ಯಮಕನಮರಡಿ: ಇಂದಿನ ಯುವಜನತೆ ವಿವಿಧ ಸಮಸ್ಯೆಗಳಿಗೆ ಬಲಿಯಾಗುತ್ತಿದ್ದಾರೆ. ಅತಿಯಾದ ಮೊಬೈಲ್ ಬಳಕೆ, ಪ್ರೇಮ ಪ್ರಕರಣಗಳ ಹೆಚ್ಚಳ, ಪೊಕ್ಸೋ ಕೇಸಗಳು. ಯುವಜನತೆಯನ್ನು ದಾರಿತಪ್ಪಿಸುತ್ತಿವೆ. ಕಳ್ಳಸಾಗಾಣಿಕೆ, ಬಿಕ್ಷಾಟಣೆಗಾಗಿ ಮುಗ್ಧ ಹೆಣ್ಣು ಮಕ್ಕಳನ್ನು ಮಾರಾಟಮಾಡುವ ಪ್ರಕರಣಗಳು ತಡೆಯುವ ನಿಟ್ಟಿನಲ್ಲಿ ಕಿಶೋರಿಯರು ಎಚ್ಚರದಿಂದರಬೇಕೆoದು. ಶಕ್ತಿಸದನ ಮಹಿಳಾ ಪುನರ್ವಸತಿ ಕೇಂದ್ರದ ಯೋಜಾನಾ ನಿರ್ದೇಶಕಿ ಸುರೇಖಾ ಪಾಟೀಲ್ ಅಭಿಪ್ರಯಪಟ್ಟರು.
ಲೈಂಗಿಕ ಶೋಷಣೆ ಅಂಗಾಂಗ ವ್ಯಾಪಾರ, ತಡೆಗೆ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು, ಮಹಿಳೆಯರು ಆಮಿಷಗಳಿಗೆ ಬಲಿಯಾಗಿ ಮೋಸ ಹೋಗುವುದನ್ನು ತಡೆಯಬೇಕೆಂದರು.
ಹುಕ್ಕೇರಿ ತಾಲೂಕಿನ ಉಳ್ಳಾಗಡ್ಡಿ ಖಾನಾಪೂರ ಗ್ರಾಮದ ಡಿ.ಬಿ. ಹೆಬ್ಬಾಳಿ ಸರಕಾರಿ ಪದವಿ ಪೂರ್ವ ಕಾಲೇಜನಲ್ಲಿ ಕಿಶೋರಿಯರಿಗಾಗಿ ಮಕ್ಕಳ ಅಭಿವೃದ್ಧಿ ಇಲಾಖೆ, ಮಹಿಳಾ ಕಲ್ಯಾಣ ಸಂಸ್ಥೆ, ಹಾಗೂ ವಿಹಾನ ಸಂಸ್ಥೆ ಜಂಟಿಯಾಗಿ ಆಯೋಜಿಸಿದ್ದಮಾಣವ ಕಳ್ಳ ಸಾಗಾಣಿಕೆ ವಿರೋಧಿ ದಿನದ ಅಂಗವಾಗಿ ಕಿಶೋರಿಯರಿಗೆ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಅತಿಥಿಯಾಗಿ ಅಗಮಿಸಿದ್ದ ಯಮಕನಮರಡಿ ಪೋಲಿಸ ಠಾಣೆಯ ಪಿ.ಎಸ್.ಆಯ್ ಎಂ. ಕೆ. ಮುಗಳಿ ಮಾತನಾಡಿ ಇಲಾಖೆಯ ಮೂಲಕ ಮಹಿಳೆಯರ ಸುರಕ್ಷತೆ, ಸೈಬರ ಕ್ರೆöಗಳು. ಡಿಜಿಟಲ್ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ಆದರೂ ನಿರಂತರ ಕಾನೂನು ಬಾಹಿರ ಚಟುವಟಿಕೆಗಳು ಹೆಚ್ಚುತ್ತಿವೆ, ಯುವಜನರು ಹೆಚ್ಚಿನ ಕಾಳಜಿವಹಿಸಿ ಸುರಕ್ಷಿತವಾಗಿರಬೆಕೇಂದರು.
ಇನ್ನೊರ್ವ ಅತಿಥಿ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಹಾದೇವ ಕೋಳಿ ಮಾತನಾಡಿ, ಬಾಲ್ಯವಿವಾಹ ಪ್ರಕರಣಗಳನ್ನು ತಡೆಯುವಲ್ಲಿ ಸರ್ವರ ಸಹಕಾರ ಅಗತ್ಯ ಸ್ವಯಂ ಸೇವಾ ಸಂಸ್ಥೆಗಳು, ಸರಕಾರ, ಚುನಾಯಿತ ಪ್ರತಿನಿದಿಗಳ ಸಹಕಾರದಿಂದ ಸಮಸ್ಯೆ ಬಗೆಹರಿಯಸಬೇಕಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯ ಎಂ. ಎಂ. ಮಗದುಮ್ ವಹಿಸಿದ್ದರು. ಕಾಲೇಜು ಅಭಿವೃದ್ದಿ ಸಮಿತಿ ಮಹಾವೀರ ಪಣಕಿ, ಸುಭಾಷ ಹೆಬ್ಬಾಳಿ, ವೈಜಯಂತಿ ಚೌಗಲಾ, ರೇಖಾ ಬೇನವಾಡ ಉಪಸ್ಥಿತರಿದ್ದರು, ಉಪನ್ಯಾಸಕಿ ಶ್ರೀಮತಿ ದಾನಮ್ಮಾ ಕೊಣ್ಣುರ ನಿರುಪಿಸಿದರು. ಶಿವಾನಂದ ಮಠಪತಿ ವಂದಿಸಿದರು.
ವರದಿ: ಚೇತನ ಡಿ.ಕೆ
ನಮ್ಮೂರ ಧ್ವನಿ ನ್ಯೂಸ್
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ
+91 9164577143