ದೇಸೂರ: ಇಲ್ಲಿನ ಲಕ್ಷ್ಮೀ ದೇವಸ್ಥಾನದಲ್ಲಿ, ಮಾಯ್ ಚಾಯ್ಸಿಸ್ ಫೌಂಡೇಶನ್, ಹೈದರಾಬಾದ್ ‘ಆಪರೇಶನ್ ರೆಡ್ ಅಲರ್ಟ’ ಮತ್ತು ಮಹಿಳಾ ಕಲ್ಯಾಣ ಸಂಸ್ಥೆ, ಬೆಳಗಾವಿ ಅವರುಗಳ ಸಂಯುಕ್ತ ಆಶ್ರಯದಲ್ಲಿ “ಸುರಕ್ಷಿತ ಗ್ರಾಮ ಯೋಜನೆ” ಕಾರ್ಯಕ್ರಮ ಜರುಗಿತು. ಇಲ್ಲಿ ಮಹಿಳೆಯರ ಮತ್ತು ಮಕ್ಕಳ ಕಳ್ಳ ಸಾಗಾಣಿಕೆ ಯಾವ ರೀತಿ ನಡೆಯುತ್ತಿದೆ ಎಂಬ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿ ಈ ಸಮಸ್ಯೆಗೆ ನಾವೆಲ್ಲ ಜಾಗ್ರತಿ ಹೊಂದುವದು ಇಂದಿನ ಅವಶ್ಯಕತೆ ಮತ್ತು ಅನಿವಾರ್ಯತೆ ಆಗಿದೆ ಎಂದು ತಿಳಿಸಲಾಯಿತು.
ಆನಂತರ ಅಮಾಯಕ ಹುಡುಗಿಯರನ್ನು ಮತ್ತು ಮಹಿಳೆಯರನ್ನು ಲೈಂಗಿಕ ಮತ್ತು ಗುಲಾಮಗಿರಿಗೆ ಎಗ್ಗಿಲ್ಲದೆ ಕಳ್ಳಸಾಗಾಣಿಕೆ ಮಾಡಲಾಗುತ್ತಿದೆ. ಕೇವಲ ಸುಲಭದಲ್ಲಿ ಹಣ ಮಾಡುವ ಉದ್ದೇಶದಿಂದ ಇಂತಹ ಸಮಾಜ ಘಾತುಕ ಕೆಲಸಗಳಲ್ಲಿ ತೊಡಗಿರುತ್ತಾರೆ. ಇದು ಮಹಿಳೆ ಮತ್ತು ಹುಡುಗಿಯರ ವಿರುಧ್ಧ ನಿಂದನೆ ಹಿಂಸಾಚಾರ ಮತ್ತು ಶೋಷನೆಯನ್ನು ಕೊನೆಗೊಳಿಸಲು ನಡೆಸಿರುವ ಜಾಗೃತಿ ಕಾರ್ಯಕ್ರಮ ಇದಾಗಿದೆ ಎಂದು ಶ್ರೀಮತಿ ಸುರೇಖಾ ಡಿ. ಪಾಟೀಲ, ಯೋಜನಾ ನಿರ್ದೇಶಕರು, “ಉಜ್ವಲಾ” ಮಹಿಳೆಯರ ರಕ್ಷಣೆ ಮತ್ತು ಪುನರ್ವಸತಿ ಕೇಂದ್ರ, ಬೆಳಗಾವಿ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಸ್ಥಳೀಯ ದೇಸೂರ ಹೈಸ್ಕೂಲ್ ದೇಸೂರ ಉಭಯ ಶಾಲೆಗಳ ಮಕ್ಕಳನ್ನು ಉದ್ದೇಶಿಸಿ ಮಹಿಳೆಯರ ಮತ್ತು ಮಕ್ಕಳ ಕಳ್ಳ ಸಾಗಾಣಿಕೆ ಅಂದರೇನು ಎಂಬುದನ್ನು ವಿವರಿಸುತ್ತಾ, ಸಾಗಾಣಿಕೆಯ ವಿವಿಧ ಮುಖಗಳಾದ ಜೀತ, ಮನೆ ಕೆಲಸ, ಕೃಷಿ ಹಾಗೂ ಕೂಲಿ ಕೆಲಸ, ಕಟ್ಟಡ ಕೆಲಸ, ಲೈಂಗಿಕ ದೌರ್ಜನ್ಯ, ಅಂಗಾ0ಗಗಳ ಮಾರಾಟ, ಮಾದಕ ವಸ್ತುಗಳ ಮಾರಾಟ / ಸಾಗಣೆ, ಭಿಕ್ಷಾಟನೆ, ಒತ್ತಾಯ ಪೂರ್ವಕ ವೇಶ್ಯಾವಾಟಿಕೆ, ವಿವಾಹದ ನೆಪದಲ್ಲಿ ಸಾಗಾಣಿಕೆ, ಅಶ್ಲೀಲಚಿತ್ರದಲ್ಲಿ ಮಕ್ಕಳ ಬಳಕೆ ಕುರಿತು ಉದಾಹರನೆಗಳೊಂದಿಗೆ ತಿಳಿಸಲಾಯಿತು.
ಕಳ್ಳ ಸಾಗಾಣಿಕೆ ತಡೆಯುವಲ್ಲಿ ಮಕ್ಕಳಿಗೆ ತಮ್ಮನ್ನು ರಕ್ಷಿಸಿಕೊಳ್ಳುವದರ ಜೊತೆಗೆ ತನ್ನ ಸ್ನೇಹಿತರನ್ನು ರಕ್ಷಿಸವ ಕುರಿತು ತಿಳುವಳಿಕೆಯನ್ನು ಎಂ. ಎಂ. ಗಡಗಲಿ, ಫೀಲ್ಡ ಟ್ರೇನರ, ಅವರು ನೀಡಿದರು.
ಈ ಕಾರ್ಯಕ್ರಮದಲ್ಲಿ, ದೇಸೂರ ಗ್ರಾಮ ಪಂಚಾಯತ ಸದಸ್ಯರಾದ ಶ್ರೀಮತಿ ಕವಿತಾ ಜ್ಯೋತಿಬಾ ಗುರವ, ಶ್ರೀಮತಿ ವಿದ್ಯಾ ಸತೀಶ ಮನವಾಡಕರ, ಆಶಾ ಕಾರ್ಯಕರ್ತೆಯರಾದ ಶ್ರೀಮತಿ ಮಲ್ಲಮ್ಮಾ ಸಂಬರಗಿಮಠ, ಸುನಿತಾ ಕಾರ್ಯಕರ್ತೆಯರಾದ ವಾಕೇಕರ, ಮಂಜುಳಾ ಎಚ್, ಆಶಾ ಶ್ರೀಮತಿ ಪ್ರೇಮಾ ಹಂಪನ್ನವರ್, ಶಾಂತಾ ಬಾಂಡಗಿ, ಕಾಂಚನಾ ಪಾಟೀಲ ಅವರುಗಳು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ
ತಾಯಂದಿರು ಉಪಸ್ಥಿರಿದ್ದರು.
ಶ್ರೀಮತಿ ರೇಖಾ ಲೋಹಾರ ಅಂಗನವಾಡಿ ಕಾರ್ಯಕರ್ತೆಯರು, ಎಲ್ಲರನ್ನು ಸ್ವಾಗತಿಸಿ, ಕಾರ್ಯಕ್ರಮ ನಿರೂಪನೆ ಮಾಡಿ, ಅವರ ವಂದನಾರ್ಪನೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.