ಬೆಳಗಾವಿ: ಬಿ.ಕಾಂ ದ್ವಿತೀಯ ಸೆಮಿಸ್ಟರ್ಗೆ ಅರ್ಥಶಾಸ್ತ್ರ ವಿಷಯವನ್ನು ಮುಂದುವರಿಸುವಂತೆ ಮನವಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ವ್ಯಾಪ್ತಿಯ ಮಹಾವಿದ್ಯಾಲಯಗಳಲ್ಲಿ ಬಿ.ಕಾಂ ಎರಡನೇ ಸೆಮಿಸ್ಟರ್ ನಲ್ಲಿ ಅರ್ಥಶಾಸ್ತ್ರ ವಿಷಯವನ್ನು ಮುಂದುವರಿಸುವಂತೆ ಹುಕ್ಕೇರಿಯಲ್ಲಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಲೋಕೋಪಯೋಗಿ ಸಚಿವರಾದ ಶ್ರೀ ಸತೀಶ್ ಜಾರಕಿಹೊಳಿ ಅವರಿಗೆ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಪ್ರಾಧ್ಯಾಪಕರ ವೇದಿಕೆ ವತಿಯಿಂದ ಮನವಿಯನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕರ ಅಧ್ಯಕ್ಷರಾದ ಶ್ರೀ ಮದಕರಿ ನಾಯಕ ಪದಾಧಿಕಾರಿಗಳಾದ ಜಯಶ್ರೀ ಹಂಚಿನಮನಿ ಪ್ರಮೋದ ಜಾಧವ ಕುಲಮೂರ, ಮರಿಯಪ್ಪಗೋಳ ಹಾಗೂ ಇತರರು ಉಪಸ್ಥಿತರಿದ್ದರು.