ಬೆಳಗಾವಿ: ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಗೆ ಆಟೋ ಕೊಚ್ಚಿಕೊಂಡು ಹೋಗಿ ಚಾಲಕ ಸಾವನ್ನಪ್ಪಿದ ಘಟನೆ ಯರಗಟ್ಟಿ ತಾಲೂಕಿನ ಚಿಕ್ಕಬೂದನೂರ ಗ್ರಾಮದಲ್ಲಿ ನಡೆದಿದೆ.
ಮಳೆರಾಯನ ಅರ್ಭಟದಿಂದ ಗ್ರಾಮದ ಹೊರವಲಯದ ಹಳ್ಳ ಮೈತುಂಬಿ ಹರಿಯುತ್ತಿದ್ದು, ಹಳ್ಳದ ಬಳಿ ಆಟೋ ದಾಟಿಸುವಾಗ ನೀರಿನ ರಭಸಕ್ಕೆ ಆಟೋ ಕೊಚ್ಚಿಕೊಂಡು ಹೋಗಿ ಈ ದುರ್ಘಟನೆ ಸಂಭವಿಸಿದೆ. ಆಟೋ ಚಾಲಕನ ಮೃತದೇಹಕ್ಕಾಗಿ ಗ್ರಾಮಸ್ಥರು ಹಾಗೂ ಪೊಲೀಸರು ಹುಡುಕಾಟ ನಡೆಸಿದ್ದಾರೆ.