ಖಾದರವಾಡಿ: ಸ್ವ ಸಹಾಯ ಸಂಘಗಳ ಮಹಿಳೆಯರಿಗೆ / ಪಂಚಾಯತಿ ಪ್ರತಿನಿಧಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮ ಜರುಗಿತು.
ಇಂದಿನ ಆಧುನಿಕ ಜೀವನದ ಶೈಲಿಯ ಅನುಕರಣೆ, ತ್ಯಾಜ್ಯದ ಅಸಮರ್ಪಕ ನಿರ್ವಹಣೆ, ನಮ್ಮ ಬೇಜವಾಬ್ದಾರಿ, ಅಸಡ್ಡೆ ಇತ್ಯಾದಿ ಕಾರಣಗಳಿಂದ ನಮ್ಮ ಪರಿಸರದಲ್ಲಿ ಅನೇಕ ತೊಂದರೆಗಳು ಆಗುತ್ತಲಿವೆ. ಆರೋಗ್ಯ ಸಮಸ್ಯೆ, ಮಣ್ಣಿನ ಮಾಲಿನ್ಯ ಹಾಗೂ ಜಾಲಾನ್ಮೂಲಗಳ ಮಾಲಿನ್ಯ, ಪ್ರಾಣಿ ಪಕ್ಷಿಗಳ ಜೀವಕ್ಕೆ ತೊಂದರೆ, ಹವಾಮಾನವಪಾರೀತ್ಯ, ಭೂಮಿಯ ತಾಪಮಾನ ಹೆಚ್ಚಳ ಇತ್ಯಾದಿ ಸಮಸ್ಯೆಗಳು ಉಂಟಾಗುತ್ತಿವೆ. ರಾಜ್ಯವನ್ನು ಸ್ವಚ್ಚ ಸುಂದರವಾನ್ನಾಗಿಸಲು ತ್ಯಾಜ್ಯವನ್ನು ವೈಜ್ಞಾನಿಕವಾಗಿ ನಿರ್ವಹನೆ ಮಾಡಬೇಕಿದೆ ಎಂದು ಶ್ರೀಮತಿ : ಸುರೇಖಾ ಡಿ. ಪಾಟೀಲ್, ಸಂಪನ್ಮೂಲ ವ್ಯೆಕ್ತಿಗಳು ಅಭಿಪ್ರಾಯಾಪಟ್ಟರು.
ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆ, ಬೆಂಗಳೂರು, ಮಹಿಳಾ ಕಲ್ಯಾಣ ಸಂಸ್ಥೆ, ಬೆಳಗಾವಿ ಅವರುಗಳ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಪಂಚಾಯತ್ ಬೆಳಗಾವಿ ಅವರ ಸಹಕಾರದೊಂದಿಗೆ “ನಮ ನಡೆ ಸುಸ್ಥಿರ ಸ್ವಚ್ಛತೆ ಕಡೆ ” ಕಾರ್ಯಕ್ರಮದಡಿ ಝಾಫರವಾಡಿ ಗ್ರಾಮದ ಕ್ಷೇತ್ರ ಮಟ್ಟದ ಸ್ವ ಸಹಾಯ ಮಹಿಳೆಯರಿಗೆ ಒಂದು ದಿನದ ಅರಿವು ಮೂಡಿಸುವ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ : ಮಲಪ್ರಭಾ ಪಾಟೀಲ್, ವಹಿಸಿದ್ದರು. ಪ್ರಾಸ್ತಾವಿಕವಾಗಿ ಶ್ರೀ ಎಂ. ಎಂ. ಗಡಗಲಿ, ಸಂಪನ್ಮೂಲ ವ್ಯೆಕ್ತಿಗಳು ಮಾತನಾಡಿದರು. ಶ್ರೀ ಬಸವರಾಜ ಮಣ್ಣಿಕೇರಿ, ಶ್ರೀ ಸಿದ್ದಪ್ಪ ಹಿತ್ತಲಮಾಣಿ ತರಬೇತಿದಾರರು ವಿವಿಧ ವಿಷಯಗಳ ಕುರಿತು ತರಬೇತಿ ನೀಡಿದರು. ಶ್ರೀಮತಿ : ರೇಖಾ ಬಸಪ್ಪ ಮಾಡ ಜೆ. ವಿ. ಸಮನ್ವಯಧಿಕಾರಿ ಅವರು ಕಾರ್ಯಕ್ರಮ ನಿರೂಪಣೆ ಮಾಡಿದರು. ಶ್ರೀಮತಿ : ಲತಾ ನೇಸರಕರ ಅವರ ವಂದನಾರ್ಪನೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.