“ಯೋಧ”ನಾಗಿ ನನ್ನಲ್ಲಿ ಮನಸ್ಸು ಉಂಟು
ನಿನ್ನಲ್ಲಿ ಮನಸ್ಸು ಉಂಟು
ಯಾರಲ್ಲಿ ಮನಸ್ಸಿಲ್ಲ ಹೇಳುಂಟು..? //
“ಸಮಾಜ ಸೇವಕ”ನಾಗಿ ನನ್ನಲ್ಲಿ ದ್ವೇಷ ಉಂಟು
ನಿನ್ನಲ್ಲಿ ದ್ವೇಷ ಉಂಟು
ಯಾರಲ್ಲಿ ದ್ವೇಷ ಇಲ್ಲ ಹೇಳುಂಟು..? //
“ಸೈನಿಕ”ನಾಗಿ ನನ್ನಲ್ಲಿ ಪ್ರೀತಿ ಉಂಟು
ನಿನ್ನಲ್ಲಿ ಪ್ರೀತಿ ಉಂಟು
ಯಾರಲ್ಲಿ ಪ್ರೀತಿ ಇಲ್ಲ ಹೇಳುಂಟು..? //
“ಪೊಲೀಸ ಪೇದೆ” ಯಾಗಿ ಮಾನವ ಜನ್ಮ ಶ್ರೇಷ್ಠವುಂಟು
ನಿಸ್ವಾರ್ಥ ಸೇವೆ ಮಾಡಿದರೆ ಉಂಟು
ಜಗದಲಿ ನಿನ್ನ ಹೆಸರು ಅಮರ ಉಂಟು..//
======================
ಶ್ರೀ ಚನ್ನಬಸಪ್ಪ ಬಳಗಾರ
(ಮಾಜಿ ಸೈನಿಕ) ಪೊಲೀಸ ಇಲಾಖೆ
ಉಡುಪಿ ಜಿಲ್ಲೆ ಸಶಸ್ತ್ರ ಮೀಸಲು ಪಡೆ
ಹವ್ಯಾಸಿ ಬರಹಗಾರ, ಕಾರ್ಗಿಲ್ ಯೋಧ, ರಾಜ್ಯ ಪ್ರಶಸ್ತಿ ಪುರಸ್ಕೃತ.