ಬೆಳಗಾವಿ: ಜಿಲ್ಲೆಯ ಬೈಲಹೊಂಗಲ ತಾಲೂಕಿನ ಕಲ್ಲೂರು, ಮರಡಿನಾಗಲಾಪುರದಲ್ಲಿ ಮಾಯ್ ಚಾಯ್ಸ್ ಫೌಂಡೇಶನ್, ರೆಡ್ ಅಲರ್ಟ್ ಮತ್ತು ಮಹಿಳಾ ಕಲ್ಯಾಣ ಸಂಸ್ಥೆ ಬೆಳಗಾವಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಮಹಿಳೆಯರ ಮತ್ತು ಮಕ್ಕಳ ಸಾಗಾಣಿಕೆ ಕುರಿತು ಜಾಗೃತಿ ಕಾರ್ಯಕ್ರಮ ಜರುಗಿತು.
ಸುರಕ್ಷಿತ ಗ್ರಾಮ ಕಾರ್ಯಕ್ರಮ ಕಲ್ಲೂರ ಸರಕಾರಿ ಕಿ. ಪ್ರಾ. ಶಾಲೆ, ಇಲ್ಲಿ ಗುಡ್ ಟಚ್ ಮತ್ತು ಬ್ಯಾಡ ಟಚ್, ಕಲ್ಲೂರ ಅಂಗನವಾಡಿ ಕೇಂದ್ರದಲ್ಲಿ ತಾಯಂದಿರ ಸಭೆ, ಸರಕಾರಿ ಪ್ರೌಢ ಶಾಲೆ ಮರಡಿನಾಗಲಾಪುರ ಇಲ್ಲಿ ಮಹಿಳೆಯರ ಮತ್ತು ಮಕ್ಕಳ ಕಳ್ಳ ಸಾಗಣಿಕೆ ಕುರಿತು ಜಾಗೃತಿ ಕಾರ್ಯಕ್ರಮ ನಡೆಸಲಾಯಿತು.
ಈ ಸಂಧರ್ಭದಲ್ಲಿ, ಮಹಿಳಾ ಕಲ್ಯಾಣ ಸಂಸ್ಥೆಯ ಸಂಸ್ಥಾಪಕರಾದ ಎಂ.ಎಸ ಚೌಗಲಾ, ಸುರಕ್ಷಿತ ಗ್ರಾಮ ಕಾರ್ಯಕ್ರಮದ ಕ್ಷೇತ್ರ ತರಬೇತುದಾರರು ಎಂ.ಎಂ. ಗಡಗಲಿ, ಸರಕಾರಿ ಕಿ. ಪ್ರಾ. ಶಾಲೆ ಕಲ್ಲೂರಿನ ಮುಖ್ಯ ಶಿಕ್ಷಕರಾದ ಶ್ರೀಮತಿ ಪಿ.ಬಿ.ಭಜಂತ್ರಿ, ಸರಕಾರಿ ಪ್ರೌಢ ಶಾಲೆ ಮರಡಿನಾಗಲಾಪುರದ ಮುಖ್ಯ ಶಿಕ್ಷಕರಾದ ಬಸವರಾಜ್ ಹುಡೇದ್, ನೋಡೆಲ್ ಶಿಕ್ಷಕರಾದ ಎಸ.ಎಸ. ಕುರಿ, ಎಸ.ಡಿ.ಎಂ.ಸಿ ಚೇರ್ಮೆನ್ ಎಸ.ವೈ. ನರಸಣ್ಣವರ, ಅಂಗನವಾಡಿಯ ಸಿಬ್ಬಂದಿಗಳು, ಮಕ್ಕಳು ಹಾಗೂ ಗುರು ಹಿರಿಯರು ಉಪಸ್ಥಿತರಿದ್ದರು.